‘ಯಡಿಯೂರಪ್ಪನವರ ಮಗನನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ..’

ಬಿಜೆಪಿ ಕರ್ನಾಟಕಕ್ಕೆ ನೂತನ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾಗಿದ್ದು, ಇದೇ ವಿಚಾರವನ್ನ ಅಸ್ತ್ರ ಮಾಡಿಕೊಂಡಿದೆ ಕಾಂಗ್ರೆಸ್. ಕರ್ನಾಟಕ ವಿಧಾನಸಭೆ ಎಲೆಕ್ಷನ್ ಬಳಿಕ ರಾಜ್ಯದಲ್ಲಿ ನೂತನ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಮಲ ಪಾಳಯದ ಒಳಗಡೆಯೇ ಕಿಡಿ ಹೊತ್ತಿತ್ತು. ಈ ವಿಚಾರ ಹಿಡಿದು ಕಾಂಗ್ರೆಸ್ ಇಷ್ಟುದಿನ ಬಿಜೆಪಿ ನಾಯಕರನ್ನ ಕೆಣಕಿ ಕೆಣಕಿ ತಿರುಗೇಟು ಕೊಡುತ್ತಿತ್ತು. ಈಗ ಹೊಸ ಅಧ್ಯಕ್ಷರು ಬಂದ ನಂತರವೂ, ಬೇರೆಯದ್ದೇ ಅಸ್ತ್ರ ಪ್ರಯೋಗ ಮಾಡಿದೆ.

ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ & ಕಾಂಗ್ರೆಸ್ ನಡುವೆ ಸೋಷಿಯಲ್ ಮೀಡಿಯಾ ವಾರ್ ಶುರುವಾಯ್ತು. ಹೀಗೆ 1 ವರ್ಷದಿಂದ ತಿಕ್ಕಾಟ ತೀವ್ರವಾಗಿ ನಡೆಯುತ್ತಿದೆ ಅಂತಾ ಹೇಳಬಹುದು. ಹೀಗಿದ್ರೂ ಪರಿಸ್ಥಿತಿ ಇನ್ನೂ ತಣ್ಣಗಾಗಿಲ್ಲ, ಹೀಗಿದ್ದಾಗಲೇ ಬಿಜೆಪಿ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿದೆ. ಈ ವಿಚಾರವನ್ನ ಅಸ್ತ್ರ ಮಾಡ್ಕೊಂಡು ಇದೀಗ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ಹಾಗಾದರೆ ಕಾಂಗ್ರೆಸ್ ಹೇಳಿದ್ದು ಏನು? ಬಿಜೆಪಿಗೆ ಈ ಮೂಲಕ ಕೈ ಪಾಳಯ ತಿರುಗೇಟು ನೀಡಿದ್ದು ಹೇಗೆ?

inside-fight-started-in-bjp

ಬಿಜೆಪಿ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?

ಬಿ.ವೈ.ವಿಜಯೇಂದ್ರ ಆಯ್ಕೆಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಆರಂಭಿಸಿದ್ದು, ಈ ಕುರಿತು ಸಾಲು ಸಾಲು ಟ್ವೀಟ್ ಮಾಡುತ್ತಿದೆ. ಈ ರೀತಿ ಈಗ '#BJPvsBJP ಕದನ ಈಗ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. 20, 30 ವರ್ಷಗಳಿಂದ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಪಕ್ಷದಲ್ಲಿ ಕಾಣಿಸಿಕೊಂಡು "ಯಡಿಯೂರಪ್ಪನವರ ಮಗ" ಎಂಬ ಒಂದೇ ಅರ್ಹತೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವ ