ಪಿಎಸ್ಐ ಜಗದೀಶ್ ಅಂತ್ಯಕ್ರಿಯೆ: ಯಾರು ಏನು ಹೇಳಿದರು?
ಬೆಂಗಳೂರು, ಅಕ್ಟೋಬರ್, 17: ಬೈಕ್ ಕಳ್ಳರಿಂದ ಹತ್ಯೆಯಾದ ಪಿಎಸ್ ಐ ಜಗದೀಶ್ ಅಂತ್ಯಕ್ರಿಯೆ ನೆಲಮಂಗಲದ ಮಲ್ಲಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಚಿವರು, ರಾಜಕೀಯ ನಾಯಕರು ಜಗದೀಶ್ ಅಂತಿಮ ದರ್ಶನ ಪಡೆದರು. ಕುಟುಂಬಕ್ಕೆ ರಾಜ್ಯ ಸರ್ಕಾರದ ವತಿಯಂದ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.[ಪೊಲೀಸರ ದುಗುಡ-ದುಮ್ಮಾನ ತೆರೆದಿಡುವ ಪೇದೆಯ ಪತ್ರ]
ಸರ್ಕಾರದಿಂದ ಮೃತರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ನಿವೇಶನ ನೀಡಲಾಗುವುದು. ಅಲ್ಲದೆ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ಕೂಡ ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು. ಸಂಸದ ವೀರಪ್ಪ ಮೊಯ್ಲಿ, ವಿರೋಧ ಪಕ್ಷದ ನಾಯಕ ಈಶ್ವರಪ್ಪ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು. ಈ ವೇಳೆ ನಾಯಕರು ಯಾವ ಯಾವ ಹೇಳಿಕೆ ನೀಡಿದರು ಎಂಬುದನ್ನು ನೋಡಿಕೊಂಡು ಬರೋಣ.

ಗೃಹಸಚಿವರು ಜೀವಂತವಾಗಿಲ್ಲ
ಮಲ್ಲಾಪುರಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಮಾತನಾಡಿ, ಗೃಹ ಸಚಿವರು ರಾಜ್ಯದಲ್ಲಿ ಜೀವಂತವಾಗಿಲ್ಲ. ಇಲ್ಲಿ ಇಂಥ ಘಟನೆಗಳು ನಡೆಯುತ್ತಿದ್ದರೆ ಅವರು ವಿದೇಶದಲ್ಲಿ ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದರು.[ನಿಮ್ಮನ್ನು ರೇಪ್ ಮಾಡಿದರೆ ನಾವೇನು ಮಾಡಲಿಕ್ಕಾಗುತ್ತೆ]

ಶಿಕ್ಷಣದ ಹೊಣೆ ಸರ್ಕಾರದ್ದು
ಜಗದೀಶ್ ಅವರ ಅಂತಿಮ ಸರ್ಶನ ಪಡೆದ ಕೃಷಿ ಸಚಿವ ಕೃಷ್ಣ ಭೈರೇಗೌಡ, ಜಗದೀಶ್ ಅವರ ಕುಟುಂಬಕ್ಕೆ 50 ಲಕ್ಷ ರು, ಪರಿಹಾರ ನೀಡಲಾಗುತ್ತಿದೆ. ಅವರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ಹೊರಲಿದೆ. ಜಗದೀಶ್ ಪತ್ನಿ ಬಯಸಿದರೆ ಸರ್ಕಾರಿ ಕೆಲಸ ನೀಡಲಾಗುವುದು ರಂದು ಗೌಡ ಹೇಳಿದರು.

ವಾಟಾಳ್ ನಾಗರಾಜ್
ನಿಜ ಕರ್ತವ್ಯ ನಿಭಾಯಿಸಲು ಹೋದ ಪ್ರಾಮಾಣಿಕ ಅಧಿಕಾರಿಯನ್ನು ಹತ್ಯೆ ಮಾಡಿದವರನ್ನು ಬಂಧಿಸಿ ಉಗ್ರ ಶಿಕ್ಷ ನೀಡಬೇಕು. ಕನ್ನಡ ನಾಡಿನ ಇಂಥ ಚೇತನಗಳು ಎಂದೆಂದಿಗೂ ಅಜರಾಮರವಾಗಿರುತ್ತವೆ ಎಂದು ಹೇಳಿದರು.

ಶಾಸಕ ಮುನಿರತ್ನ
ರಾಜರಾಜೇಶ್ವರಿ ನಗರ ಶಾಸಕ, ನಿರ್ಮಾಪಕ ಮುನಿರತ್ನ ಪ್ರಕರಣದ ಗಂಭೀರತೆಯ ಅರಿವು ಸರ್ಕಾರಕ್ಕಿದೆ. ಎಲ್ಲ ಘಟನಾವಳಿಗಳನ್ನು ಸಿದ್ದರಾಮಯ್ಯ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
|
ಧೈರ್ಯಶಾಲಿ ಆತ್ಮ
ಜಗದೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂಥ ಘಟನೆಗಳು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯನ್ನು ಭಯಕ್ಕೆ ದೂಡುತ್ತದೆ ಎಂದು ಬೆಂಗಳೂರಿನ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications