ದಾವಣಗೆರೆಯ ಕುಂದವಾಡ ಕೆರೆ ಇನ್ನು ಪ್ರವಾಸಿ ತಾಣ

ದಾವಣಗೆರೆ, ಮೇ.7 : ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂದುವಾಡ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಕೆರೆಯ ಹೂಳೆತ್ತುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆರೆಯ ಹೂಳೆತ್ತುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಸಚಿವರು, ಕುಂದುವಾಡ ಕೆರೆ ಕೇವಲ ಕುಡಿಯುವ ನೀರು ಪೂರೈಸುವ ಕೆರೆಯಾಗಿ ಉಳಿದಿಲ್ಲ. ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಇಲ್ಲಿಗೆ ವಾಯು ವಿಹಾರಕ್ಕೆ ಬರುತ್ತಾರೆ. ಆದ್ದರಿಂದ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. [ಈ ಬಾರಿ ದಾವಣಗೆರೆಯಲ್ಲಿ ಗೆಲುವು ಯಾರದ್ದು?]

ಕೆರೆಯ ಸಮೀಪ ಗಾಜಿನ ಮನೆ ನಿರ್ಮಿಸಲಾಗುವುದು. ಶಿವನ ದೊಡ್ಡ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಉದ್ದೇಶವಿದೆ. ಸರ್ಕಾರದಿಂದ ಅಗತ್ಯ ಅನುದಾನ ತಂದು, ಕೆರೆಯನ್ನು ಮಾದರಿ ಕೆರೆಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಕುಂದುವಾಡ ಕರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ

ಕುಂದುವಾಡ ಕರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ

ದಾವಣಗೆರೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಕುಂದುವಾಡ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಕೆರೆಯ ಸುತ್ತಲೂ ವಾಯುವಿಹಾರಕ್ಕಾಗಿ ಹಲವಾರು ಜನರು ಆಗಮಿಸುತ್ತಾರೆ. ಕೆರೆಯ ಸಮೀಪ ಗಾಜಿನ ಮನೆ ನಿರ್ಮಿಸಲಾಗುತ್ತದೆ ಮತ್ತು ಶಿವನ ದೊಡ್ಡ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಉದ್ದೇಶವಿದೆ ಎಂದು ಹೇಳಿದರು.

ನ್ಯಾಯಾಧೀಕರಣ ಪೀಠದ ಕಲಾಪ ಆರಂಭ

ನ್ಯಾಯಾಧೀಕರಣ ಪೀಠದ ಕಲಾಪ ಆರಂಭ

ಮೈಸೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧಿಕರಣ ಪೀಠದ ಕಲಾಪವು ಸರ್ಕಾರಿ ಅತಿಥಿಗೃಹದಲ್ಲಿ ಆರಂಭವಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ಸುರೇಶ್ ಕೈಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲಾಪದಲ್ಲಿ, ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ 1967ರ ಸೆಕ್ಷನ್ 3(1) ಪ್ರಕಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಇದನ್ನು ಕಾನೂನು ಬಾಹಿರ ಸಂಸ್ಥೆ ಎಂದು ಪರಿಗಣಿಸುವ ಬಗ್ಗೆ ವಿಚಾರಣೆ ನಡೆಯಿತು. ಕಲಾಪ ಆರಂಭವಾದ ಹಿನ್ನಲೆಯಲ್ಲಿ ಅತಿಥಿ ಗೃಹಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದವರಿಗೆ ಮಾತ್ರ ಅತಿಥಿಗೃಹಕ್ಕೆ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಭಂದಿಸಲಾಗಿದೆ. ಮೂರು ದಿನಗಳ ಕಾಲ ಕಲಾಪ ನಡೆಯಲಿದೆ.

