ದಯವಿಟ್ಟು ಬಂಡೀಪುರವನ್ನು ಅದಾನಿಗೆ ಮಾರಬೇಡಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಮನವಿ
ಬೆಂಗಳೂರು, ಏಪ್ರಿಲ್ 09: ಅಮುಲ್ ಹಾಗೂ ನಂದಿನಿ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಕಾಂಗ್ರೆಸ್ ಆಕ್ರೋಶ ಹೊರ ಹಾಕಿದೆ. ಇದೀಗ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಸರಂಕ್ಷಿತಾರಣ್ಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಕಾಲೆಳೆದಿದೆ.
"70 ವರ್ಷದಿಂದ ಕಾಂಗ್ರೆಸ್ ಏನು ಮಾಡಿದೆ" ಎನ್ನುವ @narendramodi ಅವರೇ,
— Karnataka Congress (@INCKarnataka) April 9, 2023
ಇಂದು ನೀವು ಸಫಾರಿ ಮೋಜು ಮಾಡುತ್ತಿರುವ ಬಂಡೀಪುರದ ಹುಲಿ ಸಂರಕ್ಷಣಾ ಯೋಜನೆಯನ್ನು 1973ರಲ್ಲಿ ಜಾರಿಗೊಳಿಸಿದ್ದು ಕಾಂಗ್ರೆಸ್ ಸರ್ಕಾರವೇ.
ಅದರ ಪರಿಣಾಮವೇ
ಇಂದು ಹುಲಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.
ತಮ್ಮಲ್ಲಿ ವಿಶೇಷ ಮನವಿ - ಬಂಡೀಪುರವನ್ನು ಅದಾನಿಗೆ ಮಾರಬೇಡಿ! pic.twitter.com/zppZdLlSTB
ಭಾನುವಾರ ಬಂಡೀಪುರ ರಾಷ್ಟ್ರೀಯ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಸಫಾರಿ ನಡೆಸಿದ್ದಾರೆ. ರಾಷ್ಟ್ರೀಯ ಬಂಡೀಪುರ (ಆಸ್ತಿ) ವನ್ನು ಉದ್ಯಮಿ ಅದಾನಿ ಗ್ರೂಪ್ ಗೆ ಮಾರಾಟ ಮಾಡದಂತೆ ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕ ಮನವಿ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ 1973 ರಲ್ಲಿ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರೀತಿಯ ನರೇಂದ್ರ ಮೋದಿಯವರೇ, 1973 ರಲ್ಲಿ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿಕೊಂಡಿದೆ.
ದಯವಿಟ್ಟು ಬಂಡೀಪುರವನ್ನು ಅದಾನಿ ಮಾರಬೇಡಿ
ಇಂದು ನೀವು ಬಂಡೀಪುರ ಹುಲಿ ಅರಣ್ಯಕ್ಕೆ ಭೇಟಿ ನೀಡಿ ಸಫಾರಿ ಮಾಡಿ ಆನಂದಿಸುತ್ತಿದ್ದೀರಿ. 1973 ರ ಬಂಡೀಪುರ ಹುಲಿ ಸಂರಕ್ಷಣಾ ಯೋಜನೆಯಿಂದಾಗಿ ಇಂದು ಅಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕಾಂಗ್ರೆಸ್ 70ವರ್ಷದಲ್ಲಿ ಏನು ಮಾಡಿದೆ ಎನ್ನು ನೀವು (ನರೇಂದ್ರ ಮೋದಿ) ಇಂದು ಸಫಾರಿ ಮಾಡುತ್ತಿದ್ದೀರಿ. ನಾವು ನಿಮಗೆ ಮಾಡುವ ಮನವಿ ಏನೆಂದರೆ ದಯವಿಟ್ಟು ಬಂಡೀಪುರವನ್ನು ಅದಾನಿಗೆ ಮಾರಬೇಡಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಹಿಂದೆ ಕರ್ನಾಟಕದಲ್ಲಿ ಕೊರೊನಾ ಹೆಚ್ಚಾದಾಗ ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸೋಂಕಿನಿಂದ ಒಂದಷ್ಟು ಕುಟುಂಬಗಳ ಸದಸ್ಯರು ಮೃತಪಟ್ಟಿದ್ದರು. ಅವರನ್ನು ಭೇಟಿ ಮಾಡಲು ಪ್ರಧಾನಿ ಮೋದಿ ಏಕೆ ಹೆದರುತ್ತಾರೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಕೋವಿಡ್ ಮೃತರ ಕುಟುಂಬ ಭೇಡಿ ಮಾಡದ ಮೋದಿ
ಕೋವಿಡ್ ಹಾಗೂ ಬಿಜೆಪಿ ಕರ್ನಾಟಕ ಸರ್ಕಾರದ ದಾಳಿಯ ಸಮಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರೋಗಿಗಳು ಆಮ್ಲಜನಕ (ಆಕ್ಸಿಜನ್) ಪೂರೈಕೆಯ ಕೊರತೆಯಿಂದಾಗಿ 36 ಜನರು ಮೃತಪಟ್ಟರು. ಚಾಮರಾಜನಗರ ಜಿಲ್ಲೆಗೆ ಪ್ರಧಾನಿ ಮೋದಿಯವರು ಬಂದರೂ ಸಹ ಕೋವಿಡ್ ಮೃತರ ಕುಟುಂಬದವರನ್ನು ಭೇಟಿ ಮಾಡುವ ಆಸೆ ಅವರಿಗೆ ಇಲ್ಲ ಏಕೆ?. ಬಿಜೆಪಿ ಇಲ್ಲಿ ಹಿನ್ನಡೆ ಆಗಬಹುದು ಎಂದು ನೀವು ಭಯಪಡುತ್ತೀದ್ದೀರಾ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಧಾನಮಂತ್ರಿಗಳು ಭೇಟಿ ನೀಡಿದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶವು ಭಾಗಶಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಮತ್ತು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲ್ಲೂಕು ವ್ಯಾಪ್ತಿಯಲ್ಲಿದೆ.
ಈ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಎರಡು ಗಂಟೆಗಳ ಕಾಲ ಕಳೆದಿದ್ದಾರೆ. ಸಫಾರಿ ವೇಳೆ ಅವರು ಆನೆಗಳಿಗೆ ಆಹಾರ ನೀಡಿದ್ದಾರೆ. ಇದೇ ವೇಳೆ ಅವರು ₹50 ರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನು ಮುಖ್ಯವಾಗಿ ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ನಿರ್ವಹಣೆ ಹೇಗೆ ನಡೆಯುತ್ತಿದೆ, ಹುಲಿಗಳ ಮೌಲ್ಯಮಾಪನ, ದಾಖಲಾತಿ ಸೇರಿದಂತೆ ಹುಲಿ ಸಂರಕ್ಷಣಾ ವಿಷನ್ ಡಾಕ್ಯುಮೆಂಟ್‌ವೊಂದನ್ನು ಪ್ರಧಾನಮಂತ್ರಿಗಳು ಬಿಡುಗಡೆ ಮಾಡಲಿದ್ದಾರೆ.












Click it and Unblock the Notifications