ಸಂಪುಟ ವಿಸ್ತರಣೆಗೆ ಕೋಪಗೊಂಡ್ರಾ ಸಿದ್ದರಾಮಯ್ಯ? ಸಿಎಂ ಡಿಕೆಶಿ ಹೇಳಿದ್ದೇನು?

ಬೆಂಗಳೂರು ಆಗಸ್ಟ್‌ 4: ಬಹುನಿರೀಕ್ಷಿತ ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ಸಂಪುಟ ವಿಸ್ತರಣೆ ಸೋಮವಾರ (ಆಗಸ್ಟ್‌ 3) ನಡೆಯಿತು. ಇದರ ಬೆನ್ನಲ್ಲೇ ಅವಕಾಶ ವಂಚಿತರ ಅತೃಪ್ತಿ ಭುಗಿಲೆದ್ದಿದೆ. ಅದರಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಸಮಾಧಾನಗೊಂಡಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಡಿ.ಕೆ.ಶಿವಕುಮಾರ್ ಮಹತ್ವದ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ ಅವರ ಗೈರಾಗಿದ್ದು, ಅವರಿಗೆ ಅಸಮಾಧಾನವಾಗಿದೆಯೇ ಎಂದು ಕೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು, 'ನಾನು, ಸಿದರಾಮಯ್ಯ ಅವರು ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ. ಇಂದು ಅವರ ಜನ್ಮದಿನ. ಅವರಿಗೆ ಅನೇಕ ಅತಿಥಿಗಳು ಶುಭಕೋರುತ್ತಿದ್ದಾರೆ. ನಾನು ಕೂಡ ಶುಭ ಕೋರಿದ್ದೇನೆ. 139 ಶಾಸಕರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ,' ಎಂದು ಹೇಳಿದರು.

DK Shivakumar Reacts to Siddaramaiah s Discontent After Karnataka Cabinet Expansion 2026 Viral

'ಸಿದ್ದರಾಮಯ್ಯ ಯಾಕೆ ಅಸಮಾಧಾನಗೊಳ್ತಾರೆ?'

ಮುಂದುವರಿದು ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರು ಯಾಕೆ ಅಸಮಾಧಾನಗೊಳ್ಳುತ್ತಾರೆ? ನಾನು ಸೇರಿದಂತೆ ಎಲ್ಲರೂ ಸಿದ್ದರಾಮಯ್ಯನವರ ಕಡೆಯವರೆ. ನಾವು ಒಂದಾಗಿದ್ದೇವೆ, ಒಂದಾಗಿರುತ್ತೇವೆ, ಒಂದಾಗಿ ಹೋರಾಟ ಮಾಡುತ್ತೇವೆ. ನೀವುಗಳು ಹೊಸದಾಗಿ ಹುಡುಕುತ್ತಿದ್ದೀರಿ. ಅನೇಕರು ಅವರನ್ನು ಭೇಟಿ ಮಾಡುತ್ತಿರುತ್ತಾರೆ. ಸಚಿವ ಸ್ಥಾನ ಸಿಗದವರ ಜತೆಗೂ ಅವರು ಮಾತನಾಡುತ್ತಿರುತ್ತಾರೆ. ಅವರು ನಮ್ಮ ಪಕ್ಷದ ಕೆಲಸವನ್ನು ಮಾಡುತ್ತಿದ್ದಾರೆ,' ಎಂದು ಹೇಳಿದರು.

ನೀವು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೀರಾ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿ ಸಿಎಂ ಡಿಕೆ ಶಿವಕುಮಾರ್ ಅವರು, 'ಖಂಡಿತವಾಗಿಯೂ ಅವರ ಜೊತೆ ಮಾತನಾಡಿದ್ದೇನೆ. ಒಟ್ಟು ಐದು ಬಾರಿ ಚರ್ಚೆ ಮಾಡಿದ್ದೇನೆ,' ಎಂದು ಹೇಳುವ ಮೂಲಕ ಗಮನ ಸೆಳೆದರು.

