ಆದೇಶ ಆದರೂ ಶೂನ್ಯ ಬಡ್ಡಿದರದಲ್ಲಿ ಸಾಲ ರೈತರಿಗೆ ಸಿಗುತ್ತಿಲ್ಲ: ಬಿಜೆಪಿ ಕಿಡಿ

ಬೆಂಗಳೂರು, ಅಕ್ಟೋಬರ್ 03: ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿಲ್ಲ. ರಾಜ್ಯದ ಜನರ ಮುಂದೆ ಗ್ಯಾರಂಟಿಗಳ ಪುಂಗಿ ಊದಿ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದೀಗ ಕಿವಿ ಮೇಲೆ ಲಾಲ್‌ಬಾಗ್‌ ಇಟ್ಟು ತಮಾಷೆ ನೋಡುತ್ತಿದೆ ಎಂದು ಕರ್ನಾಟಕ ಬಿಜೆಪಿ ವಾಗ್ದಾಳಿ ನಡೆಸಿದೆ.

ಗ್ಯಾರಂಟಿ ಯೋಜನೆಗಳಿಂದ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎನ್ನಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತರಿಗೆ ಶೂನ್ಯ ಬಡ್ಡಿದರ ಬೆಳೆಸಾಲವನ್ನು, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಸರ್ಕಾರ ಅನುದಾನದ ಕೊರತೆಯಿಂದ ಸಹಕಾರ ಸಂಘಗಳ ಮೂಲಕ ನೀಡುವ ಸಾಲವನ್ನು ರೈತರಿಗೆ ಕೊಡದೆ ಸಂಕಷ್ಟಕ್ಕೆ ದೂಡಿದೆ.

government-cheat-farmers-by-not-giving-loans

ಸರ್ಕಾರದ ಖಜಾನೆಯನ್ನು ಗುಡಿಸಿ ಗುಂಡಾಂತರ ಮಾಡಿರುವ ಕಾಂಗ್ರೆಸ್, ಗ್ಯಾರಂಟಿಗಳ ಆದೇಶವನ್ನು ಕೇವಲ ಕಾಗದದ ಮೇಲೆ ಸೀಮಿತಗೊಳಿಸಿ ಜನರಿಗೆ ವಂಚಿಸುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಹಾಗಾದರೆ ರೈತರಿಗೆ ಉದ್ದೇಶಿತ ಶೂನ್ಯ ಬಡ್ಡಿದರ ಮೆಲೆ ಸಾಲ ಸೌಲಭ್ಯ ಸಿಗುತ್ತಿಲ್ಲವೇ? ಎಂಬುದು ಪ್ರಶ್ನೆಯಾಗಿದೆ.

ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ

ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ಬೆಳೆ ಸಾಲದ ಮಿತಿ ಅನ್ನು ಶೇಕಡಾ ಮೂರರಿಂದ ಐದು ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ಈ ಸಂಬಂಧ ಅಧಿಕೃತ ಆದೇಶವಾದರೂ ಸಹಿತ ರೈತರಿಗೆ ಈ ಯೋಜನೆ ಲಾಭ ಸಿಕ್ಕಿಲ್ಲ.

ಅನುದಾನ ಕೊರತೆಯಿಂದ ಹೆಚ್ಚುವರಿ ಸಾಲದ ಮೊತ್ತ ವಿತರಣೆಯಲ್ಲಿ ಗೊಂದಲವಾಗಿದೆ ಎಂದು ತಿಳಿದು ಬಂದಿದೆ. ಶೇಕಡಾ 3ರ ಬಡ್ಡಿ ದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿ 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ನಿಗದಿತ ಕಾಲ ಮಿತಿಯಲ್ಲಿ ಪಾವತಿಸದಿದ್ದರೆ ಬಡ್ಡಿ ಏರಿಕೆ ಆಗಲಿದೆ.

ಸದ್ಯ ಪ್ರಸಕ್ತ 2023ರ ಏಪ್ರಿಲ್ 1ರಿಂದ ಮುಂದಿನ ವರ್ಷದ ಮಾ. 31ರ ಅವಧಿಯಲ್ಲಿ ಸಾಲ ಪಡೆದವರಿಗೆ ಮಾತ್ರ ಈ ಬಡ್ಡಿದರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಸರ್ಕಾರದ ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲದ್ದರಿಂದ ಸಹಕಾರಿ ಬ್ಯಾಂಕ್‌ಗಳು ಸಾಲ ಹಂಚಿಕೆಯಲ್ಲಿ ಗೊಂದಲದಲ್ಲಿವೆ. ಅಲ್ಲದೇ ಹೆಚ್ಚುವರಿ ಘೋಷಣೆಗೆ ಹೆಚ್ಚುವರಿ ಅನುದಾನ ನೀಡಬೇಕಾದ ಸರ್ಕಾರ ಅನುದಾನ ಕೊರತೆ ಎದುರಿಸುತ್ತಿದೆ.

ಈದೆಲ್ಲ ಅಂಶಗಳನ್ನು ಪ್ರಸ್ತಾಪಿಸಿರುವ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಆಡಳಿತ ಬಗ್ಗೆ ನಿರಂತರವಾಗಿ ಕಿಡಿ ಕಾರುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಜಾರಿಗೆ ತಂದ ಸೌಲಭ್ಯಗಳು ಈ ಸರ್ಕಾವು ವಂಚಿಸುತ್ತದೆ ಎಂದು ಬಿಜೆಪಿ ದೂರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+