ದೊಡ್ಡಬಳ್ಳಾಪುರ ನೇಕಾರರ ಹೊಸ ಪ್ರಯೋಗ: ಕರ್ನಾಟಕದ ಸೀರೆಗಳಿಗೆ ಬ್ರ್ಯಾಂಡ್ ಸೃಷ್ಟಿಯ ಕನಸು ಹೊತ್ತು ಬಂದ ಸೀರೆ ಸಂತೆ

ದೊಡ್ಡಬಳ್ಳಾಪುರ: ಮಗ್ಗಕ್ಕೆ ಹೆಸರುವಾಸಿಯಾಗಿರುವ ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಸೀರೆ ಸಂತೆ ನಡೆಯುತ್ತಿದೆ. ಈ ಸಂತೆಯು ಜನರನ್ನು ಆಕರ್ಷಿಸುತ್ತಲೂ ಇದೆ. ನೇಕಾರರಿಂದ ಗ್ರಾಹಕರಿಗೆ ನೇರವಾಗಿ ಮಾರಾಟವಾಗುತ್ತಿರುವುದು, ನೇಕಾರರೇ ಸಂತೆಗೆ ಬಂದು ಸೀರೆಗಳನ್ನು ಮಾರಾಟ ಮಾಡುತ್ತಿರುವುದು ಇದರ ಮತ್ತೊಂದು ವಿಶೇಷ. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಬ್ರ್ಯಾಂಡ್ ಸೀರೆಗಿಂತಲೂ ನಮ್ಮ ಕರ್ನಾಟಕದ ದೊಡ್ಡಬಳ್ಳಾಪುರದ ಸೀರೆಗಳೇನು ಕಮ್ಮಿ ಇಲ್ಲ ಎಂದು ನಮ್ಮ ನೇಕಾರರು ಸಾರುತ್ತಿದ್ದಾರೆ. ಅವರಿಗೆ ಈಗ ಬೇಕಾಗಿರುವುದು ನಮ್ಮೆಲ್ಲರ ಸಹಕಾರ. ನೇಕಾರರ ಹೊಸ ಪ್ರಯೋಗದ ಸಂಪೂರ್ಣ ವಿವರ ಇಲ್ಲಿದೆ.

ದೊಡ್ಡಬಳ್ಳಾಪುರಕ್ಕೆ ಮ್ಯಾಂಚೆಸ್ಟರ್ ಆಫ್ ಇಂಡಿಯಾ ಎನ್ನುವ ಬಿರುದು ಇದೆ. ಆದರೆ ಇಂದಿಗೂ ಇಲ್ಲಿನ ನೇಕಾರರ ಬದುಕು ಅತಂತ್ರ. ಇಲ್ಲಿ ನೇಯ್ದ ಸೀರೆಗಳು ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಬ್ರ್ಯಾಂಡ್‌ಗಳಲ್ಲಿ ಗುರುತಿಸಿಕೊಂಡಿವೆ. ಭರ್ಜರಿ ಮಾರಾಟವನ್ನೂ ಕಾಣುತ್ತಿದೆ. ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ದೊಡ್ಡಬಳ್ಳಾಪುರದ ಸೀರೆಗಳು ಬ್ರ್ಯಾಂಡಿಂಗ್ ಸಮಸ್ಯೆಯನ್ನು ಎದುರಿಸುತ್ತಿವೆ. ನೇಕಾರರ ಸೀರೆಗಳಿಗೆ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಹೀಗಾಗಿ ಇಲ್ಲಿನ ನೇಕಾರರು ಸೀರೆ ಸಂತೆ ಪ್ರಯೋಗ ನಡೆಸಿದ್ದಾರೆ.

Doddaballapur

ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ನೇಕಾರರು ನೇಯ್ದಿರುವ ಸೀರೆಗಳನ್ನು ಮಾತ್ರ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಹಾಗೂ ಇಲ್ಲಿನ ಸೀರೆಗಳ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸುವ ಸೀರೆ ಸಂತೆ ಶುಕ್ರವಾರದಿಂದ ಭಾನುವಾರದವರೆಗೆ ನಡೆಯಲಿದೆ. ಫೆಬ್ರವರಿ 20ರಿಂದ ಮೂರು ದಿನ ಸೀರೆ ಸಂತೆ ನಡೆಯುತ್ತಿದ್ದೆ. ಫೆಬ್ರವರಿ 20ರ ಶುಕ್ರವಾರದಂದು ಸಂಜೆ 5ಕ್ಕೆ ದೊಡ್ಡಬಳ್ಳಾಪುರ ಸೀರೆ ಸಂತೆ ಕಾರ್ಯಕ್ರಮ ಉದ್ಘಾಟನೆ ಆಗಲಿದೆ.

