ನೈಋತ್ಯ ರೈಲ್ವೆ ಪ್ರಕಟಣೆ; ಹಲವು ರೈಲುಗಳ ಸಂಚಾರ ರದ್ದು
ದಾವಣಗೆರೆ, ಮಾರ್ಚ್ 01: ಮೈಸೂರು ವಿಭಾಗದ ಅರಸೀಕೆರೆ ಮತ್ತು ತುಮಕೂರು ವಿಭಾಗದಲ್ಲಿ ರೈಲು ಹಳಿ ಡಬ್ಲಿಂಗ್ ಕೆಲಸದ ಕಾಮಗಾರಿಯ ಕಾರಣದಿಂದಾಗಿ ಹಲವು ರೈಲುಗಳ ಸಂಚಾರ ರದ್ದಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಹೊರಡಿಸಿದೆ.
ಮಾರ್ಚ್ 2ರ ಸೋಮವಾರದಿಂದ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರೈಲು ಪ್ರಯಾಣ ಮಾಡುವ ಆಲೋಚನೆಯಲ್ಲಿರುವ ಜನರು ಈ ಕುರಿತ ಮಾಹಿತಿಯನ್ನು ತಿಳಿಯಬೇಕಿದೆ.
ಕರ್ನಾಟಕದಲ್ಲಿ ಮಾ.22ರಿಂದ ಗೋಲ್ಡನ್ ಚಾರಿಯೆಟ್ ರೈಲು ಸೇವೆ ಶುರು
ರೈಲು ಸಂಖ್ಯೆ 56913 ಕೆಎಸ್‍ಆರ್ ಬೆಂಗಳೂರು-ಅರಸೀಕೆರೆ ಮಾರ್ಗವಾಗಿ ಹುಬ್ಬಳಿ ತಲುಪುವ ಪ್ಯಾಸೆಂಜರ್ ಗಾಡಿಯೂ ಮಾರ್ಚ್ 2ರಂದು ರದ್ದಾಗಿರುತ್ತದೆ. ಮಾ.2 ಮತ್ತು 3 ರಂದು 56914 ಕೆಎಸ್‍ಆರ್- ಹುಬ್ಬಳ್ಳಿಯಿಂದ ಅರಸೀಕೆರೆ ಮಾರ್ಗವಾಗಿ ಬೆಂಗಳೂರು ತಲುಪುವ ಪ್ಯಾಸೆಂಜರ್ ರೈಲುಗಾಡಿ ರದ್ದಾಗಿರುತ್ತದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ
ಮಾರ್ಚ್ 2 ಮತ್ತು 3 ರಂದು ರೈಲು ಸಂಖ್ಯೆ 56515/56516 ಕೆಎಸ್‍ಆರ್ ಬೆಂಗಳೂರು-ಹುಬ್ಬಳಿ-ಕೆಎಸ್‍ಆರ್ ಎರಡು ಕಡೆಯ ಮಾರ್ಗದ ರೈಲು ರದ್ದಾಗಿರುತ್ತದೆ. ಮಾ.2 ರಂದು ರೈಲು ಸಂಖ್ಯೆ 56909/56910 ಕೆಎಸ್‍ಆರ್ ಬೆಂಗಳೂರು-ಹೊಸಪೇಟೆ ತಲುಪುವ ಪ್ಯಾಸೆಂಜರ್ ಗಾಡಿಯೂ ರದ್ದಾಗಿರುತ್ತದೆ.
ಬೆಂಗಳೂರು-ಕರಾವಳಿ ನಡುವೆ ಹೊಸ ರೈಲು ಘೋಷಣೆ

ರೈಲು ಸಂಚಾರ ರದ್ದು
* ಮಾ.2 ಮತ್ತು 3 ರಂದು ರೈಲು ಸಂಖ್ಯೆ 56911 ಕೆಎಸ್‍ಆರ್ ಬೆಂಗಳೂರುನಿಂದ ಹುಬ್ಬಳಿ ತಲುಪುವ ಪ್ಯಾಸೆಂಜರ್ ರೈಲು ಗಾಡಿಯೂ ರದ್ದಾಗಿರುತ್ತದೆ. ರೈಲು ಸಂಖ್ಯೆ 56912 ಹುಬ್ಬಳಿಯಿಂದ ಕೆಎಸ್‍ಆರ್ ಬೆಂಗಳೂರು ತಲುಪುವ ಪ್ಯಾಸೆಂಜರ್ ರೈಲು ರದ್ದಾಗಿರುತ್ತದೆ.
