ಕಾರವಾರ ಕಡಲ ತೀರಕ್ಕೆ ಆಗಮಿಸಿದ ವಿಕ್ರಮಾದಿತ್ಯ

ಉತ್ತರ ಕನ್ನಡ, ಜ.8 : ಭಾರತದ ಹೆಮ್ಮೆಯ ಬೃಹತ್ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಮಂಗಳವಾರ ಸಂಜೆ ಕಾರವಾರದ ಸೀಬರ್ಡ್ ನೌಕಾನೆಲೆಗೆ ಆಗಮಿಸಿ ಲಂಗರು ಹಾಕಿದೆ. ಸದ್ಯ ಒಂದು ವಾರದ ಮಟ್ಟಿಗೆ ಮಾತ್ರ ವಿಕ್ರಮಾದಿತ್ಯ ಕಾರವಾರದಲ್ಲಿ ತಂಗಲಿದ್ದು, ನಂತರ ವಿಶಾಖಪಟ್ಟಣಕ್ಕೆ ತೆರಳಿ ಬಳಿಕ ಕಾರವಾರಕ್ಕೆ ವಾಪಸ್ ಆಗಲಿದೆ.

ವಿಶಾಖಪಟ್ಟಣದಿಂದ ಮರಳಿದ ಬಳಿಕ ವಿಕ್ರಮಾದಿತ್ಯ ಕಾರವಾರದ ನೌಕಾನೆಲೆಯಲ್ಲಿ ಕಾಯಂ ಆಗಿ ನೆಲೆಸಲಿದೆ. ಸೀಬರ್ಡ್ ನೌಕಾನೆಲೆ ಬಂದರಿನಿಂದ ಸ್ವಲ್ಪ ದೂರದಲ್ಲಿ ಲಂಗರು ಹಾಕಿದ ಐಎನ್‌ಎಸ್ ವಿಕ್ರಮಾದಿತ್ಯವನ್ನು ದೇಶದ ಇತರ ಯುದ್ಧ ನೌಕೆಗಳು ಸುತ್ತುವರಿದು ಭದ್ರತೆ ಒದಗಿಸಿವೆ.

ಇದೇ ಮೊದಲ ಬಾರಿಗೆ ವಿಕ್ರಮಾದಿತ್ಯ ಕಾರವಾರಕ್ಕೆ ಆಗಮಿಸಿರುವುದರಿಂದ ನೌಕಾನೆಲೆಯ ವೊಳಗೆ ಮತ್ತು ಪ್ರವೇಶ ದ್ವಾರದಲ್ಲಿ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ. ವಿಕ್ರಮಾದಿತ್ಯನ ಸುತ್ತ ಹೆಲಿಕಾಪ್ಟರ್‌ಗಳು ಗಸ್ತು ತಿರುಗುತ್ತಿವೆ. 2013ರ ನ.16 ರಂದು ರಷ್ಯಾದ ಶಿಪ್‌ಯಾರ್ಡ್‌ನಲ್ಲಿ ಈ ಯುದ್ಧ ನೌಕೆಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.

ನಂತರ ದೇಶಕ್ಕೆ ಆಗಮಿಸುವ ಪ್ರವಾಸ ಕೈಗೊಂಡ ಯುದ್ಧನೌಕೆ 8500 ನಾಟಿಕಲ್ ಮೈಲು ದೂರ ಕ್ರಮಿಸಿ ಕಾರವಾರಕ್ಕೆ ಮಂಗಳವಾರ ಆಗಮಿಸಿದೆ. ನಾಲ್ಕು ದಿನಗಳ ಹಿಂದೆ ವಿಕ್ರಮಾದಿತ್ಯ ಅರಬ್ಬಿ ಸಮುದ್ರ ಪ್ರವೇಶಿಸಿತ್ತು. ಕ್ಯಾಪ್ಟನ್ ಸೂರಜ್ ಬೆರ್ರಿ ನೇತೃತ್ವದಲ್ಲಿ ಈ ಯುದ್ಧನೌಕೆಯನ್ನು ಕಾರವಾರಕ್ಕೆ ತರಲಾಗಿದೆ. [ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು]

ಕಾರವಾರಕ್ಕೆ ಬಂದ ವಿಕ್ರಮಾದಿತ್ಯ

ಕಾರವಾರಕ್ಕೆ ಬಂದ ವಿಕ್ರಮಾದಿತ್ಯ

2013ರ ನ.16 ರಂದು ರಷ್ಯಾದ ಶಿಪ್‌ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾದ ವಿಕ್ರಮಾದಿತ್ಯ ಯುದ್ಧ ನೌಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೀಬರ್ಡ್ ನೌಕಾನೆಲೆಗೆ ಮಂಗಳವಾರ ಸಂಜೆ ಆಗಮಿಸಿದೆ. ಸದ್ಯ ಒಂದು ವಾರದ ಮಟ್ಟಿಗೆ ಮಾತ್ರ ವಿಕ್ರಮಾದಿತ್ಯ ಕಾರವಾರದಲ್ಲಿ ತಂಗಲಿದ್ದು, ನಂತರ ವಿಶಾಖಪಟ್ಟಣಕ್ಕೆ ತೆರಳಿ ಬಳಿಕ ಕಾರವಾರಕ್ಕೆ ವಾಪಸ್ ಆಗಲಿದೆ. ವಿಕ್ರಮಾದಿತ್ಯ ಆಗಮನದ ಹಿನ್ನಲೆಯಲ್ಲಿ ಕಾರವಾರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಉಡುಪಿಗೆ ಪ್ರವೀಣ್ ತೊಗಾಡಿಯಾ ಆಗಮನ