ದೊಡ್ಡಬಳ್ಳಾಪುರದ ನೇಕಾರರು ಬಿಕ್ಕಟ್ಟಿನಲ್ಲಿದ್ದು, ಅವರ ಮಾರುಕಟ್ಟೆಯನ್ನು ಕಂಡುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕರ್ನಾಟಕದ ಸೀರೆಗಳಿಗೆ ಬ್ರ್ಯಾಂಡ್ ಸೃಷ್ಟಿಸುವುದು, ನೇಕಾರರು ನೇಯ್ದ ಸೀರೆಗಳನ್ನು ಮಾರಾಟ ಮಾಡುವುದು ಹಾಗೂ ಕರ್ನಾಟಕದ ಸೀರೆಗಳನ್ನು ಕರ್ನಾಟಕದ ಜನರಿಗೆ ಪರಿಚಯಿಸುವುದು ಸೇರಿದಂತೆ ಹಲವು ಪ್ರಮುಖ ಉದ್ದೇಶಗಳನ್ನು ಈ ಸೀರೆ ಸಂತೆ ಒಳಗೊಂಡಿದೆ.

Doddaballapur

ಇಂದಿನಿಂದ ಫೆಬ್ರವರಿ 22ರವರೆಗೆ ಮೂರು ದಿನಗಳ ಕಾಲ ದೊಡ್ಡಬಳ್ಳಾಪುರ ಸೀರೆ ಸಂತೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೆ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಅವರ ಸಹಕಾರವೂ ಇದೆ. ದೊಡ್ಡಬಳ್ಳಾಪುರದ ಸೀರೆಗಳ ವಿಶೇಷತೆಯನ್ನು ಈ ಸೀರೆ ಸಂತೆಯ ಮೂಲಕ ಪರಿಚಯಿಸಲಾಗುತ್ತಿದೆ. ದೊಡ್ಡಬಳ್ಳಾಪುರ ಸೀರೆ ಸಂತೆಯಲ್ಲಿ ಒಟ್ಟು 54 ಸೀರೆ ಮಳಿಗೆ ತೆರೆಯಲಾಗಿದೆ. ಎಲ್ಲಾ ಸ್ಟಾಲ್‌ಗಳಲ್ಲೂ ನೇಕಾರರೇ ಇರುವುದು ಈ ಸಂತೆಯ ವಿಶೇಷವಾಗಿದೆ. ಸೀರೆ ಸಂತೆ ಪಾಲ್ಗೊಳ್ಳಲು ಯಾವುದೇ ಶುಲ್ಕ ವಿಧಿಸಿಲ್ಲ.

ದೊಡ್ಡಬಳ್ಳಾಪುರದ ಸೀರೆಗಳಿಗೆ ಬ್ರ್ಯಾಂಡ್ ಕನಸು

ಇನ್ನು ನೇಕಾರರು ದೊಡ್ಡಬಳ್ಳಾಪುರದ ಸೀರೆಗಳಿಗೆ ಬ್ರ್ಯಾಂಡ್ ಸಿಗಬೇಕು. ಈ ಸೀರೆಗಳನ್ನು ಕೊಂಡುಕೊಳ್ಳುವ ಮಾರುಕಟ್ಟೆ ಸೃಷ್ಟಿಯಾಗಬೇಕು ಎಂದು ನಿರೀಕ್ಷೆ ಮಾಡುತ್ತಿದ್ದಾರೆ. ನೇಕಾರರ ಹೊಸ ಪ್ರಯೋಗಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಸೀರೆ ಸಂತೆ ಯಶಸ್ವಿ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಂತೆಗಳು ನಡೆಯುವ ಸಾಧ್ಯತೆಯೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+