* ಮಾ. 2 ಮತ್ತು 3 ರಂದು ರೈಲು ಸಂಖ್ಯೆ 56277/56278 ಚಿಕ್ಕಮಂಗಳೂರುನಿಂದ ಯಶವಂತಪುರ ತಲುಪುವ ಹಾಗೂ ಯಶವಂತಪುರದಿಂದ ಚಿಕ್ಕಮಗಳೂರು ತಲುಪುವ ರೈಲು ಗಾಡಿಯೂ ಎರಡು ಕಡೆ ಸಂಚರಿಸುವ ರೈಲು ರದ್ದಾಗಿರುತ್ತದೆ.
* ಮಾ.2 ರಂದು ರೈಲು ಸಂಖ್ಯೆ 56227 ಕೆಎಸ್‍ಆರ್ ಬೆಂಗಳೂರು ನಿಂದ ಶಿವಮೊಗ್ಗ ಟೌನ್ ತಲುಪುವ ಪ್ಯಾಸೆಂಜರ್ ಗಾಡಿ ರದ್ದಾಗಿರುತ್ತದೆ. ಮಾ.3 ರಂದು ರೈಲು ಸಂಖ್ಯೆ 56228 ಶಿವಮೊಗ್ಗ ಟೌನ್ ನಿಂದ ಕೆಎಸ್‍ಆರ್ ಬೆಂಗಳೂರು ತಲುಪುವ ಪ್ಯಾಸೆಂಜರ್ ಗಾಡಿ ರದ್ದು.

ಬೆಂಗಳೂರು ರೈಲು ರದ್ದು
* ಮಾ.2 ರಂದು ರೈಲು ಸಂಖ್ಯೆ 56223 ಕೆಎಸ್‍ಆರ್ ಬೆಂಗಳೂರುನಿಂದ ಅರಸೀಕೆರೆ ತಲುಪುವ ಪ್ಯಾಸೆಂಜರ್ ಗಾಡಿಯೂ ರದ್ದಾಗಿರುತ್ತದೆ. ಮಾ.3 ರಂದು ರೈಲು ಸಂಖ್ಯೆ 56224 ಅರಸೀಕೆರೆ ಯಿಂದ ಕೆಎಸ್‍ಆರ್ ಬೆಂಗಳೂರು ತಲುಪುವ ಪ್ಯಾಸೆಂಜರ್ ಗಾಡಿ ರದ್ದು.
* ಮೈಸೂರಿನಿಂದ ಹೊರಟು ಬೆಳಗಾವಿ ತಲುಪುವ ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ (ವಿಶ್ವಮಾನವ ಎಕ್ಸ್‍ಪ್ರೆಸ್) ಹಾಗೂ ಬೆಳಗಾವಿಯಿಂದ ಹೊರಟು ಮೈಸೂರು ತಲುಪುವ ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು (ವಿಶ್ವಮಾನವ ಎಕ್ಸಪ್ರೆಸ್) ಮಾ. 3 ಮತ್ತು 4 ರಂದು ರದ್ದಾಗಲಿದೆ.
* ಯಶವಂತಪುರದಿಂದ ಹೊರಟು ಶಿವಮೊಗ್ಗ ತಲುಪುವ ಹಾಗೂ ಶಿವಮೊಗ್ಗದಿಂದ ಹೊರಟು ಯಶವಂತಪುರ ತಲುಪುವ ರೈಲು ಸಂಖ್ಯೆ 16579/16580 ಯಶವಂತಪುರ-ಶಿವಮೊಗ್ಗ ಟೌನ್ (ಯಶವಂತಪುರ ಎಕ್ಸ್‌ಪ್ರೆಸ್) ಎರಡು ಕಡೆಯಿಂದ ಹೊರಡುವ ರೈಲುಗಳು ಮಾ. 2ರಂದು ರದ್ದು.
* ಯಶವಂತಪುರದಿಂದ ಹೊರಟು ಶಿವಮೊಗ್ಗ ತಲುಪುವ ಹಾಗೂ ಶಿವಮೊಗ್ಗದಿಂದ ಹೊರಟು ಯಶವಂತಪುರ ತಲುಪುವ ರೈಲು ಸಂಖ್ಯೆ 06539/06540 ಯಶವಂತಪುರ-ಶಿವಮೊಗ್ಗ ಟೌನ್ (ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್) ಎರಡು ಕಡೆಯಿಂದ ಹೊರಡುವ ರೈಲುಗಳು ವಿಶೇಷ ರೈಲುಗಳು ಮಾ. 3 ರಂದು ರದ್ದು.

