ಸಿದ್ದರಾಮಯ್ಯ ಅವರನ್ನ ಮುಗಿಸಲು ಡಿಕೆ ಶಿವಕುಮಾರ್‌ ಪ್ಲಾನ್‌ : ಏನಿದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್!‌

ವಿಜಯಪುರ, ಆಗಸ್ಟ್‌ 18: ರಾಜ್ಯ ಸರ್ಕಾರದ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಟೋಟಕ ಬಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸಲು ಡಿಸಿಎಂ ಡಿಕೆ ಶಿವಕುಮಾರ್‌ ಎಲ್ಲ ಯೋಜನೆ ಮಾಡಿದ್ದಾರೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ಈ ಕುರಿತು ಶುಕ್ರವಾರ ವಿಜಯಪುರ ನಗರದ ಶಾಸಕರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿಲ್ಲಿಯಲ್ಲಿ ಡಿಕೆ ಶಿವಕುಮಾರ್‌ ಯಾರ ಯಾರ ಮನೆಗೆ ಅಡ್ಡಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ರಾಜ್ಯದ ಸೂಪರ್ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಗಿಸುವ ಎಲ್ಲ ಪ್ಲಾನ್‌ ಮಾಡಿದ್ದಾರೆ. ಯಾರ್ಯಾರನ್ನು ಬ್ಲಾಕ್‌ ಮೇಲ್‌ ಮಾಡಿದ್ದಾರೆ ನನಗೆ ಗೊತ್ತಿದೆ ಎಂದು ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

basanagouda-patil-yatnal

ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಳಿಸುವುದಕ್ಕೆ ಡಿಕೆ ಶಿವಕುಮಾರ್‌ ಏನೇನು ಪ್ಲಾನ್‌ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಸಂದರ್ಭದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ಸಿದ್ದರಾಮಯ್ಯ ಅವರು ವೀಕ್ ಆಗಿದ್ದಾರೆ, ಅವರನ್ನ ಡಿಕೆ ಶಿವಕುಮಾರ್‌ ವೀಕ್ ಮಾಡಿದ್ದಾರೆ. ಮುಖ್ಯಮಂತ್ರಿ ಮಾತ್ರ ಎಲ್ಲ ಇಲಾಖೆಗಳ ಸಭೆ ತೆಗೆದುಕೊಳ್ಳಬಹುದು, ಡಿಸಿಎಂಗೆ ಆ ಅಧಿಕಾರ ಇಲ್ಲ.

ಇನ್ನೂ ಕಾಂಗ್ರೆಸ್‌ ಪಕ್ಷಗಳಲ್ಲಿ ಸಿದ್ದರಾಮಯ್ಯಗೆ ಹೆಚ್ಚಿನ ಶಾಸಕರ ಬೆಂಬಲ ಇದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಬೆನ್ನಿಗೆ 15 ಶಾಸಕರು ಮಾತ್ರ ಇದ್ದಾರೆ. ಸಿದ್ದರಾಮಯ್ಯ ಶಕ್ತಿ ಕಡಿಮೆ ಮಾಡಲು ಡಿಕೆ ಶಿವಕುಮಾರ್‌ ಪ್ಲಾನ್ ಹಾಕಿದ್ದಾರೆ. ಇದೆ ಕಾರಣಕ್ಕೆ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ವಾಪಸ್ ಬರ್ತಾರೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿ ಸುಮ್ಮನೆ ಕೂತಿದ್ದಾರಷ್ಟೇ. ಸಿದ್ದರಾಮಯ್ಯರದ್ದು ಏನು ನಡೆಯುತ್ತಿಲ್ಲ, ಎಲ್ಲ ಡಿಕೆ ಶಿವಕುಮಾರ್‌ ಅವರದ್ದೇ ನಡೆಯುತ್ತಿದೆ. ಸಿದ್ದರಾಮಯ್ಯ ವಿರುದ್ಧ ಇರೋರನ್ನು ತೆಗೆದುಕೊಂಡು 30 ರಿಂದ 40 ಸೀಟ್ ಮಾಡಿಕೊಳ್ಳೊದು ಡಿಸಿಎಂ ಡಿಕೆ ಶಿವಕುಮಾರ್‌ ಯೋಜನ ಹಾಕಿಕೊಂಡಿದ್ದಾರೆ.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೋವಿದೆ ಎಂದು ಹೇಳಿದರು.

ಇನ್ನೂ ಡಿ ಕೆ ಶಿವಕುಮಾರ್‌ ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗುವ ಭಾಗ್ಯ ಇಲ್ಲ ಎಂದು ಭವಿಷ್ಯ ನುಡಿದ ಯತ್ನಾಳ್‌,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಕಾಲಕ್ಕೂ ಡಿ ಕೆ ಶಿವಕುಮಾರ್‌ ಗೆ ಮುಖ್ಯಮಂತ್ರಿ ಹುದ್ದೆಯನ್ನ ಬಿಟ್ಟು ಕೊಡಲ್ಲ. ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಸಿದ್ದರಾಮಯ್ಯ, 5 ವರ್ಷವಾಗಲಿ, 5 ತಿಂಗಳಾಗಲಿ‌ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದು ಹೇಳಿದರು.

ಬಿಜೆಪಿಗೆ ಮತ ಹಾಕಿದವರು ರಾಕ್ಷಸರು ಎಂದ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರ ಹೇಳಿಕೆ ಕುರಿತು ಮಾತನಾಡಿದ ಅವರು. ಅನ್ನೋದೆ ಒಂದು ರಾಕ್ಷಸ ಸಂತತಿ, ಕಾಂಗ್ರೆಸ್ ತಳಿ ರಾಕ್ಷಸರದ್ದು. ಕಾಂಗ್ರೆಸ್ ವಂಶ ಪಾರಂಪರ್ಯದ ಬ್ಯಾಗ್ರೌಂಡ್ ಸರಿ ಇಲ್ಲ, ಕಾಂಗ್ರೆಸ್‌ನದ್ದು ಹೈಬ್ರೀಡ್ ತಳಿ, ಬಿಜೆಪಿಗೆ ಮತ ಹಾಕಿದವರು ರಾಕ್ಷಸರು ಎಂದು ದೇಶದ ಮತದಾರರನ್ನ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+