'ನಿಮಗೆ ಬಂದಿರುವ ಎಲ್ಲಾ ಪಟ್ಟಿ ಅಧಿಕೃತವಲ್ಲ'

ಪಟ್ಟಿ ಬದಲಾವಣೆ ಮಾಡಿದ್ದೇಕೆ ಎಂದು ಕೇಳಿದಾಗ, 'ಹೈಕಮಾಂಡ್‌ನಿಂದ ಬಂದ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ ಎಂದು ತಿಳಿಸಿದರು. ಗಾಯತ್ರಿ ಅವರ ವಿಚಾರಕ್ಕೆ ಪ್ರತಿಕ್ರಿಯಿಸಿ, 'ನಮ್ಮ ಪಕ್ಷದಲ್ಲಿ ಕೆಲವು ತಾಂತ್ರಿಕ ವಿಚಾರಗಳಿವೆ. ಅವರು ಇನ್ನು ಪ್ರಮಾಣವಚನ ಸ್ವೀಕರಿಸಬೇಕಾಗಿದೆ. ನಿಮಗೆ ಬಂದಿರುವ ಎಲ್ಲಾ ಪಟ್ಟಿ ಅಧಿಕೃತವಲ್ಲ. ನಾನು ಸಹಿ ಹಾಕಿ ರಾಜ್ಯಪಾಲರಿಗೆ ಕೊಟ್ಟ ಪಟ್ಟಿ ಮಾತ್ರ ಅಧಿಕೃತ. ಹೈಕಮಾಂಡ್ ನನಗೆ ತಿಳಿಸುವ ಪಟ್ಟಿ ಅಂತಿಮ. ನಮ್ಮಲ್ಲಿ ಕೆಲವು ಮಾಹಿತಿ ಲೀಕ್ ಮಾಡಿದ್ದು, ಅಂತಿಮವಲ್ಲ ಎಂದರು.

'ಮಹಿಳೆಯರಿಲ್ಲದೆ ನಮ್ಮ ಪಕ್ಷವೇ ಇಲ್ಲ'

ನಾವು ಎಷ್ಟು ಬಾರಿ ಬೇಕಾದರೂ ಹೆಸರು ಬದಲಾಯಿಸಬಹುದು. ಕಳೆದ 20 ದಿನಗಳಿಂದ ಸಚಿವರ ಪಟ್ಟಿಯಲ್ಲಿ ಎಷ್ಟು ಜನರನ್ನು ತೋರಿಸಿದ್ದೀರಿ. ನಾಲ್ಕು ಸಚಿವಸಂಪುಟ ಮಾಡುವಷ್ಟು ಜನರನ್ನು ತೋರಿಸಿದ್ದೀರಿ ಎಂದು ಹೇಳಿದರು. ಇನ್ನೂ ಮಹಿಳೆಯರಿಗೆ ಸ್ಥಾನ ಸಿಕ್ಕಿಲ್ಲದ ಬಗ್ಗೆ ಮಾತನಾಡಿ, 'ಮಹಿಳೆಯರಿಗೆ ಸ್ಥಾನ ಕೊಟ್ಟೆ ಕೊಡುತ್ತೇವೆ. ಮಹಿಳೆಯರಿಲ್ಲದೆ ನಮ್ಮ ಪಕ್ಷವೇ ಇಲ್ಲ,' ಎಂದು ಹೇಳಿದರು.

ಖಾತೆ ಹಂಚಿಕೆ ವಿಳಂಬದ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, 'ಯಡಿಯೂರಪ್ಪ ಅವರ ಸರ್ಕಾರದ ಇತಿಹಾಸವನ್ನು ನೀವೇ ಸ್ವಲ್ಪ ಹೇಳಿ. ಅವರ ಸರ್ಕಾರ ರಚನೆ ಆಗಿದ್ದಾಗ ಒಬ್ಬರೇ ಸರ್ಕಾರ ಮಾಡಲಿಲ್ಲವೇ,' ಎಂದರು. ನಾಗೇಂದ್ರ ಅವರ ವಿರುದ್ಧ ಪ್ರಕರಣವಿದ್ದರೂ ಸಚಿವ ಸ್ಥಾನ ನೀಡಲಾಗಿದೆ ಎಂದು ಕೇಳಿದಾಗ, 'ನನ್ನ ಮೇಲೂ ಪ್ರಕರಣ ದಾಖಲಿಸಿದ್ದರು. ನಮ್ಮ ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲವೇ? ನನ್ನನ್ನು ಕೇಸ್ ಹಾಕಿ ಜೈಲಿಗೆ ಹಾಕಿರಲಿಲ್ಲವೇ?,' ಎಂದು ಹೇಳಿದರು.

ಅಸಮಾಧಾನಗೊಂಡ್ರಾ ಸಿದ್ದರಾಮಯ್ಯ?