ರದ್ದಾಗಿರುವ ರೈಲುಗಳ ಮಾಹಿತಿ
* ಯಶವಂತಪುರದಿಂದ ಹೊರಟು ಶಿವಮೊಗ್ಗ ತಲುಪುವ ಹಾಗೂ ಶಿವಮೊಗ್ಗದಿಂದ ಹೊರಟು ಯಶವಂತಪುರ ತಲುಪುವ ರೈಲು ಸಂಖ್ಯೆ 12089/12090 ಯಶವಂತಪುರ-ಶಿವಮೊಗ್ಗ ಟೌನ್ (ಯಶವಂತಪುರ ಜನಶತಾಬ್ದಿ ಎಕ್ಸ್‍ಪ್ರೆಸ್) ಎರಡು ಕಡೆಯಿಂದ ಹೊರಡುವ ರೈಲುಗಳು ಮಾ. 2 ರಂದು ರದ್ದಾಗಲಿದೆ.
* ಬೆಂಗಳೂರುನಿಂದ ಹೊರಟು ಶಿವಮೊಗ್ಗ ತಲುಪುವ ಹಾಗೂ ಶಿವಮೊಗ್ಗದಿಂದ ಹೊರಟು ಬೆಂಗಳೂರು ತಲುಪುವ ರೈಲು ಸಂಖ್ಯೆ 56917/56918 ಕೆಎಸ್‍ಆರ್ ಬೆಂಗಳೂರು-ಶಿವಮೊಗ್ಗ ಟೌನ್ (ಕೆಎಸ್‍ಆರ್ ಬೆಂಗಳೂರು ಪ್ಯಾಸೆಂಜರ್) ಎರಡು ಕಡೆಯಿಂದ ಹೊರಡುವ ರೈಲುಗಳು ಮಾ. 2 ಮತ್ತು 3 ರಂದು ರದ್ದಾಗಲಿದೆ.
* ತಾತ್ಕಾಲಿಕವಾಗಿ ರದ್ದು : ಚಿತ್ರದುರ್ಗದಿಂದ ಹೊರಟು ಯಶವಂತಪುರ ತಲುಪುವ ರೈಲು ಸಂಖ್ಯೆ 56520 ಚಿತ್ರದುರ್ಗ-ಯಶವಂತಪುರ ಪ್ಯಾಸೆಂಜರ್ ರೈಲು ಮಾ.2 ರಂದು ತಾತ್ಕಾಲಿಕವಾಗಿ ಅರಸೀಕೆರೆಯಿಂದ ರದ್ದಾಗಲಿದೆ.
* ತಾಳಗುಪ್ಪದಿಂದ ಹೊರಟು ಕೆಎಸ್‍ಆರ್ ಬೆಂಗಳೂರು ತಲುಪುವ ರೈಲು ಸಂಖ್ಯೆ 20652 ತಾಳಗುಪ್ಪ- ಕೆಎಸ್‍ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮಾ. 3 ರಂದು ತಾಳಗುಪ್ಪದಿಂದ ಹೊರಟು ತಾತ್ಕಾಲಿಕವಾಗಿ ಅರಸೀಕೆರೆಯಲ್ಲಿ ಅಂತ್ಯಗೊಳ್ಳಲಿದೆ.
* ಕೆಎಸ್‍ಆರ್ ಬೆಂಗಳೂರಿನಿಂದ ಹೊರಟು ಧಾರವಾಡ ತಲುಪುವ ರೈಲು ಸಂಖ್ಯೆ 12725 ಕೆಎಸ್‍ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು ಮಾ. 3 ರಂದು ಕೆಎಸ್‍ಆರ್ ಬೆಂಗಳೂರಿನಿಂದ ಹೊರಟು ತಾತ್ಕಾಲಿಕವಾಗಿ ಅರಸೀಕೆರೆಯಿಂದ ಅಂತ್ಯಗೊಳ್ಳಲಿದೆ.

ಮಾರ್ಗ ಬದಲಾವಣೆ
* ಯಶವಂತಪುರದಿಂದ ಹೊರಟು ಬರ್ಮೇರ್ ತಲುಪುವ ರೈಲು ಸಂಖ್ಯೆ 14805 ಯಶವಂತಪುರ-ಬರ್ಮೇರ್ ಎಕ್ಸಪ್ರೆಸ್ ರೈಲು ಮಾ. 2 ರಂದು ಮಾರ್ಗ ಬದಲಾಯಿಸಿ ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆಯಿಂದ ಮಾರ್ಗದಿಂದ ಬರ್ಮೇರ್ ತಲುಪಲಿದೆ.
