ಕಾಂಗ್ರೆಸ್ ಕಚೇರಿ ಇರುವ ಕಟ್ಟಡ ಸೇರಿ 5 ಸ್ಥಳಗಳಲ್ಲಿ ಇಡಿ ದಾಳಿ

ಮಂಗಳೂರು, ಜನವರಿ 11: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಮಂಗಳೂರಿನ ಕಾಂಗ್ರೆಸ್‌ ಕಚೇರಿ ಇರುವ ಕಟ್ಟಡ ಸೇರಿ ಐದು ಸ್ಥಳಗಳಲ್ಲಿ ಶೋಧ ನಡೆಸಿದೆ. ಇದಲ್ಲದೆ, ಸ್ಫೋಟದ ಪ್ರಮುಖ ಶಂಕಿತ ಆರೋಪಿ ಶಾರಿಕ್‌ನ ಶಿವಮೊಗ್ಗದ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ ಶಾರಿಕ್ ಅವರ ಕುಟುಂಬವನ್ನು ಹುಡುಕಲಾಗುತ್ತಿದೆ. ಸದರಿ ಮನಿ ಲಾಂಡರಿಂಗ್ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಎಫ್‌ಐಆರ್ ಅನ್ನು ಆಧರಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವ ಭಾಗವಾಗಿ ಇಡಿ ಅಧಿಕಾರಿಗಳು ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಇರುವ ಕಟ್ಟಡದ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ED attack in 5 places including Congress office building

ಮೂಲಗಳ ಪ್ರಕಾರ, ಸಂಸ್ಥೆಯು ಆ ಕಟ್ಟಡದಲ್ಲಿ ಶೋಧ ಕಾರ್ಯ ನಡೆಸಿದೆ. ಆದರೆ ಯಾವುದೇ ರಾಜಕೀಯ ಪಕ್ಷದ ಕಚೇರಿಯಲ್ಲಿ ಯಾವುದೇ ದಾಳಿ ನಡೆಸಲಾಗಿಲ್ಲ. ಬದಲಿಗೆ ಬೇರೆ ಕೆಲವೆಡೆ ಶೋಧ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ನವೆಂಬರ್ 19ರಂದು ಮಂಗಳೂರು ಹೊರವಲಯದಲ್ಲಿ ಆಟೋ ರಿಕ್ಷಾದಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ತ್ರಿಚಕ್ರ ವಾಹನದಲ್ಲಿ ಸ್ಫೋಟಕಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿ ಮೊಹಮ್ಮದ್ ಶಾರಿಕ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.

ಅವನು ಸ್ಫೋಟದಿಂದ 40 ಪ್ರತಿಶತದಷ್ಟು ಸುಟ್ಟಗಾಯಗಳಿಂದ ಗಾಯಗೊಂಡಿದ್ದನು. ಪೊಲೀಸರ ಪ್ರಕಾರ, ಶಾರಿಕ್ ಮತ್ತು ಅವನ ಸಹಚರರು ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನಿಂದ ಪ್ರೇರಿತರಾಗಿದ್ದರು. ಟೆಲಿಗ್ರಾಮ್ ಸಂದೇಶ ಅಪ್ಲಿಕೇಶನ್ ಮೂಲಕ ಅದರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಿದ್ದರು.

ಟೆಲಿಗ್ರಾಮ್‌ಗ ಭಾರತದ ಹೊರಗಿನ ಅವರ ಹ್ಯಾಂಡ್ಲರ್‌ಗಳು ಬಾಂಬ್ ತಯಾರಿಸಲು ಮಾರ್ಗದರ್ಶನ ನೀಡಲು ದಾಖಲೆಯನ್ನು ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಖಲೆಯನ್ನು ಬಳಸಿಕೊಂಡು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯ ದಡದಲ್ಲಿ ಬಾಂಬ್ ತಯಾರಿಸಿ ಪ್ರಯೋಗ ನಡೆಸಲಾಗಿತ್ತು. ಕರ್ನಾಟಕದಾದ್ಯಂತ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗುವ ಯೋಜನೆ ಇದಾಗಿತ್ತಿ ಎಂದು ರಾಜ್ಯ ಪೊಲೀಸರು ಹೇಳಿದ್ದರು.

ಕಳೆದ ವರ್ಷ ಆಗಸ್ಟ್ 15 ರಂದು ಶಿವಮೊಗ್ಗದಲ್ಲಿ ಹಿಂದುತ್ವ ಸಿದ್ಧಾಂತವಾದಿ ವಿಡಿ ಸಾವರ್ಕರ್ ಸಮಾರಂಭದ ಹಿಂಸಾಚಾರದ ಕಾರಣ ಪೊಲೀಸರು ಐಎಸ್ ಪ್ರೇರಿತ ಭಯೋತ್ಪಾದಕ ಘಟಕವನ್ನು ಪತ್ತೆಹಚ್ಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+