ಡಿಕೆಶಿ ಅಪ್ಪಿಕೊಂಡು ಸ್ವಾಗತಿಸಿದ ಕೆ. ಸಿ. ವೇಣುಗೋಪಾಲ್

Recommended Video

      D.K.Shivakuamr Met K.C.Venugopal in New Delhi | Oneindia Kannada

      ನವದೆಹಲಿ, ಅಕ್ಟೋಬರ್ 24 : ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಭೇಟಿ ಮಾಡಿದರು. ತಿಹಾರ್ ಜೈಲಿನಿಂದ ಡಿ. ಕೆ. ಶಿವಕುಮಾರ್ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ.

      ಗುರುವಾರ ಮಧ್ಯಾಹ್ನ ಡಿ. ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಕೆ. ಸಿ. ವೇಣುಗೋಪಾಲ್ ಭೇಟಿ ಮಾಡಿದರು. ಡಿ. ಕೆ. ಶಿವಕುಮಾರ್‌ರನ್ನು ಅಪ್ಪಿಕೊಂಡು ವೇಣುಗೋಪಾಲ್ ಸ್ವಾಗತಿಸಿದರು. ಸಂಸದ ಡಿ. ಕೆ. ಸುರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

      ಡಿ. ಕೆ. ಶಿವಕುಮಾರ್ ಭೇಟಿ ಬಗ್ಗೆ ಕೆ. ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ. "ಡಿ. ಕೆ. ಶಿವಕುಮಾರ್ ಭೇಟಿ ಮಾಡಿ ಸಂಸತವಾಯಿತು. ಬಿಜೆಪಿಯ ದ್ವೇಷ ರಾಜಕಾರಣ ಪ್ರಜಾಪ್ರಭುತ್ವ ಉಳಿಸುವ ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

      DK Shivakumar

      ಕೆ. ಸಿ. ವೇಣುಗೋಪಾಲ್ ಎಐಸಿಸಿ ಕಚೇರಿಯಲ್ಲಿದ್ದರು. ಅಲ್ಲಿಯೇ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ತಿಹಾರ್ ಜೈಲಿನಿಂದ ಬಿಡುಗಡೆಯಾದ ಡಿ. ಕೆ. ಶಿವಕುಮಾರ್ ಇನ್ನೂ ದೆಹಲಿಯಲ್ಲಿಯೇ ಇದ್ದು, ರಾಜ್ಯಕ್ಕೆ ಯಾವಾಗ ವಾಪಸ್ ಆಗಲಿದ್ದಾರೆ? ಎಂಬುದು ತಿಳಿದುಬಂದಿಲ್ಲ.

      ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಬಂಧಿಸಿತ್ತು. 50 ದಿನಗಳ ಜೈಲುವಾಸದ ಬಳಿಕ ಬುಧವಾರ ಅವರು ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

      ವಕೀಲರ ಜೊತೆ ಮುಂದಿನ ನಡೆ ಬಗ್ಗೆ ಚರ್ಚಿಸಲು ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿಯೇ ಉಳಿದಿದ್ದಾರೆ. ಇಂದು ಸಂಜೆ ಅಥವ ಶುಕ್ರವಾರ ಅವರು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+