* ದಾದರದಿಂದ ಹೊರಟು ಪುದುಚೇರಿ ತಲುಪುವ ರೈಲು ಸಂಖ್ಯೆ 11005 ದಾದರ-ಪುದುಚೇರಿ ಎಕ್ಸಪ್ರೆಸ್ ರೈಲು ಮಾ. 1 ರಂದು ಮಾರ್ಗ ಬದಲಾಯಿಸಿ ಅರಸೀಕೆರೆ, ಹಾಸನ, ನೆಲಮಂಗಲ, ಮತ್ತು ಯಶವಂತಪುರದಿಂದ ಮಾರ್ಗದಿಂದ ಪುದುಚೇರಿ ತಲುಪಲಿದೆ.
* ವಾಸ್ಕೋದಿಂದ ಹೊರಟು ಯಶವಂತಪುರ ತಲುಪುವ ರೈಲು ಸಂಖ್ಯೆ 17310 ವಾಸ್ಕೋಡಿಗಾಮ ಯಶವಂತಪುರ ಎಕ್ಸಪ್ರೆಸ್ ರೈಲು ಮಾ.2 ರಂದು ಮಾರ್ಗ ಬದಲಾಯಿಸಿ ಅರಸೀಕೆರೆ, ಹಾಸನ, ನೆಲಮಂಗಲ, ಮತ್ತು ಯಶವಂತಪುರದಿಂದ ಮಾರ್ಗದಿಂದ ಯಶವಂತಪುರ ಸ್ಟೇಷನ್ ತಲುಪಲಿದೆ.
* ರೈಲು ಸಂಖ್ಯೆ 12725 ಮಾ.2 ರಂದು ಕೆಎಸ್‍ಆರ್ ಬೆಂಗಳೂರುನಿಂದ ಧಾರವಾಡ ತಲುಪುವ ಇಂಟರ್ ಸಿಟಿ ಎಕ್ಸ್‍ಪ್ರೆಸ್ ಗಾಡಿಯೂ 45 ನಿಮಿಷ ತಡವಾಗಿ ಬರಲಿದೆ. ಮಾ.2 ರಂದು ರೈಲು ಸಂ 12080 ಹುಬ್ಬಳಿಯಿಂದ ಹೊರುಡುವ ಜನಶಾತಾಬ್ದಿ ಎಕ್ಸ್ ಪ್ರೆಸ್ ರೈಲು ಗಾಡಿಯೂ 80 ನಿಮಿಷ ತಡವಾಗಿ ಬಂದು ಸೇರಲಿದೆ.
* ಮಾ.03 ರಂದು ರೈಲು ಸಂಖ್ಯೆ 12726 ಧಾರವಾಡದಿಂದ ಕೆಎಸ್‍ಆರ್ ಬೆಂಗಳೂರು ತಲುಪುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಗಾಡಿಯೂ 60 ನಿಮಿಷ ತಡವಾಗಿ ಬಂದು ಸೇರಲಿದೆ. ಮಾ.03 ರಂದು ರೈಲು ಸಂ: 56519 ಯಶವಂತಪುರದಿಂದ ಚಿತ್ರದುರ್ಗ ತಲುಪುವ ಯಶವಂತಪುರ ಪ್ಯಾಸೆಂಜರ್ ಗಾಡಿಯೂ 180 ನಿಮಿಷ ತಡವಾಗಿ ಬರಲಿದೆ.
* ಮಾ.2 ರಂದು ರೈಲು ಸಂಖ್ಯೆ 17315 ವಾಸ್ಕೋಡಿಗಾಮದಿಂದ ವೆಲಕಣಿ ಎಕ್ಸ್ ಪ್ರೆಸ್ ಗಾಡಿಯೂ ವಾಸ್ಕೋಡಿಗಾಮವನ್ನು 180 ನಿಮಿಷ ತಡವಾಗಿ ಬಂದು ನಿಲ್ದಾಣವನ್ನು ಸೇರಲಿದೆ. ಮಾ.03 ರಂದು ರೈಲು ಸಂಖ್ಯೆ 16229 ಮೈಸೂರುನಿಂದ ವಾರಣಾಸಿ ಎಕ್ಸ್‍ಪ್ರೆಸ್ ರೈಲು ಗಾಡಿಯೂ ವಾರಣಾಸಿಯನ್ನು 30 ನಿಮಿಷ ತಡವಾಗಿ ಸೇರಲಿದೆ.