ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆನೋವು, ಖಿನ್ನತೆ, ಮರೆವಿಗೆ ಚಿಕಿತ್ಸೆ ಪಡೆದಿದ್ದ ಗಣಪತಿ

By Mahesh
|
Google Oneindia Kannada News

ಮಡಿಕೇರಿ/ಮಂಗಳೂರು, ಜುಲೈ 10: ಮಂಗಳೂರಿನ ಡಿವೈಎಸ್ಪಿಯಾಗಿದ್ದ ಎಂ.ಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಸಿಐಡಿ ತಂಡಗಳು ತನಿಖೆಯನ್ನು ತೀವ್ರಗೊಳಿಸಿವೆ. ಭಾನುವಾರದ ಬೆಳವಣಿಗೆಗಳ ಅಪ್ಡೇಟ್ಸ್ ಇಲ್ಲಿವೆ.

DYSP MK Ganapathi Suicide Case

* ಇತ್ತೀಚೆಗೆ ತಲೆನೋವು, ಖಿನ್ನತೆ, ಮರೆವಿಗೆ ಚಿಕಿತ್ಸೆ ಪಡೆದಿದ್ದ ಗಣಪತಿ ಅವರ ಮಾನಸಿಕ ಸ್ಥಿತಿ ಅಷ್ಟೇನೂ ಹದಗೆಟ್ಟಿರಲಿಲ್ಲ ಎಂದು ಮಂಗಳೂರಿನ ಡಾ. ಕಿರಣ್ ಕುಮಾರ್ ತಿಳಿಸಿದ್ದಾರೆ.

* ಸೋಮವಾರಪೇಟೆ ತಾಲ್ಲೂಕಿನ ರಂಗಸಮುದ್ರ ಗ್ರಾಮದ ಜಾಜಿವಿಲಾ ಎಸ್ಟೇಟ್‌ನ ಗಣಪತಿ ಅವರ ನಿವಾಸಕ್ಕೆ ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಅಪ್ಪಚ್ಚು ರಂಜನ್ ಭೇಟಿ ಕೊಟ್ಟರು. ಗಣಪತಿ ಅವರ ಸಾವಿನ ಬಗ್ಗೆ ಕಲಾಪದಲ್ಲಿ ಚರ್ಚಿಸುವುದಾಗಿ ಘೋಷಣೆ.

* ಸಿಐಡಿ ತಂಡದಿಂಡ ಗಣಪತಿ ಪತ್ನಿ ಪವನಾ, ಪುತ್ರರಾದ ನೇಹಲ್, ಸಾಹಿಲ್, ಸಹೋದರರಾದ ರಾಮನಗರ ಡಿವೈಎಸ್ಪಿ ಎಂ.ಕೆ.ತಮ್ಮಯ್ಯ, ಎಂ.ಕೆ.ಮಾಚಯ್ಯ ಸೇರಿ ಕುಟುಂಬದ ಸದಸ್ಯರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹ.

* ಭಾನುವಾರದಂದು ಶ್ರೀವಿನಾಯಕ ಲಾಡ್ಜ್ ಗೆ ಸಿಐಡಿ ತನಿಖಾ ತಂಡ ಹಾಗೂ ಬ್ಯಾಲೆಸ್ಟಿಕ್ ತಂಡ ಭೇಟಿ ನೀಡಿದೆ.

* ಮಡಿಕೇರಿಯಲ್ಲಿ ಸಿಐಡಿ ಎಸ್ ಪಿ ಕುಮಾರಸ್ವಾಮಿ ನೇತೃತ್ವದ ತಂಡ ಬೀಡು ಬಿಟ್ಟಿದೆ.[ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿ : ಓದುಗರ ಒಕ್ಕೊರಲ ಕೂಗು]

* ಶ್ರೀವಿನಾಯಕ ಲಾಡ್ಜ್ ನ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಹಾಸಿಗೆಗೆ ಫೈರಿಂಗ್ ಮಾಡಿದ್ದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡ ರೂಮ್ ನಂಬರ್ 315 ನ ಪರಿಶೀಲನೆ ಸಾಗಿದೆ.[ಎಂ.ಕೆ.ಗಣಪತಿ ಆತ್ಮಹತ್ಯೆ, ನ್ಯಾಯಾಂಗ ತನಿಖೆ]

* ಮಂಗಳೂರಿನಲ್ಲಿ ಹೇಮಂತ್ ನಿಂಭಾಳ್ಕರ್ ಅವರ ತಂಡದಿಂದ ಗಣಪತಿ ಅವರ ಸಹದ್ಯೋಗಿಗಳ ವಿಚಾರಣೆ ಮುಂದುವರೆದಿದೆ.

ವರದಿ ಯಾವಾಗ?: ವೃತ್ತಿ ಮತ್ತು ಕೌಟುಂಬಿಕ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸಿಐಡಿ ತಂಡದಿಂದ ವರದಿ ನಿರೀಕ್ಷೆಯಿದೆ. ಮತ್ತೊಂದು ಎಫ್ ಐಆರ್ ದಾಖಲಿಸುವ ಸಾಧ್ಯತೆಯೂ ಇದೆ.

ಆದರೆ, ಕೌಟುಂಬಿಕ ಸಮಸ್ಯೆ ಇರಲಿಲ್ಲ ಎಂದು ಗಣಪತಿ ಅವರ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳು, ಮಾಜಿ ಗೃಹ ಸಚಿವರ ಹೆಸರನ್ನು ಪ್ರಸ್ತಾಪಿಸಿ, ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳ ಮೇಲೆ ಇಡೀ ರಾಜ್ಯ ಸಿಡಿದೇಳುವಂತೆ ಮಾಡಿದೆ.

'ನನಗೆ ಮುಂದೆ ಏನಾದರೂ ಆದರೆ ಅದಕ್ಕೆ ಲೋಕಾಯುಕ್ತ ಐಜಿಪಿ ಪ್ರಣಬ್‌ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಸಚಿವ ಕೆ.ಜೆ.ಜಾರ್ಜ್ ಅವರೇ ಕಾರಣ' ಎಂದು ಹೇಳಿ ಎಂ.ಕೆ.ಗಣಪತಿ ಅವರು ಜುಲೈ 7 ರಂದು ಮಡಿಕೇರಿಯ ಶ್ರೀವಿನಾಯಕ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿನ ಗಣಪತಿ ಅವರ ತಂದೆಯ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.

English summary
DYSP MK Ganapathi Suicide Case : CID investigation team is in Madikeri, Mangaluru and collecting information and likely to report latest by Monday. Mangaluru Deputy Superintendent of Police (DySP) M.K. Ganapathi committed suicide in Madikeri on July 7, 2016 his lastt rites held in Kodagu on July 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X