ಸಿದ್ದರಾಮಯ್ಯ ಇಳಿಸಲು ಡಿಕೆ ಶಿವಕುಮಾರ್ ಮಾತಿನಂತೆ ಬಿವೈ ವಿಜಯೇಂದ್ರ ಪಾದಯಾತ್ರೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಬೆಳಗಾವಿ, ಜುಲೈ 30: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ ಮುಡಾ ಹೋರಾಟ ಸಿದ್ದರಾಮಯ್ಯ ಇಳಿಸಿ ಡಿಕೆ ಶಿವಕುಮಾರ ಸಿಎಂ ಮಾಡಲು ಮಾಡುತ್ತಿದ್ದಾರೆ. ಈ ಹೋರಾಟದ ಬಗ್ಗೆ ಬಹಿರಂಗ ಪಡಿಸಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಆದೇಶದಂತೆ ಬಿಜಿಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆ ಹೊಂದಾಣಿ ರಾಜಕಾರಣ ಇದೆ.

ಡಿ.ಕೆ ಶಿವಕುಮಾರ ಉಪಕಾರ ತೀರಸಲಿಕೆ ಇವತ್ತು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ನಾವು ಮತ್ತು ರಮೇಶ ಜಾರಕಿಹೋಳಿ ಕೇಂದ್ರದಿಂದ ಒಪ್ಪಿಗೆ ಪಡೆದು ಪ್ರತಿಭಟನೆ ಮಾಡುತ್ತಿದ್ದೇವೆ.ಆದರೆ ಎಲ್ಲಿಂದ ಪ್ರತಿಭಟನೆ ಮಾಡಬೇಕೆಂದು ನಿರ್ಣಯವಾಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನೂ ಬಿಜೆಪಿಯಲ್ಲಿ ಬಣ ರಾಜಕೀಯ ನಡೆಯುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಬಿಜೆಪಿಯಲ್ಲಿ ಎರಡು ಬಣ ಇಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ದ ಯಾವುದೇ ಒಳ ಒಪ್ಪಂದ ಇಲ್ಲದೇ ನಾವು ಹೋರಾಟ ಮಾಡುತ್ತಿದ್ದೇವೆ. ತಾವು ಮಾಡುವ ಹೋರಾಟ ಭ್ರಷ್ಟರ ವಿರುದ್ದ ಎಂದು ಹೇಳುವ ಮುಲಕ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ, ಹೆಣ್ಣು ಮಕ್ಕಳಿಗೆ 2,000 ಹಣ ಕೂಡಾ ಬಿಡುಗಡೆಯಾಗಿಲ್ಲ. ಭಾಗ್ಯದ ಲಕ್ಷ್ಮೀ ಬೆಳಗಾವಿಯಲ್ಲಿಯೇ ಕುಳತ್ತಿದ್ದಾರೆ. ಲಕ್ಷ್ಮೀ ಅಕ್ಕಾ ದುಡ್ಡು ಕೊಡಲಿಕ್ಕೆ ತಯಾರಿಲ್ಲ. ಲಕ್ಷ್ಮೀ ಅಕ್ಕಾ ದುಡ್ಡರೆ ಕೊಡವ್ವಾ ಇಲ್ಲಾ ಮನಿಗೆ ನಡಿವಾ ಎಂದು ಲೇವಡಿ ಮಾಡಿದರು.
ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಮಾತ್ರ ಬೆಳೆಯುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಬೆಳೆಯುತ್ತಿದ್ದರು ನಿಜಾ ಎಂದ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ ಒಪ್ಪಿಕೊಂಡರು.












Click it and Unblock the Notifications