'ಸಿದ್ದರಾಮಯ್ಯ ಬೆಂಬಲಿಗರನ್ನ ಡಿ.ಕೆ.ಶಿವಕುಮಾರ್ ಸದ್ದಿಲ್ಲದೆ ಹಣಿಯುತ್ತಿದ್ದಾರೆ'
ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ಸಿಎಂ ಬದಲಾವಣೆ ಹಾಗೂ ಅಧಿಕಾರ ಹಂಚಿಕೆಯ ಒಪ್ಪಂದದ ವಿಚಾರ ಕೇಳಿಬರುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಇದೇ ಕಾರಣಕ್ಕೆ ಶೀತಲ ಸಮರ ಉಂಟಾಗಿದೆ ಎಂಬ ಚರ್ಚೆಗಳು ಕೂಡ ಜೋರಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಅಧಿಕಾರ ಹಂಚಿಕೆಯ ಅವಧಿ ಹತ್ತಿರದಲ್ಲಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಪಾಳಯದಲ್ಲಿ ಈಗಿನಿಂದಲೇ ಶೀತಲ ಸಮರ ಆರಂಭವಾಗಿದೆ. ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಕಸರತ್ತು ಆರಂಭವಾಗಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಇವರ ಈ ಕುರ್ಚಿ ಕಿತ್ತಾಟದ ನಡುವೆ ರಾಜ್ಯದ ಪರಿಸ್ಥಿತಿ ಅಧೋಗತಿಯಾಗಿದೆ. ನೆರೆಯಿಂದ ಜನರು ತತ್ತರಿಸಿದ್ದರೂ ರಾಜ್ಯ ಸರ್ಕಾರ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವುದು ಖಂಡನೀಯ ಎಂದು ಹೇಳಿದೆ. ಮುಖ್ಯಮಂತ್ರಿ ಕುರ್ಚಿ ಕಳೆದುಕೊಳ್ಳುವ ಭಯಕ್ಕೆ ಬಿದ್ದಿರುವ ಸಿದ್ದರಾಮಯ್ಯ ಅವರು ಜಾತಿ ಗಣತಿಯನ್ನು ಆಸರೆಯಾಗಿಸಿಕೊಂಡಿದ್ದಾರೆ. ಹೇಗಾದರೂ ಸಿಎಂ ಪದವಿ ಪಡೆಯಲೇಬೇಕು ಎಂದು ಜಿದ್ದಿಗೆ ಬಿದ್ದಿರುವ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಸದ್ದಿಲ್ಲದೆ ಹಣಿಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಕಲೆಕ್ಷನ್-ಕಮಿಷನ್-ಕರಪ್ಷನ್
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಮಿಷನ್ ಪಿಡುಗಿನಿಂದಾಗಿ ಗುತ್ತಿಗೆದಾರರ ಪರಿಸ್ಥಿತಿ ಅಯೋಮಯವಾಗಿದೆ. ಶೇ 40ರಷ್ಟು ಕಮಿಷನ್ ಸುಳ್ಳು ನರೇಟಿವ್ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಡಿಯಿಂದ ಕಮಿಷನ್ ಹಾಗೂ ಕಲೆಕ್ಷನ್ ಇಲ್ಲದೆ ಯಾವುದೇ ಅನುದಾನ, ಬಾಕಿ ಬಿಲ್ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪ ಮಾಡಿದೆ. ಕಲೆಕ್ಷನ್-ಕಮಿಷನ್-ಕರಪ್ಷನ್‌ನಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಪಾಲಿಗೆ ಶಾಪವಾಗಿದೆ ಎಂದು ಆಕ್ರೋಶ ಹೊರಹಾಕಿದೆ.
