ವಿದೇಶಕ್ಕೆ ಹಾರಿದ ಜಾರಕಿಹೊಳಿ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಗಾಗ ಅಸಮಾಧಾನದ ಹೊಗೆ ಕಾಣುತ್ತಿದ್ದು ಸರ್ಕಾರದ ಮೇಲೆ ಇದರಿಂದ ವ್ಯತಿಕ್ತ ಪರಿಣಾಮ ಆಗಲಿದೆ ಅನ್ನೋದು 'ಕೈ' ವಿರೋಧಿಗಳ ಲೆಕ್ಕಾಚಾರ. ಆದ್ರೆ ಇದು ಸುಳ್ಳು, ಕರ್ನಾಟಕ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇದೆ ಅನ್ನೋದು ಕರ್ನಾಟಕ ಕಾಂಗ್ರೆಸ್ ನಾಯಕರ ಉತ್ತರ. ಇಷ್ಟೆಲ್ಲಾ ಗೊಂದಲದ ನಡುವೆ ಇದೀಗ ದಿಢೀರ್ ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ಬೆಂಬಲಿಗರ ಜೊತೆ ವಿದೇಶಕ್ಕೆ ಹಾರಿದ್ದು ಅನುಮಾನದ ಹುತ್ತ ಬೆಳೆಯಲು ಕಾರಣವಾಗಿದೆ.

ಹೌದು ಕರ್ನಾಟಕ ಉಪಮುಖ್ಯಮಂತ್ರಿ & ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್ ಮಧ್ಯೆ ಮುನಿಸು ಇದೆ ಎಂಬುದು ಹಳೇ ಆರೋಪ. ಆದರೆ ಈ ಮುನಿಸು ಇದೀಗ ಜ್ವಾಲೆಯ ರೂಪ ಪಡೆದಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲೂ ಕೆಲ ದಿನಗಳ ಹಿಂದಷ್ಟೆ, ಇಂತಹದ್ದೇ ಬೆಳವಣಿಗೆ ನಡೆದು ಅದೇ ಸಮಯದಲ್ಲಿ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಮೀಟ್ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಈಗ ಮತ್ತೊಮ್ಮೆ ಸತೀಶ್ ಜಾರಕಿಹೊಳಿ ವಿಮಾನ ಏರಿ ತಮ್ಮ ಬೆಂಬಲಿಗರ ಜೊತೆ ವಿದೇಶಕ್ಕೆ ಹಾರಿದ್ದಾರೆ.

Discover Why Minister Satish Jarkiholi Went Foreign Trip With Supporters

ಜಾರಕಿಹೊಳಿ ಬ್ರದರ್ಸ್ ಮುನಿಸು ಜೋರಾಯ್ತಾ?

ಲೋಕೋಪಯೊಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಆಪ್ತರ ಜೊತೆಯಲ್ಲಿ ವಿದೇಶಕ್ಕೆ ತೆರಳಿದ್ದಾರೆ. ಅವರ ಈ ನಡೆ ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೂ ಕಾರಣವಾಗಿದೆ. ಅಲ್ದೆ ಕಾಂಗ್ರೆಸ್ ಒಳಗೆ ಅಸಮಾಧಾನದ ಹೊಗೆ ಆವರಿಸಿದೆ ಎನ್ನುವ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶುಕ್ರವಾರ ತಡರಾತ್ರಿ ವಿದೇಶಕ್ಕೆ ಹೋಗಿದ್ದಾರೆ ಅಂತಾ ಹೇಳಲಾಗಿದೆ. ಅವರು ತಮ್ಮ ಮಗ & ಕೆಲ ಆಪ್ತರ ಜತೆ ಪ್ರಯಾಣ ಬೆಳೆಸಿದ್ದಾರೆ ಎಂದು ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

ಹಿಂದೆ ಕೂಡ ಅಸಮಾಧಾನ ಸ್ಫೋಟ?

