ದೊಡ್ಡಬಳ್ಳಾಪುರ ಠಾಣೆ ಸಬ್‌ ಇನ್ಸ್‌ಪೆಕ್ಟರ್ ಹತ್ಯೆ

ಬೆಂಗಳೂರು, ಅಕ್ಟೋಬರ್ 16 : ದೊಡ್ಡಬಳ್ಳಾಪುರದ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಕಳ್ಳರು ಹತ್ಯೆ ಮಾಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಕಳ್ಳರು ಡ್ರ್ಯಾಗರ್‌ನಿಂದ ಚುಚ್ಚಿ ಇನ್ಸ್‌ಪೆಕ್ಟರ್ ಅವರನ್ನು ಹತ್ಯೆ ಮಾಡಿದ್ದು, ಪೊಲೀಸ್ ಪೇದೆ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ದೊಡ್ಡಬಳ್ಳಾಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಗದೀಶ್ (33) ಕೊಲೆಯಾದವರು. ಶುಕ್ರವಾರ ಬೆಳಗ್ಗೆ ಕೃಷ್ಣ ಮತ್ತು ಮಧು ಎಂಬ ಬೈಕ್ ಕಳ್ಳರನ್ನು ಹಿಡಿಯಲು ಹೋದಾಗ ಅವರು ಚಾಕುವಿನಿಂದ ಜಗದೀಶ್ ಅವರ ಹೊಟ್ಟೆ ಮತ್ತು ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. [ಪೊಲೀಸರಿಗೆ ರಜೆ ಭತ್ಯೆ ಹೆಚ್ಚಳದ ಭಾಗ್ಯ]

doddaballapur

ಕಳ್ಳರನ್ನು ಹಿಡಿಯಲು ಹೋದ ಜಗದೀಶ್ ಮತ್ತು ಮತ್ತೊಬ್ಬ ಪೇದೆಯ ಮೇಲೆ ಡ್ಯ್ರಾಗರ್‌ನಿಂದ ಹಲ್ಲೆ ಮಾಡಿದ್ದು, ಪೇದ ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲದ ಗ್ರಾಫೈಟ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದ್ದು, ನೆಲಮಂಗಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರನ್ನು ಹಿಡಿಯಲು ವಿಶೇಷ ತಂಡ ರಚನೆ ಮಾಡಲಾಗಿದೆ.[ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಅಹ್ವಾನ]

ಘಟನೆ ನಡೆದದ್ದು ಹೇಗೆ? : ನೆಲಮಂಗಲದ ಗ್ರಾಫೈಟ್ ಫ್ಯಾಕ್ಟರಿ ಬಳಿ ಇಂದು ಬೆಳಗ್ಗೆ ಬೈಕ್ ಕಳ್ಳರನ್ನು ಹಿಡಿಯಲು ಹೋದಾಗ ಜಗದೀಶ್ ಅವರ ಹತ್ಯೆಯಾಗಿದೆ. ಇಬ್ಬರು ಕಳ್ಳರು ಬೈಕ್ ಕದ್ದು ಪರಾರಿಯಾಗಲು ಯತ್ನಿಸಿದ್ದಾರೆ. ಈ ಸಂರ್ಭದಲ್ಲಿ ಜಗದೀಶ್ ಅವರು ನಾಲ್ವರು ಪೇದೆಗಳೊಂದಿಗೆ ಅವರನ್ನು ಹಿಡಿಯಲು ಮುಂದಾಗಿದ್ದಾರೆ. [ಜಗದೀಶ್ ಪರಿಚಯ]

ಆಗ ಒಬ್ಬ ಜಗದೀಶ್ ಅವರ ಎದೆಗೆ ಚೂರಿಯಿಂದ ಚುಚ್ಚಿದ್ದಾನೆ. ಮತ್ತೊಬ್ಬ ಜಗದೀಶ್ ಅವರ ಜೊತೆ ಬಂದಿದ್ದ ಪೇದೆ ವೆಂಕಟೇಶಮೂರ್ತಿ ಅವರಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಜಗದೀಶ್ ಅವರು ತೀವ್ರ ರಕ್ತಸ್ರಾವದಿಂದ ಚರಂಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೇದೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಳ್ಳರಾದ ಕೃಷ್ಣ ಮತ್ತು ಮಧು ತಂದೆ ಮಗ ಎಂದು ತಿಳಿದುಬಂದಿದ್ದು, ತಂದೆ ಕೃಷ್ಣ ಜಗದೀಶ್ ಅವರನ್ನು ಕೊಲೆ ಮಾಡಿದ್ದಾನೆ. ಜಗದೀಶ್ ಅವರನ್ನು ಕೊಲೆ ಮಾಡಿದ ನಂತರ ಅವರ ಸರ್ವೀಸ್ ಗನ್ ತೆಗೆದುಕೊಂಡು ಇಬ್ಬರು ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+