Dr Bro: ಡಾ.ಬ್ರೋನ ಬರೀ ಒಂದು ತಿಂಗಳ ಆದಾಯವಷ್ಟೇ ಇದು.!-ಯಾವ್ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ?- ಇಲ್ಲಿದೆ ಮಾಹಿತಿ
Dr Bro: ಡಾ ಬ್ರೋ ಅಂದ್ರೆ ಯಾರಿಗೆ ಗೊತ್ತಿಲ್ಲ. ಅವರು ಕನ್ನಡದ ಖ್ಯಾತ ಯೂಟ್ಯೂಬರ್ ಆಗಿದ್ದು, ದೇಶ ವಿದೇಶಗಳಲ್ಲಿಯೂ ಕನ್ನಡವನ್ನು ಪಸರಿಸುತ್ತಲೇ ಬಂದಿದ್ದಾರೆ. ಈ ಮೂಲಕ ಕರುನಾಡ ಜನರ ಮನೆ ಮಾತಾಗಿದ್ದಾರೆ. ಇನ್ನು ಬಹುತೇಕರಿಗೆ ಡಾ ಬ್ರೋ ಅವರ ಮಾಸಿಕ ಆದಾಯ ಎಷ್ಟು ಎಂದು ತಿಳುದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದರೆ ಇಲ್ಲಿ ಗಮನಿಸಿ.
ಮೊನ್ನೆಯಷ್ಟೇ ಡಾ ಬ್ರೋ ಗಗನ್ ರಾತ್ರೋ ರಾತ್ರಿ ಪ್ರಥಮ ಬಾರಿಗೆ ಯೂಟ್ಯೂಬ್ ಲೈವ್ ಬಂದಿದ್ದು, ಈ ವೇಳೆ ತಮಗೆ ನೋಡುಗರಿಗೆ ಕಾಮೆಂಟ್ ಮೂಲಕ ಪ್ರಶ್ನೆ ಕೇಳುವಂತೆಯೂ ಹೇಳಿದರು. ಇನ್ನು ವ್ಯಕ್ತಿಯೊಬ್ಬರು ನಿಮ್ಮ ತಿಂಗಳ ಆದಾಯ ಎಷ್ಟು ಎಂದು ಕೇಳಿದಾಗ ಡಾ ಬ್ರೋ 2100$ ಅಂದರೆ ರೂಪಾಯಿಗಳಲ್ಲಿ 1,76,000 ರೂಪಾಯಿ ಎಂದು ತಮ್ಮ ಫೋನ್ ಸ್ಕ್ರೀನ್‌ನಲ್ಲೇ ತೋರಿಸುವ ಮೂಲಕ ಹೇಳಿದ್ದಾರೆ.

ಅಲ್ಲದೆ, ಇದೇ ವೇಳೆ ಒಂದು ದೇಶಕ್ಕೆ ಹೋದಾಗ ನನಗೆ ಎಷ್ಟು ಖರ್ಚಾಗುತ್ತದೆ ಹಾಗೂ ಯಾವುವುದಕ್ಕೆ ಎಷ್ಟು ಬೇಕು ಅಂತಲೂ ವಿವರಿಸಿದ್ದಾರೆ. ಒಂದು ದೇಶಕ್ಕೆ ಹೋಗಿ ಬರುವುದಕ್ಕೆ ಫ್ಲೈಟ್ ಟಿಕೆಟ್ 50,000 ರೂಪಾಯಿ ಹಾಗೂ ಅಲ್ಲಿ ಉಳಿದುಕೊಂಡು ವಿಡಿಯೋ ಮಾಡುವುದಕ್ಕೆ 60-70,000 ರೂಪಾಯಿ, ಎಡಿಟಿಂಗ್ ಕಾಸ್ಟ್, ಗ್ಯಾಜೆಟ್‌ಗಳ ಇಎಂಐ ಎಲ್ಲಾ ಕಳೆದರೆ ನನ್ನ ಕೈಗೇ ಸಿಗುವುದೇ ಬರೀ 10-20,000 ರೂಪಾಯಿ ಅಷ್ಟೇ ಎಂದು ಹೇಳಿದ್ದಾರೆ.
ತುಂಬಾ ಜನರಿಗೆ ಡಾ ಬ್ರೋ ಅವರು ಅಷ್ಟು ದೇಶಗಳನ್ನು ಸುತ್ತುತ್ತಾರೆ, ಅವರು ಬರುವ ಹಣವನ್ನೆಲ್ಲ ಏನು ಮಾಡುತ್ತಾರೆ? ಕೈಗೆ ಸಿಗುವ ಹಣವೆಷ್ಟು ಎನ್ನುವ ಪ್ರಶ್ನೆಗಳಿಗೆ ಇದೀಗ ಖುದ್ದಾಗಿ ಡಾ ಬ್ರೋ ಅವರೇ ಲೈವ್‌ನಲ್ಲಿ ಉತ್ತರ ಕೊಟ್ಟಿದ್ದಾರೆ. ಅಭಿಮಾನಿಯೊಬ್ಬರು ಇದಕ್ಕೆ ಕಾಮೆಂಟ್ ಮಾಡಿ "ಇನ್ನೂ ಎತ್ತರಕ್ಕೆ ಬೆಳೆಯಿರಿ, DR BRO ಅವರ ಲಕ್ಷದ YOUTUBE INCOME ಕೋಟಿಯಾಗಲಿ," ಎಂದು ಹಾರೈಸಿದ್ದಾರೆ.