ಮತ್ತೊಂದು ಕಡೆ, ಈ ಹಿಂದೆ ತಮ್ಮ ಆಪ್ತ ಶಾಸಕರ ಜೊತೆ ಸಚಿವರು ದುಬೈಗೆ ಹೋಗಲಿದ್ದಾರೆ ಅಂತಾ ಹೇಳಲಾಗಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ, ಕೆಲವರ ಅಸಮಾಧಾನ ಕೂಡ ಸ್ಫೋಟವಾಗಿತ್ತು. ಆದ್ರೆ ಇದೀಗ ಶಾಸಕರ ಬದಲು ತಮ್ಮ ಆಪ್ತರೊಂದಿಗೆ ಸತೀಶ್ ಜಾರಕಿಹೊಳಿ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಅಂದ್ರೆ ದಸರಾ ವೇಳೆ ಕೆಲ ಶಾಸಕರ ಜೊತೆ ಪ್ರವಾಸಕ್ಕೆ ತೆರಳಲು ಜಾರಕಿಹೊಳಿ ಮುಂದಾಗಿದ್ದರು ಅಂತ ಹೇಳಲಾಗಿತ್ತು.

ಒಟ್ನಲ್ಲಿ ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ಭರ್ಜರಿ ಜಯ ಸಾಧಿಸಿ, 130ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚಿಸಿದ್ದರೂ ಕಾಂಗ್ರೆಸ್‌ಗೆ 'ಆಪರೇಷನ್' ಭಯ ಕಾಡುತ್ತಿದೆ. ಅದ್ರಲ್ಲೂ ಈ ಬಾರಿ ಕಾಂಗ್ರೆಸ್‌ಗೆ ಬೆಳಗಾವಿ ರಾಜಕೀಯವೇ ದೊಡ್ಡ ಸವಾಲಾಗುತ್ತಿದೆ. ಅದನ್ನ ನಿಭಾಯಿಸಿ ಸರ್ಕಾರವನ್ನು ಬಲಪಡಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಆದರೂ ಒಳಗೊಳಗೆ, ಅಸಮಾಧಾನದ ಹೊಗೆ ಎದ್ದಿರುವುದು ಲೋಕಸಭೆ ಚುನಾವಣೆ ಸಮಯದಲ್ಲೇ ಕಾಂಗ್ರೆಸ್‌ನ ಕೇಂದ್ರ ನಾಯಕರಿಗೆ ಆತಂಕ ಹುಟ್ಟಿಸಿರುವುದು ಸುಳ್ಳಲ್ಲ.

Discover Why Minister Satish Jarkiholi Went Foreign Trip With Supporters

ಪ್ರಬಲ ನಾಯಕ ಸತೀಶ್ ಜಾರಕಿಹೊಳಿ

ಜಾರಕಿಹೊಳಿ ಬ್ರದರ್ಸ್ ಬೆಳಗಾವಿ ರಾಜಕೀಯದಲ್ಲಿ ತಮ್ಮದೇ ಆದ ಹವಾ ಇಟ್ಟಿದ್ದು ಇದು ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಗೊತ್ತು. ಹಾಗೇ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟ ನಂತರ ಸತೀಶ್ ಜಾರಕಿಹೊಳಿ ಮತ್ತಷ್ಟು ಪ್ರಬಲರಾಗಿದ್ದಾರೆ. ಆದ್ರೂ ಬೆಳಗಾವಿ ರಾಜಕೀಯ ಆಗಾಗ ಬೂದಿ ಮುಚ್ಚಿದ ಕೆಂಡವಾಗಿದೆ ಎಂಬ ಆರೋಪ ಇದೆ. ಅಕಸ್ಮಾತ್ ಈ ಹೊಗೆಯೇ ಜ್ವಾಲೆ ರೂಪ ಪಡೆದು ಸರ್ಕಾರಕ್ಕೆ ಆಪತ್ತು ಎದುರಾದರೆ ಪರಿಸ್ಥಿತಿ ಕೈಮೀರಲಿದೆ. ಮುಂದೆ ಕಾಂಗ್ರೆಸ್ ಸರ್ಕಾರಕ್ಕೆ, ಇದರಿಂದ ಆಪತ್ತು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಅಲರ್ಟ್ ಆಗಿರುವ ಕಾಂಗ್ರೆಸ್ ನಾಯಕರು ವಿವಾದ ತಣ್ಣಗಾಗಿಸಲು ಯತ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+