ಜಮೀನಿಗೆ ಹಾಯ್ ಹೇಳಲು, ಸೀದಾ ಸೀದಾ ಹೊಲಕ್ಕೆ ನುಗ್ಗಿದ KSRTC ಬಸ್?

ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಒಂದು ಹವಾ ಇಟ್ಟಿವೆ, ಹಾಗೇ ಹೊರ ರಾಜದಲ್ಲೂ ಕೆಎಸ್‌ಆರ್‌ಟಿಸಿ ಬಸ್ ಅಂದ್ರೆ ಒಂದು ಬೆಲೆ ಇದೆ. ಆ ಲೆಕ್ಕಾಚಾರದಲ್ಲಿ ನೋಡುವುದಾದರೆ, ಕನ್ನಡಿಗರ ನಾಡಿನ ಬಸ್‌ಗಳು ಉತ್ತಮ ಗುಣಮಟ್ಟ ಕೂಡ ಕಾಯ್ದುಕೊಂಡಿವೆ. ಆದ್ರೆ ಹೀಗೆ ಉತ್ತಮ ಹೆಸರು ಪಡೆದಿರುವ ಕೆಎಸ್‌ಆರ್‌ಟಿಸಿ ಸಂಸ್ಥೆಗೆ, ಕೆಲವು ಚಾಲಕರು ಮಾತ್ರ ಸಮಸ್ಯೆ ಮಾಡುತ್ತಿದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಬಸ್ ಓಡಿಸಿ, ಪ್ರಯಾಣಿಕರ ಜೀವ ಬಾಯಿಗೆ ಬರಿಸುತ್ತಿದ್ದಾರೆ.

ಅಂದಹಾಗೆ ಇಂಥದ್ದೇ ಘಟನೆಯೊಂದು ಇಂದು ವರದಿಯಾಗಿದೆ. ಬಾಗೇಪಲ್ಲಿ ಕಡೆಯಿಂದ, ಗುಡಿಬಂಡೆಗೆ ಬರುತ್ತಿದ್ದ ಬಸ್ ದೊಡ್ಡ ಆಪತ್ತಿಗೆ ಸಿಲುಕಿ ಬಚಾವ್ ಆಗಿದೆ. ನೇರವಾಗಿ ರಸ್ತೆ ಮೇಲೆ ಹೋಗುತ್ತಿದ್ದ ಬಸ್ ಒಂದು, ಇದ್ದಕ್ಕಿದ್ದಂತೆ ಜಮೀನಿಗೆ ನುಗ್ಗಿದೆ. ಆದರೆ ಈ ಘಟನೆ ಹಿಂದೆ ಚಾಲಕನ ಎಡವಟ್ಟು ಪ್ರಮುಖ ಕಾರಣ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ದುರಂತದಲ್ಲಿ ಆಗಿದ್ದೇನು? ಪ್ರಯಾಣಿಕರು ಸೇಫ್ ಆಗಿದ್ದಾರಾ? ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Discover Why KSRTC Bus Entered Empty Land From Road

ರಸ್ತೆಯಲ್ಲಿದ್ದ ಬಸ್ ಜಮೀನಿಗೆ ನುಗ್ಗಿತ್ತು!

ಹೌದು ಬಾಗೇಪಲ್ಲಿಯಿಂದ ಗುಡಿಬಂಡೆ ಕಡೆ ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್‌ ಅತಿ ವೇಗದ ಚಾಲನೆ ಕಾರಣ ಹೀಗೆ ಜಮೀನಿಗೆ ನುಗ್ಗಿದೆ ಎಂಬ ಆರೋಪ ಕೇಳಿಬಂದಿದೆ. ದುರಂತ ವೇಳೆ ಬಸ್‌ನಲ್ಲಿ ಸುಮಾರು 20 ಜನರಿದ್ದರು ಎನ್ನಲಾಗಿದೆ. ಪ್ರಯಾಣಿಕರು ತಿಳಿ ಹೇಳಿದರು ಕೂಡ ಚಾಲಕ ಹೀಗೆ ಅಜಾಗರೂಕತೆಯಿಂದ ಚಾಲನೆ ಮಾಡಿದ್ದು. ಅತಿ ವೇಗದ ಚಾನೆಯ ಹಿನ್ನೆಲೆ ಬಸ್ ನೋಡ ನೋಡುತ್ತಿದ್ದಂತೆ ರಸ್ತೆಯನ್ನ ಬಿಟ್ಟು ಬದಿಯಲ್ಲಿದ್ದ ಜಮೀನಿಗೆ ನುಗ್ಗಿದೆ. ಈ ವೇಳೆ ಬಸ್‌ನ ಮುಂದಿನ ಎರಡು ಚಕ್ರಗಳು ಕೂಡ ಕಳಚಿಕೊಂಡು ಹೊರಗೆ ಬಿದ್ದಿವೆ.

ಆಸ್ಪತ್ರೆಯಲ್ಲಿ ಪ್ರಯಾಣಿಕರ ನರಳಾಟ

ಗುಡಿಬಂಡೆ ಪಟ್ಟಣದ ಸಮೀಪ ಇರುವ ಉಪ್ಪಾರಹಳ್ಳಿ ಬಿಡುತ್ತಿದ್ದಂತೆ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿಗೆ ಬಸ್ ನುಗ್ಗಿದೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ, ಹೀಗಾಗಿ ಜೀವ ಹಾನಿಯ ರೀತಿ ದುರ್ಘಟನೆ ತಪ್ಪಿದೆ. ಇನ್ನು ಕೆಲ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಬಸ್ ಇದ್ದ ಜಾಗಕ್ಕೆ ಸ್ಥಳೀಯರು ಓಡಿ ಬಂದು ಗಾಯಾಳುಗಳಿಗೆ ಸಹಾಯ ಮಾಡಿದ್ದಾರೆ.

Discover Why KSRTC Bus Entered Empty Land From Road

ಹಾಗೇ ಗಾಯಾಳುಗಳನ್ನ ಆ ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಬಸ್ ನಿರ್ವಾಹಕನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು ಮತ್ತೊಬ್ಬ ಪ್ರಯಾಣಿಕ ನರಳುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ, ಚಾಲಕನ ತಪ್ಪಿದ್ದರೆ ಕಠಿಣ ಕ್ರಮ ಕೈಗೊಳ್ಳಿ ಎಂದು ಪ್ರಯಾಣಿಕರ ಸಂಬಂಧಿಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+