ರೈತರಿಗೆ ಬಿಗ್ ಶಾಕ್; ಬರ ಪರಿಹಾರ ಬಂದ್ರು ಕೈಗೆ ಮಾತ್ರ ಸಿಗ್ತಿಲ್ಲ: ಏನಿದು ಸಂಕಷ್ಟ?
ಬೆಂಗಳೂರು, ಮೇ 15: ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿತ್ತು. ಮಳೆ ಬೆಳೆ ಇಲ್ಲದೆ ಬರಗಾಲದಿಂದ ರಾಜ್ಯದ ಜನತೆ ರೋಸಿ ಹೋಗಿದ್ದು, ಕರ್ನಾಟಕ ಸರ್ಕಾರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಇತ್ತ ರೈತರ ಖಾತೆಗೆ ಬರ ಪರಿಹಾರ ಬಂದರು ಅದು, ರೈತರ ಕೈ ಸೇರದಾಗಿದೆ.
ಹೌದು, ಬರ ಪರಿಹಾರ ರೈತರ ಖಾತೆಗೆ ಜಮಾ ಆದ ಬರ ಪರಿಹಾರದ ಮೊತ್ತವನ್ನು ಬ್ಯಾಂಕುಗಳು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುತ್ತಿವೆ. ಹೀಗಾಗಿ ಬರ ಪರಿಹಾರ ಬಂದರು ಅದು ರೈತರ ಕೈ ಸೇರದಾಗಿದ್ದು, ಇದೀಗ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ಸಂಕಷ್ಟಕ್ಕೆ ಸಿಲುಕಿದ ರೈತರಿಗಾಗಿ ಬರ ಪರಿಹಾರವನ್ನ ಬಿಡುಗಡೆ ಮಾಡಿದೆ. ಆದರೆ, ಆ ಬರ ಪರಿಹಾರದ ಬಳ ಸಾಲದ ಖಾತೆಗೆ ಜಮಾವಾಗುತ್ತಿದೆ.

ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500 ರೂ, ನೀರಾವರಿಗೆ 17,000 ರೂ., ಬಹುವಾರ್ಷಿಕ/ ತೋಟಗಾರಿಕೆ ಬೆಳೆಗೆ 22,500 ರೂ.ವರೆಗೆ ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ. ರಾಜ್ಯ ಸರ್ಕಾರ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತ ಜಮಾ ಆಗುವಂತೆ ಮಾಡಿದೆ. ಆದರೆ, ಈ ಪರಿಹಾರದ ಹಣವನ್ನು ಬ್ಯಾಂಕುಗಳಲ್ಲಿ ರೈತರ ಉಳಿತಾಯ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗಳಿಗೆ ಜಮಾ ಮಾಡಿಕೊಳ್ಳುತ್ತಿದ್ದು, ಇತ್ತ ಬರ ಪರಿಹಾರದ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ.
ರೈತರ ಖಾತೆಗೆ ಬಂದ ಬರ ಪರಿಹಾರದ ಮೊತ್ತವನ್ನು ಯಾದಗಿರಿ ಜಿಲ್ಲೆಯ ಹುಣಸಗಿಯ ಪ್ರಗತಿ ಕೃಷ್ಣ ಬ್ಯಾಂಕಿನಲ್ಲಿ ಸಾಲದ ಖಾತೆಗೆ ಜಮಾ ಮಾಡಲಾಗಿದೆ. ಈ ಭಾಗದ ಹಲವು ರೈತರ ಬರ ಪರಿಹಾರದ ಹಣ ಸಾಲದ ಖಾತೆಗೆ ಜಮಾವಾಗಿದ್ದು, ಈ ಕುರಿತು ರೈತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ ವರ್ಷ ಮಳೆ, ಬೆಳೆ ಇಲ್ಲದೆ ಕಂಗಾಲಾಗಿದ್ದ ರೈತನಿಗೆ ಬರ ಪರಿಹಾರದ ಹಣ ಒಂದಿಷ್ಟು ಆಸರೆಯಾಗುತ್ತಿತ್ತು. ಆದರೆ, ಕೆಲವು ಬ್ಯಾಂಕುಗಳು ಬೆಳೆ ಸಾಲಕ್ಕೆ ಹೊಂದಿಸಿಕೊಳ್ಳುತ್ತಿದ್ದು, ಬ್ಯಾಂಕ್ ಗಳ ಈ ನಡೆಯಿಂದ ರೈತರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಇತ್ತ ಸಂಕಷ್ಟದ ಸಮಯದಲ್ಲಿ ಬರ ಪರಿಹಾರದ ಮೊತ್ತ ಕೈಗೆ ಸಿಗದೇ ರೈತರು ರೋಸಿ ಹೋಗಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ಬೆಳೆ ಪರಿಹಾರ ಮೊತ್ತ ದೊರಕಿಸಿಕೊಡಬೇಕೆಂದು ರೈತರು ಒತ್ತಾಯಿಸಿದ್ದಾರೆ












Click it and Unblock the Notifications