ಇನ್ನು ಡಾ.ಬ್ರೋ ಬಿಗ್‌ಬಾಸ್‌ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಸೀಸನ್ 11 ಶುರುವಾಗಲಿದ್ದು, ಸಂಭಾವ್ಯರ ಪಟ್ಟಿ ಒಂದೊಂದಾಗಿ ಹೊರಬರುತ್ತಲೇ ಇದೆ. ಈ ಪೈಕಿ ಡಾ.ಬ್ರೋ (ಗಗನ್) ಅವರ ಹೆಸರು ಕೂಡ ಸರದಿಯಲ್ಲಿದ್ದು, ಇದೀಗ ಖುದ್ದು ಲೈವ್ ಬಂದ ಅವರು ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇದೇ ಮೊದಲ ಬಾರಿಗೆ ಯೂಟ್ಯೂಬ್ ಲೈವ್ಗೆ ಬಂದಿರುವ ಗಗನ್ ಅವರು ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಧ್ಯೆ ಕೆಲವು ದಿನಗಳು ಅಂತರ ಕಾಪಾಡಿಕೊಂಡಿದ್ದ ಬಗ್ಗೆ ವಿವರಿಸಿರುವ ಗಗನ್, ಒಂದು ದೇಶಕ್ಕೆ ಹೋಗಬೇಕು ಎಂದರೆ ಸಿಕ್ಕಾಪಟ್ಟೆ ಪ್ರಕ್ರಿಯೆಗಳು ಇರುತ್ತವೆ. ಅದನ್ನೆಲ್ಲಾ ಸರಿದೂಗಿಸಿ, ತಯಾರಾಗಿ ಹೋಗಲು ಸಮಮಯ ಬೇಕಾಗುತ್ತದೆ. ಇದೇ ಕಾರಣಕ್ಕೆ ಅವುಗಳ ಪ್ರಕ್ರಿಯೆಯಲ್ಲಿದ್ದೆ ಎಂದಿದ್ದಾರೆ.
ಬಿಗ್‌ಬಾಸ್‌ಗೆ ಹೋಗುತ್ತೀರಾ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಸ್ವಲ್ಪತ್ತು ಡಾ.ಬ್ರೋ. ಮೌನವಾಗಿಬಿಟ್ಟರು. ಬಳಿಕ ಮೂರು ತಿಂಗಳು ಒಂದೇ ಕಡೆ ಇರುವುದು ನನಗೆ ಕಷ್ಟ ಆಗಬಹುದು. ಅದೇ ಸಮಯದಲ್ಲಿ ನಾನು ಕೆಲವು ದೇಶ ಸುತ್ತಬಹುದು. ಆದ್ದರಿಂದ ಈ ಬಗ್ಗೆ ನಾನು ಏನೂ ಯೋಚನೆ ಮಾಡಿಲ್ಲ. ಬಿಗ್‌ಬಾಸ್‌ಗೆ ಹೋಗುತ್ತೇನೋ, ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟತೆ ಇಲ್ಲ ಅಂತಲೂ ಹೇಳಿದ್ದಾರೆ.
ಮತ್ತೊಂದೆಡೆ ಬಿಗ್‌ಬಾಸ್‌ಗೆ ಹೋಗಬೇಡಿ, ನಿಮಗೆ ನಿಮ್ಮದೇ ಆದ ಐಡೆಂಟಿಟಿ ಇದೆ, ಗೌರವ ಇದೆ. ಅದನ್ನು ಕಳೆದುಕೊಳ್ಳಬೇಡಿ ಎಂದು ಹಲವರು ಲೈವ್‌ನಲ್ಲಿ ಕಮೆಂಟ್ ಮೂಲಕ ತಿಳಿಸಿದರೆ, ಇನ್ನೂ ಕೆಲವರು ಬಿಗ್‌ಬಾಸ್‌ನಲ್ಲಿ ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಡಾ.ಬ್ರೋ ಮುಂದಿನ ದಿನಗಳಲ್ಲಿ ಈ ಬಗ್ಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಎಂದು ಕಾದುನೋಡಬೇಕಿದೆ. ಇನ್ನು ಡಾ ಬ್ರೋ ಯೂಟ್ಯೂಬ್ ಲೈವ್ ಅನ್ನು 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣ ಮಾಡಿದ್ದು, 39 ಸಾವಿಕ್ಕೂ ಅಧಿಕ ಲೈಕ್ಸ್ ಬಂದಿವೆ.












Click it and Unblock the Notifications