• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಂಪ್ ಭಾಷಣದ ಬಗ್ಗೆ ಮೌನವೇಕೆ?; ಮೋದಿಗೆ ಕಾಂಗ್ರೆಸ್ ಪ್ರಶ್ನೆ

|

ಬೆಂಗಳೂರು, ಅಕ್ಟೋಬರ್ 23 : "ಈಗ ಭಾರತದ ಬಗ್ಗೆ ಕೀಳಾಗಿ ಮಾತಾಡಿದ್ದಾರೆ ನಿಮ್ಮ ಸ್ನೇಹಿತ "ದೊಲಾಂಡ್ ಟ್ರಂಪ್"!. ತಾವೀಗ ಮೌನವೇಕೆ?" ಎಂದು ಕರ್ನಾಟಕ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದೆ.

ಅಮೆರಿಕ ಅಧ್ಯಕೀಯ ಚುನಾವಣೆ ಕುರಿತು ನಡೆಯುವ ಚರ್ಚೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾದ ಜೋ ಬೈಡನ್ ಜೊತೆ ಹಲವು ವಿಚಾರಗಳ ಕುರಿತು ಟ್ರಂಪ್ ಚರ್ಚಿಸಿದ್ದರು.

ಭಾರತದ ವಿರುದ್ಧದ ಟ್ರಂಪ್ ಟೀಕೆ ಬೆನ್ನಲ್ಲೇ ಟ್ರೆಂಡ್ ಆಯ್ತು 'ಹೌಡಿ ಮೋದಿ'!

ಚರ್ಚೆಯ ವೇಳೆ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ತೀರ್ಮಾನವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದರು. ಭಾರತ, ಚೀನಾ ಮತ್ತು ರಷ್ಯಾದ ಗಾಳಿ ಹೊಲಸಾಗಿದೆ ಎಂದು ಟೀಕಿಸಿದ್ದರು.

ಭಾರತದ ಗಾಳಿ ಕೊಳಕು ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಶುಕ್ರವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಈ ಬಗ್ಗೆ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಿದೆ. "ತಾವೀಗ ಮೌನವೇಕೆ?. ಕಟುವಾಗಿ ಖಂಡಿಸಿ ನಿಮ್ಮ ದೇಶಭಕ್ತಿ ಸಾಬೀತುಪಡಿಸಿ" ಎಂದು ಸವಾಲು ಹಾಕಿದೆ.

ಅಮೆರಿಕ ಚುನಾವಣೆ: ಕೊನೆಯ ಚರ್ಚೆಯಲ್ಲಿ ಅಭ್ಯರ್ಥಿಗಳ ವಾಗ್ವಾದ

"ನರೇಂದ್ರ ಮೋದಿ ಯವರೇ ಡೊನಾಲ್ಡ್ ಟ್ರಂಪ್ ಪರವಾಗಿ "ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಎಂದು ಘೋಷಿಸಿ ಬಂದಿದ್ದಿರಿ, ಗುಜರಾತಿಗೆ ಕರೆಸಿ ಗೋಡೆ ಕಟ್ಟಿಸಿ "ನಮಸ್ತೆ" ಎಂದಿದ್ದಿರಿ" ಎಂದು ಕಾಂಗ್ರೆಸ್ ಹೇಳಿದೆ.

   Grama Panchayat ಚುನಾವಣೆಗೆ Green ಸಿಗ್ನಲ್!! | Oneindia Kannada

   ಸೆಪ್ಟೆಂಬರ್ 29ರಂದು ಟ್ರಂಪ್ ಮತ್ತು ಜೋ ಬೈಡನ್ ಮೊದಲ ಚರ್ಚೆಯಲ್ಲಿ ಮುಖಾಮುಖಿಯಾಗಿದ್ದರು. ಬಳಿಕ ಟ್ರಂಪ್‌ಗೆ ಕೋವಿಡ್ ಸೋಂಕು ತಗುಲಿದ ಕಾರಣ ಅಕ್ಟೋಬರ್ 23ರಂದು ಎರಡನೇ ಚರ್ಚೆ ನಡೆದಿದೆ. ಇದರಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

   English summary
   America president Donald Trump speech on India. Karnataka Congress question to prime minister Narendra Modi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X