60 ಪರ್ಸೆಂಟ್ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಬೆಂಗಳೂರು ಸೇರಿ ರಾಜ್ಯದ ರಸ್ತೆಗಳು ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ. ಸಿಲಿಕಾನ್ ಸಿಟಿಯ ರಸ್ತೆ ಗುಂಡಿಗೆ ವಿದ್ಯಾರ್ಥಿನಿ ಬಲಿಯಾಗಿರುವುದು ದುರದೃಷ್ಟಕರ. ಸುಗಮ ಸಂಚಾರಕ್ಕೆ ಅನುಕೂಲವಾಗಬೇಕಿದ್ದ ಬೆಂಗಳೂರಿನ ರಸ್ತೆಗಳು ಪ್ರತಿನಿತ್ಯ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತರುತ್ತಿರುವುದು ಡೆಡ್‌ಲೈನ್ ಡಿಸಿಎಂ ಡಿಕೆ.ಶಿವಕುಮಾರ್ ಅವರ ಕಳಪೆ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳಿಗೆ ತಾವು ನೀಡಿದ್ದ ಡೆಡ್‌ಲೈನ್ ಎಲ್ಲಿಗೆ ಬಂತು? ಗುಂಡಿ ಮುಚ್ಚಲು ಬಿಡುಗಡೆ ಮಾಡಿದ್ದ 750 ಕೋಟಿ ರೂಪಾಯಿ ಯಾರ ಜೇಬು ಸೇರಿದೆ? ತಮ್ಮ ಸರ್ಕಾರಕ್ಕೆ ಇನ್ನೆಷ್ಟು ಅಮಾಯಕರ ಬಲಿಬೇಕು? ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣ ಕಡೆಗಣಿಸಿ ಕುಂಭಕರ್ಣ ನಿದ್ರೆಗೆ ಜಾರಿದೆ. ಸಿಎಂ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡು ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಕೇಂದ್ರದ ಮೇಲೆ ಜವಾಬ್ದಾರಿ ಹೊರಿಸಿ ರಾಜ್ಯ ಸರ್ಕಾರ ನುಣುಚಿಕೊಳ್ಳದೇ ನೆರೆ ಸಂಕಷ್ಟಿತರ ನೆರವಿಗೆ ಧಾವಿಸಲಿ ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
-
Upendra: ನಟ ಉಪೇಂದ್ರ ಅವರ "ಪ್ರಜಾಕೀಯ" ಪಕ್ಷದ ವೆಬ್ಸೈಟ್ ಲೋಕಾರ್ಪಣೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ರೂಲ್ಸ್ -
ನಾಸೀರ್ ಅಹ್ಮದ್ ವಜಾ; ಪಕ್ಷದಲ್ಲಿ ಶಿಸ್ತಿಲ್ಲದಿದ್ದರೆ ಕ್ರಮ ಎಂದ ಡಿಕೆ ಶಿವಕುಮಾರ್ -
ಧಾರವಾಡ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: 1 ಲಕ್ಷ ಬಾಂಡ್ಗೆ ಆಗ್ರಹಿಸಿದ ಪೊಲೀಸರ ವಿರುದ್ಧ ಯತ್ನಾಳ್ ಗರಂ -
Abdul Jabbar: ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಜಬ್ಬಾರ್ ಅಮಾನತು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕ್ರಮ -
ಕೆಲವೇ ಗಂಟೆಗಳಲ್ಲಿ ಇರಾನ್ ಬಂದರುಗಳಿಗೆ ಅಮೆರಿಕದಿಂದ ಕಡಲ ದಿಗ್ಬಂಧನ? ಯುದ್ಧದ ಭೀತಿಯಲ್ಲಿ ಕೊಲ್ಲಿ ರಾಷ್ಟ್ರಗಳು -
Siddaramaiah: ಜನರ ದಾರಿತಪ್ಪಿಸುವ ಬಿಜೆಪಿಯನ್ನು ನಂಬಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರಣವೇನು -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
“ಕಾಂಗ್ರೆಸ್ ಸಂವಿಧಾನವನ್ನು ಸ್ವಾರ್ಥಕ್ಕೆ ಬಳಸಿದೆ”: ಬಸವರಾಜ ಬೊಮ್ಮಾಯಿ ಹೇಳಿಕೆ -
ರಾಜ್ಯದ 5000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕಲುಷಿತ ನೀರು: ಗ್ಯಾರಂಟಿ ಗುಂಗಿನಲ್ಲಿರುವ ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ











Click it and Unblock the Notifications