ಪುಂಡಾನೆಗಳಿಗೆ ಸಕ್ರೆಬೈಲಿನಲ್ಲಿ ಪಾಠ

ಪುಂಡಾನೆಗಳಿಗೆ ಸಕ್ರೆಬೈಲಿನಲ್ಲಿ ಪಾಠ

ಹಾಸನ ಜಿಲ್ಲೆಯಲ್ಲಿ ಜನರಿಗೆ ಭಾರೀ ಕಾಟಕೊಟ್ಟಿದ್ದ ನಾಲ್ಕು ಪುಂಡಾನೆಗಳನ್ನು ಪಳಗಿಸುವ ಕಾರ್ಯ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಆರಂಭವಾಗಿದೆ. ಎರಡು ದೊಡ್ಡ ಗಂಡಾನೆ ಮತ್ತು ಎರಡು ಮರಿ ಹೆಣ್ಣನೆಗಳನ್ನು ಬುಧವಾರ ಸಂಜೆ ಬಿಡಾರಕ್ಕೆ ಕರೆತರಲಾಗಿದೆ. ಎಲ್ಲಾ ಆನೆಗಳನ್ನು ಕ್ರಾಲ್‌ ನಲ್ಲಿ ಸಿಬ್ಬಂದಿಗಳನ್ನು ಅವುಗಳು ಕಾಡಿಸಿದವು. ಹಾಸನ ಭಾಗದಲ್ಲಿ ಬೆಳೆ ಹಾನಿ ಮಾಡುತ್ತಿದ್ದ ನಾಲ್ಕು ಆನೆಗಳನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಅವುಗಳನ್ನು ಸದ್ಯ ಪಳಗಿಸಲು ಅವುಗಳನ್ನು ಕರೆತರಲಾಗಿದೆ.

ಹಾಲಿನ ಪುಡಿ, ಅನ್ನಭಾಗ್ಯ ಅಕ್ಕಿ ವಶ

ಹಾಲಿನ ಪುಡಿ, ಅನ್ನಭಾಗ್ಯ ಅಕ್ಕಿ ವಶ

ಗುಲ್ಬರ್ಗದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಮತ್ತು ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಒಟ್ಟು 6.58 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಲ್ಬರ್ಗದ ನೆಹರು ಗಂಜ್‌ ಕಾಟನ್ ಮಾರ್ಕೆಟ್ ಸಮೀಪದ ಬೀರಲಿಂಗ ಟ್ರೇಡರ್ಸ್‌ಗೆ ಸೇರಿದ ಕಟ್ಟಡದಲ್ಲಿ 5125 ಕೆಜಿ ಕ್ಷೀರ ಭಾಗ್ಯ ಯೋಜನೆಯ ಹಾಲಿನ ಪುಡಿ ಮತ್ತು 205 ಚೀಲ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು.

ಸ್ವರ್ಣವಲ್ಲಿಯಲ್ಲಿ ಕೃಷಿ ಮೇಳ

ಸ್ವರ್ಣವಲ್ಲಿಯಲ್ಲಿ ಕೃಷಿ ಮೇಳ

ಸ್ವರ್ಣವಲ್ಲೀಯಲ್ಲಿ ಮೇ 12, 13ರಂದು ಕೃಷಿ ಜಯಂತಿ ನಡೆಯಲಿದೆ. ಮೇ 12ರ ಬೆಳಗ್ಗೆ 10ಕ್ಕೆ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳ ಸಾನ್ನಿಧ್ಯದಲ್ಲಿ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ಶ್ರೀಪಾದರು ಕೃಷಿ ಮೇಳವನ್ನು ಉದ್ಘಾಟಿಸಲಿದ್ದಾರೆ. ಕೃಷಿ ವಿಶೇಷ ಸಂಚಿಕೆಯನ್ನು ಸಂಸದ ಅನಂತಕುಮಾರ ಹೆಗಡೆ ಬಿಡುಗಡೆ ಮಾಡಿದರು. ಕೃಷಿ ಮೇಳದ ಅಂಗವಾಗಿ ವಿವಿಧ ವಿಚಾರ ಗೋಷ್ಠಿ, ನಾನಾ ಸ್ಪರ್ಧೆಗಳು, ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಗದಗದಲ್ಲಿ ಲೋಕಾಯುಕ್ತ ದಾಳಿ

ಗದಗದಲ್ಲಿ ಲೋಕಾಯುಕ್ತ ದಾಳಿ

ಕೃಷಿ ಹೊಂಡ ನಿರ್ಮಾಣದಲ್ಲಿ ಅವ್ಯವಹಾರ ನಡೆಸಿದ್ದ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಜಲಗೇರಾ, ಲಕ್ಷೇಶ್ವರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಎಂ.ಪಾಟೀಲ್, ಗದಗ ಜಲಾನಯನ ಅಧಿಕಾರಿ ಚಂದ್ರಶೇಖರ ಬಾಳೆ ಹೊಸೂರು ಅವರ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. 70 ಲಕ್ಷ ರೂ ವೆಚ್ಚದ ಕಾಮಗಾರಿಯಲ್ಲಿ ಇವರು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+