ತೆಲಂಗಾಣ ಕಾಂಗ್ರೆಸ್‌ ಶಾಸಕರನ್ನು ಕಾಪಾಡಲು ಫೀಲ್ಡಿಗಿಳಿಲಿದ್ದಾರೆ ಡಿಕೆ ಶಿವಕುಮಾರ್‌?

ಬೆಂಗಳೂರು, ಡಿಸೆಂಬರ್‌ 2: ತೆಲಂಗಾಣ ವಿಧಾನಸಭಾ ಫಲಿತಾಂಶ ಭಾನುವಾರ ಪ್ರಕಟಗೊಳ್ಳಲಿದ್ದು, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಎಕ್ಸಿಟ್‌ ಪೋಲ್‌ ಸಮೀಕ್ಷೆಗಳು ತಿಳಿಸಿವೆ. ಒಂದು ವೇಳೆ ಕಾಂಗ್ರೆಸ್‌ಗೆ ಬಹುಮತ ಬಂದರೆ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಬೇಕಾಗಿರುವುದರಿಂದ ಟಬ್ರಲ್‌ ಶೂಟರ್‌ ಎಂದೇ ಖ್ಯಾತಿ ಗಳಿಸಿರುವ ಡಿಕೆ ಶಿವಕುಮಾರ್‌ ಫೀಲ್ಡಿಗಿಳಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ತೆಲಂಗಾಣದಲ್ಲಿ ಫಲಿತಾಂಶ ಪ್ರಕಟವಾಗುವ ಮುನ್ನವೇ ಭಾರತ್ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ಭಾನುವಾರ ತೆಲಂಗಾಣಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

DK Shivakumar is in the field to protect Telangana Congress MLAs

ಬಿಆರ್‌ಎಸ್‌ನ ಕೆ ಚಂದ್ರಶೇಖರ್‌ ರಾವ್‌ ಅವರು ನಮ್ಮ ಶಾಸಕರಿಗೆ ಬಲೆ ಬೀಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ನಮ್ಮ ಅಭ್ಯರ್ಥಿಗಳು ನಮಗೆ ಸಿಎಂ (ಕೆಸಿಆರ್) ಅವರೇ ಸಂಪರ್ಕಿಸಿದ್ದಾರೆ ಎಂದು ನಮಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಸರಳ ಬಹುಮತವನ್ನು ಪಡೆಯುವ ವಿಶ್ವಾಸವಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇದು ನನ್ನ ಪಕ್ಷದ ಕೆಲಸ ಹಾಗಾಗಿ ನಾನು ಅಲ್ಲಿಗೆ ಹೋಗುತ್ತಿದ್ದೇನೆ. ಕರ್ನಾಟಕ ಚುನಾವಣೆಯ ಸಮಯದಲ್ಲಿ ಇಡೀ ತೆಲಂಗಾಣ ತಂಡ ನಮ್ಮೊಂದಿಗೆ ಇತ್ತು. ಅದಕ್ಕಾಗಿಯೇ ನಾನು ಸಹ ಹೋಗುತ್ತಿದ್ದೇನೆ. ಫಲಿತಾಂಶದ ನಂತರ ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಯಾವುದೇ ತೊಂದರೆ ಇಲ್ಲ. ಯಾವುದೇ ಬೆದರಿಕೆ ಇಲ್ಲ, ನಮಗೆ ವಿಶ್ವಾಸವಿದೆ, ನಮ್ಮ ಪಕ್ಷ ಆರಾಮವಾಗಿ ಗೆಲ್ಲುತ್ತದೆ ಎಂದು ಅವರು ಹೇಳಿದರು.

DK Shivakumar is in the field to protect Telangana Congress MLAs

ಇದಕ್ಕೂ ಮೊದಲು ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಅವರು ಹಲವಾರು ಬಿಆರ್‌ಎಸ್ ನಾಯಕರಿಂದ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿಕೊಂಡಿದ್ದರು, ಪರಿಸ್ಥಿತಿ ಬಯಸಿದಲ್ಲಿ ಹಳೆಯ ಪಕ್ಷಕ್ಕೆ ಸೇರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಅವರು (ಬಿಆರ್‌ಎಸ್) ಕಳೆದ ಬಾರಿ ನಮ್ಮ 12 ಶಾಸಕರನ್ನು ಕರೆದೊಯ್ದಿದ್ದರು. ಆದರೆ ಈ ಬಾರಿ ಅವರು ಅವರು ನಮ್ಮ ಜನರ ಬಳಿಗೆ ಬರದಂತೆ ತಡೆಯಬೇಕು. ನಮ್ಮ ನಾಯಕರಿಗೆ ಕರೆಗಳು ಬರುತ್ತಿವೆ. ಅವರ ಸಹಾಯ ನಮಗೆ ಬೇಕು ಎಂದು ಕೇಳುವ ಕರೆಗಳು ನನಗೂ ಬಂದಿವೆ. ಪರಿಸ್ಥಿತಿ ಹೀಗಿದ್ದರೆ ಅವರು ನಮ್ಮೊಂದಿಗೆ ಸೇರಲು ಸಿದ್ಧರಿದ್ದಾರೆ. ಆದ್ದರಿಂದ ಅವರು ತಮ್ಮ ನಾಯಕರನ್ನು ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ರೇಣುಕಾ ಚೌಧರಿ ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಸಿದ್ಧವಾಗಿದ್ದು, ಭಾರತದ ಕಿರಿಯ ರಾಜ್ಯದಲ್ಲಿ 10 ವರ್ಷಗಳ ಆಡಳಿತದ ನಂತರ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಹುಮತದ ಕೊರತೆಯನ್ನು ಎದುರಿಸಲಿದೆ ಎಂದು ಶುಕ್ರವಾರ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಮತಗಳಿಕೆ ಶೇ. 42ಕ್ಕೆ ಏರಲಿದೆ, ಬಿಆರ್‌ಎಸ್ ಶೇ. 36ಕ್ಕೆ ಕುಸಿಯಲಿದೆ ಮತ್ತು ಬಿಜೆಪಿ ಶೇ. 14ರಷ್ಟು ಮತಗಳನ್ನು ಪಡೆಯಲಿದೆ. ಎಐಎಂಐಎಂ ಶೇಕಡಾ 3 ಮತ್ತು ಇತರರು ಶೇಕಡಾ 5 ಮತಗಳನ್ನು ಪಡೆಯುತ್ತಾರೆ ಎಂದು ತಿಳಿದು ಬಂದಿದೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಗುರುವಾರ ಮತದಾನ ನಡೆದಿದ್ದು, ರಾಜ್ಯದಲ್ಲಿ ಶೇ.71.34ರಷ್ಟು ಮತದಾನವಾಗಿದೆ. 2018 ರಲ್ಲಿ ಬಿಆರ್‌ಎಸ್‌ (ಆಗ ತೆಲಂಗಾಣ ರಾಷ್ಟ್ರ ಸಮಿತಿ) 119 ಸ್ಥಾನಗಳಲ್ಲಿ 88 ಸ್ಥಾನಗಳನ್ನು ಗೆದ್ದಿತು ಮತ್ತು 47.4 ಶೇಕಡಾ ಮತ ಹಂಚಿಕೆಯನ್ನು ಹೊಂದಿತ್ತು. ಕಾಂಗ್ರೆಸ್ 19 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+