ಪತ್ನಿ, ಪುತ್ರಿ ಕಂಡು ಭಾವುಕರಾದ ಡಿಕೆ ಶಿವಕುಮಾರ್

Recommended Video

      D K Shivakumar : ಪತ್ನಿ, ಪುತ್ರಿ ಕಂಡು ಭಾವುಕರಾದ ಡಿಕೆ ಶಿವಕುಮಾರ್ | Oneindia Kananda

      ಬೆಂಗಳೂರು, ಸೆಪ್ಟೆಂಬರ್ 09 : ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ. ಶಿವಕುಮಾರ್ ಪತ್ನಿ, ಪುತ್ರಿ ಕಂಡು ಭಾವುಕರಾದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಇಡಿ ಬಂಧಿಸಿದ್ದು, ನವದೆಹಲಿಯಲ್ಲಿದ್ದಾರೆ.

      ಭಾನುವಾರ ರಾತ್ರಿ ಇಡಿ ಕಚೇರಿಯಲ್ಲಿ ಡಿ. ಕೆ. ಶಿವಕುಮಾರ್ ಪತ್ನಿ ಉಷಾ ಮತ್ತು ಮಗಳು ಐಶ್ವರ್ಯಾರನ್ನು ಭೇಟಿ ಮಾಡಿದರು. ಪ್ರತಿದಿನ ಅರ್ಧಗಂಟೆಗಳ ಕಾಲ ಕುಟುಂಬದವರನ್ನು ಭೇಟಿ ಮಾಡಲು ಇಡಿ ವಿಶೇಷ ನ್ಯಾಯಾಲಯ ಅವಕಾಶ ನೀಡಿದೆ.

      ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಡಿ. ಕೆ. ಶಿವಕುಮಾರ್‌ರನ್ನು ಸೆಪ್ಟೆಂಬರ್ 13ರ ತನಕ ಇಡಿ ವಶಕ್ಕೆ ನೀಡಲಾಗಿದೆ. ನವದೆಹಲಿಯಲ್ಲಿರುವ ಇಡಿ ಕಚೇರಿಯಲ್ಲಿ ಪ್ರತಿದಿನ ಅಧಿಕಾರಿಗಳು ಅವರ ವಿಚಾರಣೆ ನಡೆಸುತ್ತಿದ್ದಾರೆ.

      DK Shivakumar

      ಗೌರಿ-ಗಣೇಶ ಹಬ್ಬದ ದಿನ ಹಿರಿಯರಿಗೆ ಎಡೆ ಇಡುವ ಕಾರ್ಯಕ್ರಮವಿದೆ ವಿಚಾರಣೆಯಿಂದ ವಿನಾಯಿತಿ ನೀಡಿ ಎಂದು ಡಿ. ಕೆ. ಶಿವಕುಮಾರ್ ಮಾಡಿದ್ದ ಮನವಿಯನ್ನು ಇಡಿ ತಳ್ಳಿಹಾಕಿತ್ತು. ಗಣೇಶ ಚತುರ್ಥಿಯಂದು ಅವರ ವಿಚಾರಣೆ ನಡೆಸಿತ್ತು.

      ಡಿ. ಕೆ. ಶಿವಕುಮಾರ್ ಅನುಪ ಸ್ಥಿತಿಯಲ್ಲಿ ಪತ್ನಿ ಮತ್ತು ಕುಟುಂಬಸ್ಥರು ಎಡೆ ಇಟ್ಟು ಪೂಜೆ ಸಲ್ಲಿಸಿದ್ದರು. ಬೆಂಗಳೂರಿನಿಂದ ದೆಹಲಿಗೆ ಆಗಮಿಸಿದ ಬಳಿಕ ಮೊದಲ ಬಾರಿಗೆ ಪತ್ನಿ ಮತ್ತು ಮಗಳನ್ನು ಕಂಡ ಡಿ. ಕೆ. ಶಿವಕುಮಾರ್ ಕೆಲವು ಕಾಲ ಭಾವುಕರಾದರು.

      ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ನವದೆಹಲಿಯಲ್ಲಿ ಇದ್ದು, ಪ್ರತಿದಿನ ಭೇಟಿಯಾಗುತ್ತಿದ್ದಾರೆ. ಬೇರೆ ಯಾವುದೇ ಕುಟುಂಬ ಸದಸ್ಯರು ದೆಹಲಿಯಲ್ಲಿಲ್ಲ. ಸೆ.13ರಂದು ಇಡಿ ಕಚೇರಿಗೆ ಪುನಃ ಡಿ. ಕೆ. ಶಿವಕುಮಾರ್ ಹಾಜರುಪಡಿಸಲಾಗುತ್ತದೆ. ಆಗ ಜಾಮೀನು ಸಿಗುವುದೇ? ಎಂದು ಕಾದು ನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+