DK Shivakumar: ಹಲವು ಶಾಸಕರು ಎರಡೆರಡು ಮದ್ವೆ ಆಗಿದ್ದಾರೆ, ಪಟ್ಟಿ ಕೊಡ್ತೀನಿ: ಡಿ ಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ

ಬೆಂಗಳೂರು: ಬರ ಪರಿಸ್ಥಿತಿ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಯೊಂದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿಗೆ ಬಂದ ಶಾಸಕರು ವಾಪಸ್ ಹೋಗುವುದಿಲ್ಲ, ಹಲವರು ಎರಡೆರಡು ಮದುವೆಯಾಗಿದ್ದಾರೆ ಎಂದು ಡಿಕೆಶಿ ಸದನದಲ್ಲೇ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ತಿರುಗೇಟು ನೀಡಿದ್ದು, ಸದನದಲ್ಲಿ ಕೆಲಕಾಲ ಹಾಸ್ಯಭರಿತ ವಾತಾವರಣ ನಿರ್ಮಾಣವಾಯಿತು.

DK Shivakumar Explosive Remark in Karnataka Assembly Many MLAs Have Married Twice I Can Give the List

DK Shivakumar:‌ ಬೆಂಗಳೂರಿಗೆ ಬಂದವರು ಎರಡೆರಡು ಮದ್ವೆ ಆಗಿದ್ದಾರೆ

ಚಿತ್ರದುರ್ಗ ಪ್ರವಾಸ ಮುಗಿಸಿ ವಿಧಾನಸಭೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್, ಬರ ಪರಿಸ್ಥಿತಿ ಕುರಿತ ಚರ್ಚೆಯ ಸಂದರ್ಭದಲ್ಲಿ ಬೆಂಗಳೂರಿನ ಜನಸಂಖ್ಯೆ ಹೆಚ್ಚಳದ ವಿಚಾರವನ್ನು ಪ್ರಸ್ತಾಪಿಸಿದರು.

ಬೆಂಗಳೂರಿಗೆ ಬಂದ ಶಾಸಕರು ಯಾರೂ ವಾಪಸ್ ಹೋಗುತ್ತಿಲ್ಲ. ಅದರ ಹಿಸ್ಟರಿ ನನ್ನ ಬಳಿ ಇದೆ. ಎಲ್ಲರೂ ಎರಡೆರಡು ಮದುವೆಯಾಗಿದ್ದಾರೆ. ಬಂದ ಬಂದವರು ಎರಡೆರಡು ಮದುವೆ ಆಗಿದ್ದಾರೆ. ಸುಮಾರು ಒಂದು ಡಜನ್ ಇದೆ. ಬೇಕಾದರೆ ಅದರ ಪಟ್ಟಿಯನ್ನೂ ಹೇಳುತ್ತೇನೆ ಎಂದು ಡಿಕೆ ಶಿವಕುಮಾರ್‌ ಸ್ಪೋಟಕ ಹೇಳಿಕೆ ನೀಡಿದ್ದಾರೆ.

DK Shivakumar: ಧಾರವಾಡ, ಕಾರವಾರ, ದಕ್ಷಿಣ ಕನ್ನಡದವರನ್ನೂ ಹೇಳ್ತೀನಿ

ಇನ್ನೂ ಮುಂದುವರಿದು ಮಾತನಾಡಿದ ಅವರು, ಬೆಂಗಳೂರಿಗೆ ವಲಸೆ ಬರುವವರಿಂದ ನಗರದ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬಂದವರು ನಗರದಲ್ಲೇ ನೆಲೆಸುತ್ತಿದ್ದಾರೆ ಎಂದು ಪ್ರಸ್ತಾಪಿಸಿದರು.

ಆ ರೀತಿಯ ಪರಿಸ್ಥಿತಿ ಬೇಡ. ಬೆಂಗಳೂರಿಗೆ ಬಂದವರು ಯಾರೂ ಬಿಟ್ಟು ಹೋಗುತ್ತಿಲ್ಲ. ಅದಕ್ಕಾಗಿ ಬೆಂಗಳೂರಿನ ಜನಸಂಖ್ಯೆ 33ಕ್ಕಿಂತ 47ರಷ್ಟು ಹೆಚ್ಚಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.‌

ಡಿಕೆಶಿ ಮಾತಿಗೆ ಬಿ.ಪಿ. ಹರೀಶ್ ಕಾಲೆಳೆತ

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಹೇಳಿಕೆಗೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಸದನದಲ್ಲೇ ಪ್ರತಿಕ್ರಿಯಿಸಿದರು. ಅದೇನೋ ಎರಡು, ಮೂರನೇ ಸಂಬಂಧ ಅಂದ್ರಲ್ಲ, ಅದನ್ನ್ಯಾಕೆ ಹುಡುಕಿಕೊಂಡು ಹೋದ್ರಿ? ಶಾಸಕರ ಎರಡು ಮದುವೆ ಬಗ್ಗೆ ಮಾತಾಡಿದ್ರಲ್ಲ, ಅದ್ಯಾಕೆ ಮಾತಾಡಿದ್ರಿ ಸರ್? ನೀವೂ ದೊಡ್ಡ ಕಲಾವಿದರು ಅಲ್ವಾ ಸರ್? ಎಂದು ಹರೀಶ್ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯಾರ ಬಗ್ಗೆಯೂ ಮಾತಾಡೋದು ಬೇಡ. ಅದನ್ನ ಪರ್ಸನಲ್ಲಾಗಿ ಹೇಳ್ತೀನಿ ಎಂದು ಮುಗುಳ್ನಕ್ಕಿದ್ದಾರೆ.

ಬರದ ವಿಚಾರದಲ್ಲಿ ಸರ್ಕಾರದ ಉತ್ತರಕ್ಕೆ ವಿಪಕ್ಷಗಳ ವಿರೋಧ

ಇದೇ ವೇಳೆ, ವಿಧಾನಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಸರ್ಕಾರ ನೀಡಿದ ಉತ್ತರಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಉತ್ತರವನ್ನು ಖಂಡಿಸಿ ವಿಪಕ್ಷ ಸದಸ್ಯರು ಸದನದಿಂದ ವಾಕ್‌ಔಟ್ ಮಾಡಿದರು.

ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಇದೊಂದು ಕಟುಕ ಸರ್ಕಾರ, ಹೃದಯಹೀನ ಸರ್ಕಾರ. ನಾವು ಇದನ್ನು ಇಲ್ಲೇ ಬಿಡಲ್ಲ, ಜನತಾ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು. ಬಿಜೆಪಿ ಶಾಸಕ ಸುನೀಲ್ ಕುಮಾರ್ ಕೂಡ ಸರ್ಕಾರದ ಉತ್ತರವನ್ನು ಟೀಕಿಸಿ, ದಸರಾ ತಿಪ್ಪೆ ಸಾರಿಸಿದ್ದೀರಿ ಎಂದು ಆರೋಪಿಸಿದರು.

ಬರ ಪರಿಸ್ಥಿತಿ ಕುರಿತ ಚರ್ಚೆಯ ನಡುವೆ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಜನಸಂಖ್ಯೆ ಹಾಗೂ ಶಾಸಕರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹೇಳಿಕೆ ಸದನದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+