ಸಿದ್ದರಾಮಯ್ಯ ಅವರು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದು ಅಭಿಮಾನಿಗಳು, ಬೆಂಬಲಿಗರಿಂದ ಶುಭಾಶಯನ್ನು ಸ್ವೀಕರಿದ ಅವರು, ನೂತನ ಸಚಿವರ ಪಟ್ಟಿಯನ್ನು ಎಐಸಿಸಿ ಹೈಕಮಾಂಡ್‌ ಪ್ರಕಟ ಮಾಡುತ್ತಿದ್ದಂತೆ ಆಕ್ರೋಶಗೊಂಡರು. ತಾವು ಸೂಚಿಸಿದ್ದ ಬ್ಯಾಡಗಿ ಕ್ಷೇತ್ರದ ಬಸವರಾಜ್‌ ನೀಲಪ್ಪ ಶಿವಣ್ಣವರ್‌ ಹೆಸರು ಪಟ್ಟಿಯಲ್ಲಿಇಲ್ಲದಿರುವುದು ಕೋಪವನ್ನು ಹೆಚ್ಚಿಸಿತು ಎನ್ನಲಾಗಿದೆ.

ತಕ್ಷಣವೇ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಕರೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರು, ವರ್ಚಸ್ಸು ಇಲ್ಲದವರಿಗೆ ಮಣೆ ಹಾಕಿ, ಪಟ್ಟಿಯಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವರಿಷ್ಠರೊಂದಿಗೆ ಮಾತುಕತೆ ಕಾಲಕ್ಕೆ ಸಿದ್ದರಾಮಯ್ಯ ಅವರು ಉಮಾಶ್ರೀ ಹೆಸರನ್ನು, ಸಿಎಂ ಡಿ.ಕೆ. ಶಿವಕುಮಾರ್‌ ಅವರು ಲಕ್ಷ್ಮಿ ಹೆಬ್ಬಾಳಕರ್‌ ಹೆಸರನ್ನು ಸೂಚಿಸಿದ್ದರು ಎನ್ನಲಾಗಿದೆ. ಇಬ್ಬರಲ್ಲೂ ಒಮ್ಮತ ಬಾರದ ಕಾರಣ ಹೈಕಮಾಂಡ್‌ ಗಾಯತ್ರಿ ಶಾಂತೇಗೌಡ ಹೆಸರನ್ನು ಪರಿಗಣಿಸಿತು. ಆದರೆ ಪರಿಷತ್‌ನಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಾತಿನಿಧ್ಯ ಇದ್ದು, ಕುರುಬ ಸಮುದಾಯದ ಮತ್ತೊಬ್ಬರಾದ ಗಾಯತ್ರಿ ಅವರಿಗೆ ಅವಕಾಶ ಕೊಟ್ಟರೆ ತಪ್ಪಾಗುತ್ತದೆ ಎಂಬುದು ಅರಿವಾಯಿತು.

ಗಾಯತ್ರಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿದ್ದರಾಮಯ್ಯ ಪ್ರಮಾಣ ಸ್ವೀಕಾರ ಮಾಡದಂತೆ ಸೂಚಿಸಿದ್ದಲ್ಲದೆ ಈ ಸ್ಥಾನಕ್ಕೆ ಉತ್ತರ ಕರ್ನಾಟಕದ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ನೀಲಪ್ಪ ಶಿವಣ್ಣನವರ್‌ ಹೆಸರನ್ನು ಪರಿಗಣಿಸುವಂತೆ ವರಿಷ್ಠರಿಗೆ ದೂರವಾಣಿ ಮೂಲಕ ಸಲಹೆ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಈ ಸಲಹೆಯನ್ನು ಒಪ್ಪದ ಹೈಕಮಾಂಡ್‌, ಪರಿಷತ್‌ ಸದಸ್ಯರಾದ ಎನ್‌.ಎಸ್‌.ಬೋಸರಾಜು ಹೆಸರನ್ನು ಪರಿಗಣಿಸಿದೆ. ಆದರೆ ಇದರಿಂದ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯವೇ ಇಲ್ಲವಾಗುತ್ತದೆ ಎಂಬ ಕಾರಣಕ್ಕೆ ಗಾಯತ್ರಿ ಅವರಿಗೆ ಸಿಗದ ಮಂತ್ರಿ ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲು ತೀರ್ಮಾನಿಸಲಾಯಿತು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+