ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾರಪೇಟೆಯ 4 ಗ್ರಾಮಗಳಿಗೆ ನೀರಿನ ತಲೆಬಿಸಿ ಇಲ್ಲ

|
Google Oneindia Kannada News

ಬಂಗಾರಪೇಟೆ, ಮಾರ್ಚ್, 07: ಕುಡಿಯುವ ನೀರಿಗೆ ಆಗ್ರಹಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಅನ್ನದಾತರು ರಾಜಧಾನಿಗೆ ಧಾವಿಸಿದ್ದರು. ಅವರ ಮೇಲೆ ಪೊಲೀಸರು ಮತ್ತು ಸರ್ಕಾರ ನಡೆಸಿದ ಲಾಠಿ ಚಾರ್ಜ್ ಬಾರೀ ಸುದ್ದಿಯಾಗಿತ್ತು.

ಇದೆಲ್ಲವನ್ನು ಅರಿತ ಸ್ವಯಂ ಸೇವಾ ಸಂಸ್ಥೆ ಯುನೈಟೆಡ್ ವೇ ರೈತರಿಗೆ ಶುದ್ಧ ಕುಡಿಯುವ ನೀರು ನೀಡಲು ಮುಂದಾಗಿದೆ. ಸರ್ಕಾರಿ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ನೆರವಿನಲ್ಲಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ನಾಲ್ಕು ಗ್ರಾಮಗಳು ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತಿ ಹೊಂದಲಿವೆ.["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]

Drinking Water units for Kolar District

ಸುಮಾರು ನಾಲ್ಕು ಸಾವಿರ ಜನರ ದಾಹವನ್ನು ತೀರಿಸಲು ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಿದೆ. ಬಂಗಾರಪೇಟೆಯ ಡಿ ಹೊಸ ಮನೆಗಳು, ರಾಮಸಂದ್ರ, ಆಯನೂರು ಹೊಸಹಳ್ಳಿ, ಕೊಟರಮಗೊಳ್ಳು ಗ್ರಾಮಗಳಿಗೆ ಶುದ್ಧ ಕುಡಿವ ನೀರು ಸಿಗಲಿದೆ.[ರೈತರಿಗೆ ಲಾಠಿ ರುಚಿ ತೋರಿಸಿದ ಸರ್ಕಾರಕ್ಕೆ ಪ್ರತಿಪಕ್ಷಗಳ ಚಾರ್ಜ್]

ಶುದ್ಧ ಕುಡಿಯುವ ನೀರಿನ ಘಟಕಗಳ ಉದ್ಘಾಟನೆ ಗುರುವಾರ, ಮಾರ್ಚ್ 8 ರಂದು ಬೆಳಗ್ಗೆ 9.30 ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ
ರೀನಾ ಪಿಲ್ಲಲಿ, 9242788750, ಇಮೇಲ್ [email protected]ನ್ನು ಸಂಪರ್ಕಿಸಬಹುದು

English summary
Kolar: Applied Materials and United Way Bengaluru inaugurate four safe drinking water units at Bangarpet Taluk in Kolar, on Tuesday 8th March. This sustainable initiative will provide pure drinking water to over 4,000 people here on a day to day basis. Along with safe drinking water, the Integrated Rural Development project also covers women empowerment and educational support for children from rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X