ಸರ್ಕಾರಿ ಸೀಟು ಪಡೆದು ವೈದ್ಯರಾದವರಿಗೆ ಹಳ್ಳಿ ಸೇವೆ ಕಡ್ಡಾಯ ಸಾಧ್ಯತೆ

ಬೆಂಗಳೂರು, ಜುಲೈ 25: ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಓದಿ ವೈದ್ಯರಾದವರು ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ವೈದ್ಯರಾಗಿ ಸೇವೆ ಮಾಡಲೇ ಬೇಕು ಎಂಬ ಕಾನೂನು ತರಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಆರ್‌ಐ ವಿಭಾಗ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ದೊರಕಲೇ ಬೇಕಿದೆ. ಹಾಗಾಗಿ ವೈದ್ಯರ ಗ್ರಾಮೀಣ ಸೇವೆ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ವೈದ್ಯರ ಸೇವೆ ನಗರ ಪ್ರದೇಶದವರಿಗೆ ಎಷ್ಟು ಸುಲಭವಾಗಿ ಧಕ್ಕುತ್ತದೆಯೋ ಗ್ರಾಮೀಣ ಭಾಗದವರಿಗೂ ಅಷ್ಟೆ ಸುಲಭವಾಗಿ ಧಕ್ಕಬೇಕು ಎಂದ ಅವರು, ಗ್ರಾಮೀಣ ಸೇವೆಗೆ ತೆರಳುವ ವೈದ್ಯರಿಗೂ ಸೂಕ್ತ ಗೌರವ, ಸವಲತ್ತುಗಳನ್ನು ಸರ್ಕಾರದ ವತಿಯಿಂದಲೇ ಒದಗಿಸಲಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

Doctors who took government seats should service in village

ಜಯದೇವ ಸಂಸ್ಥೆಯು ಬಡಜನರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅದೇ ರೀತಿ ಇತರ ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿ ಮಾದರಿ ಆಸ್ಪತ್ರೆಗಳು ಎನಿಸಿಕೊಳ್ಳಬೇಕು ಎಂದರು.

ವೈದ್ಯರ ಮೇಲೆ ಹಲ್ಲೆ ತಡೆಗಟ್ಟಲೆಂದು 2007 ರಲ್ಲಿ ತರಲಾದ ಕಾನೂನನ್ನು ಇನ್ನಷ್ಟು ಶಕ್ತಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಇದೇ ಸಮಯದಲ್ಲಿ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+