ಬಾಗಲಕೋಟೆ: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ತಾಯಿ-ಮಗು
ಬಾಗಲಕೋಟೆ, ಸೆಪ್ಟೆಂಬರ್ 06: ಹೆರಿಗೆಗಾಗಿ ಬಂದ ಗರ್ಭಿಣಿ ಮತ್ತು ಇನ್ನೂ ಕಣ್ಣನ್ನೇ ಬಿಡದ ಆಕೆಯ ಮಗು ಆಸ್ಪತ್ರೆಯಲ್ಲಿ ಮೃತರಾದ ಘಟನೆ ಬಾಗಲಕೋಟೆ ನಗರದ ಕುಂಟೋಜಿ ಆಸ್ಪತ್ರೆಯಲ್ಲಿ ನಡೆದಿದೆ.
ಗರ್ಭಿಣಿ ಮತ್ತು ಶಿಶುವಿನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿ, ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂದೆ ಧರಣಿ ನಡೆಸುತ್ತಿದ್ದಾರೆ. ತಾಯಿ ಮತ್ತು ಮಗುವಿನ ಶವವನ್ನು ಆಸ್ಪತ್ರೆಯ ಮುಂದಿಟ್ಟುಕೊಂಡು ಕುಂಟೋಜಿ ಆಸ್ಪತ್ರೆ ವೈದ್ಯೆ ಸುವರ್ಣ ತಪಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಗರ್ಭಿಣಿಯನ್ನು ಬಾಗಲಕೋಟೆ ನವನಗರ ಮೂರನೇ ಸೆಕ್ಟರ್ ನಿವಾಸಿ ಶಾರದಾ ಪವಾರ (30) ಎಂದು ಗುರುತಿಸಲಾಗಿದ್ದು, ಅವರ ಮಗು ಗರ್ಭದಲ್ಲಿಯೇ ಕೊನೆಯುಸಿರೆಳಲೆದಿದೆ.
ಮಗು ಹೊಟ್ಟೆಯಲ್ಲಿಯೇ ಸಾವಿಗೀಡಾಗಿದೆ ಎಂಬುದು ಗೊತ್ತಿದ್ದರೂ ನಾರ್ಮಲ್ ಹೆರಿಗೆ ಮಾಡಿಸಲು ವೈದ್ಯೆ ಮುಂದಾದ ಹಿನ್ನೆಲೆಯಲ್ಲಿ ಸಮಯ ಮೀರಿ ತಾಯಿಯೂ ಸಾವಿಗೀಡಾಗಿದ್ದಾರೆ.












Click it and Unblock the Notifications