Get Updates
Get notified of breaking news, exclusive insights, and must-see stories!

ರಾಹುಲ್ ಗಾಂಧಿಗೆ ಚುನಾವಣೆ ಆಯೋಗದಿಂದ ನೋಟಿಸ್, ಕಾರಣವೇನು?

ಬೆಂಗಳೂರು, ಆಗಸ್ಟ್ 10: ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಎರಡು ಭಾರಿ ಮತ ಚಲಾಯಿಸಲಾಗಿದೆ ಎಂದು 'ಮತಗಳ್ಳತನ' ಹೆಸರಿನಲ್ಲಿ ಸಂಸದ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗಂಭೀರ ಆರೋಪ ಮಾಡಿದ್ದರು. ಈ ವಿಚಾರದ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಆಡಳಿತ ಮತ್ತು ವಿಪಕ್ಷಗಳ ಮಧ್ಯ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ಭಾರತೀಯ ಚುನಾವಣೆ ಆಯೋಗವೇ ಆರೋಪ ಮಾಡಿದ್ದ ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿದೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಬೆಂಗಳೂರಿನ ಮತದಾರ ಪಟ್ಟಿಯಲ್ಲಿ ಮತಗಳ್ಳತನ ನಡೆದಿದೆ. ಎರಡು ಬಾರಿ ಮತ ಚಲಾಯಿಸಲಾಗಿದೆ ಎಂದೆಲ್ಲ ಆರೋಪ ಮಾಡಿದ್ದಾರೆ. ಭಾರತೀಯ ಚುನಾವಣೆ ಆಯೋಗ ವಿರುದ್ಧವು ಹರಿಹಾಯ್ದಿದ್ದರು. ಈ ಸಂಬಂಧ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಸೂಚಿಸಿ ಚುನಾವಣೆ ಆಯೋಗ ರಾಹುಲ್ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿದೆ.

EC Issues Notice to Rahul Gandhi Over Karnataka Voter Fraud Allegations

ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವನ್ನು ಖಚಿತಪಡಿಸಿಕೊಳ್ಳಲು 1,00,250 "ನಕಲಿ ಮತಗಳನ್ನು" ಸೃಷ್ಟಿಸಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಅವರು ಆಗಸ್ಟ್ 07ರಂದು ದಾಖಲೆ ಬಿಡುಗಡೆ ಮಾಡಿದ್ದರು. ಅವರ ದಾಖಲೆಗಳು ಸಂಪೂರ್ಣ ತನಿಖೆ ಆಗಲಿದೆ ಎಂದು ಹೇಳಿದ್ದ ಚುನಾವಣೆ ಆಯೋಗ ಅವರಿಂದ ಸಾಕ್ಷ್ಯ ಕೇಳಿ ನೋಟಿಸ್ ನೀಡಿದೆ.

ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ, ಶುಕುನ್ ರಾಣಿ ಎಂಬುವವರು ಎರಡು ಬಾರಿ ಮತ ಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ವಿಚಾರಣೆ ಮಾಡಿದ ಸಂದರ್ಭದಲ್ಲಿ ಅವರು ಒಂದೇ ಬಾರಿ ನಿಯಮದಂತೆ ಮತದಾನ ಹಕ್ಕು ಚಲಾಯಿಸಿದ್ದಾರೆ.

ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ನೋಟಿಸ್‌ನಲ್ಲಿ 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20 (3) (ಬಿ) ಅಡಿಯಲ್ಲಿ ನಿಮ್ಮ ಆರೋಪಗಳಿಗೆ ದಾಖಲೆ ಸಲ್ಲಿಸಬೇಕು. ಟಿಸ್ ನೀಡಲಾಗಿರುವ ಪ್ರತಿಯೊಂದು ಹಕ್ಕು ಅಥವಾ ಆಕ್ಷೇಪಣೆಯ ಬಗ್ಗೆ ನೋಂದಣಿ ಅಧಿಕಾರಿ ಬಳಿಕ ದಾಖಲೆ ನೀಡಬೇಕು. ಆಕ್ಷೇಪಕ ಅಥವಾ ಆಕ್ಷೇಪಣೆ ವ್ಯಕ್ತಪಡಿಸಿದ ವ್ಯಕ್ತಿಯನ್ನು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಕೇಳಬಹುದೆಂದು ನಿಯಮ ಹೇಳುತ್ತದೆ ಎಂದು ಇಸಿಐ ತಿಳಿಸಿದೆ.

ನಿಯಮಗಳ ಪ್ರಕಾರ, ಮತದಾರರ ಪಟ್ಟಿ ಪ್ರಕಟವಾದ 30 ದಿನಗಳ ಒಳಗೆ ದೂರು ಸಲ್ಲಿಸಬೇಕಾಗಿರುತ್ತದೆ. ಇಲ್ಲಿ ಅದು ಆಗಿಲ್ಲ. ರಾಹುಲ್ ಗಾಂಧಿ ತೋರಿಸಿದ ಮತಗಟ್ಟೆಯಲ್ಲಿ ಅಧಿಕಾರಿ ನೀಡಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ನೀವು ಆಯೋಗದ ಮುಂದೆ ದಾಖಲೆ ನೀಡಿದರೆ ಅದರ ಆಧಾರದಲ್ಲಿ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದರಾ ಅಥವಾ ಬೇರೆಯವರು ಮತ ಚಲಾಯಿಸಿದರಾ ಎಂಬುದುನ್ನು ಖಚಿತಪಡಿಸಿಕೊಳ್ಳಬಹುದೆಂದು ಆಯೋಗವು ನೋಟಿಸ್‌ನಲ್ಲಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+