ಉಡುಪಿಗೆ ಪ್ರವೀಣ್ ತೊಗಾಡಿಯಾ ಆಗಮನ

ಉಡುಪಿ ಪೇಜಾವರ ಮಠಕ್ಕೆ ವಿಶ್ವಹಿಂದೂ ಪರಿಷತ್ ಮುಖಂಡ ಪ್ರವೀಣ್ ತೊಗಾಡಿಯಾ ಬುಧವಾರ ಆಗಮಿಸಿದ್ದಾರೆ. ಮತಾಂತರ ತಡೆಗಟ್ಟುವುದು, ಗೋ ಪಾಲನೆ, ಗೋ ಮೂತ್ರ ಅಭಿವೃದ್ಧಿ ಪಡಿಸುವ ಯೋಜನೆ ಸೇರಿದಂತೆ ಹಲವು ಧಾರ್ಮಿಕ ವಿಚಾರಗಳ ಬಗ್ಗೆ ಚರ್ಚೆ ತೊಗಾಡಿಯಾ ಪೇಜಾವರ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ತೊಗಾಡಿಯಾ, ಕ್ರಿಶ್ಚಿಯನ್ ಪಾದ್ರಿ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಬೆನ್ನಿಹಿನ್ ಭೇಟಿಯನ್ನು ರದ್ದುಗೊಳಿಸಬೇಕು ಇಲ್ಲದೇ ಇದ್ದರೆ ಭೇಟಿ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೀದರ್ ಉತ್ಸವಕ್ಕೆ ಬಿಡುವಿಲ್ಲ

ಬೀದರ್ ಉತ್ಸವಕ್ಕೆ ಬಿಡುವಿಲ್ಲ

ರಾಜಕೀಯ ಡೊಂಬರಾಟಗಳಿಗೆ ಬೀದರ್ ಉತ್ಸವ ಬಲಿಯಾಗುವ ಸಾಧ್ಯತೆ ಇದೆ. ಬಸವಾದಿ ಶರಣರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲಬೇಕಾದ ಬಸವ ಉತ್ಸವಕ್ಕೆ ನಿಗದಿಯಾಗಿದ್ದ ಮಹೂರ್ತ ರಾಜಕಾರಣಿಗಳಿಗೆ ಬಿಡುವಿಲ್ಲದ ಕಾರಣ ಮುಂದೂಡುವ ಸಾಧ್ಯತೆ ಇದೆ. ಮೊದಲು ಜ. 17ರಿಂದ ಉತ್ಸವ ಆರಂಭವಾಗಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಮಯದ ಕೊರತೆ ಇರುವ ಕಾರಣ ಜ.17ರ ಬದಲು 19ರಂದು ಉತ್ಸವ ಆರಂಭವಾಗುವ ಸಾಧ್ಯತೆ ಇದೆ.

ಹಕ್ಕು ಕಾಯ್ದೆಯ ಪ್ರಯೋಜನ ಪಡೆದುಕೊಳ್ಳಿ

ಹಕ್ಕು ಕಾಯ್ದೆಯ ಪ್ರಯೋಜನ ಪಡೆದುಕೊಳ್ಳಿ

ಪಾರಂಪರಿಕ ಅರಣ್ಯ ನಿವಾಸಿಗರ ಹಕ್ಕು ಕಾಯ್ದೆಯ ಪ್ರಯೋಜನಾ ಪಡೆದುಕೊಳ್ಳಲು ಬಂದಿರುವ ಅರ್ಜಿಗಳನ್ನು ಪರಾಮರ್ಶಿಸಿ ಕ್ರಮ ಕೈಗೊಳ್ಳಲು ಸಚಿವ ಸಂಪುಟದ ಉಪ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕುಕಾಯ್ದೆ ಕರ್ನಾಟಕ ರಾಜ್ಯದಲ್ಲಿ ಹಿಂದಿನ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ. ಈ ಕಾಯ್ದೆಯಡಿ 1.80 ಲಕ್ಷ ಅರ್ಜಿಗಳು ಬಂದಿದ್ದವು. ಆದರೆ, ವಿಲೇವಾರಿಯಾಗಿದ್ದು, ಶೇ.16ರಷ್ಟು ಮಾತ್ರ. ಕರ್ನಾಟಕ ರಾಜ್ಯದ ಅರಣ್ಯವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ

ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ

ಕೋಲಾರ ಜಿಲ್ಲೆಯು ಅಂತರ್ಜಲ ಸಮಸ್ಯೆಯಿಂದ ಪಾರಾಗಬೇಕಾದರೆ ಕೆರೆಗಳ ಒತ್ತುವರಿ ತೆರವುಗೊಳಿಸುವುದು ಅಗತ್ಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿದ ಮಾಹಿತಿ ಗಮನಿಸಿದರೆ ಕೆರೆಗಳ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ಎಡವಿರುವಂತೆ ಭಾಸವಾಗುತ್ತಿದೆ. ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದರೆ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆರಿಯಲಿದೆ ಎಂದು ಹೇಳಿದರು. ಕಳೆದ ವರ್ಷ ನವೆಂಬರ್ 26 ರಂದು ನಮ್ಮ ಸರ್ಕಾರ ಗ್ರಾಮೀಣಾಭಿವೃದ್ಧಿ ಸಂಬಂಧ 15 ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಕೆರೆಗಳ ಅಭಿವೃದ್ಧಿಯೂ ಒಂದಾಗಿದೆ. ಅಂತರ್ಜಲ ಸಮಸ್ಯೆಗೆ ಮಳೆಯ ಕೊರತೆ ಒಂದು ಕಾರಣವಾದರೆ, ನೀರು ಸಂಗ್ರಹಣೆಯಾಗದ ರೀತಿಯಲ್ಲಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದು ಮತ್ತೊಂದು ಪ್ರಮುಖ ಕಾರಣ ಎಂದು ಸಚಿವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+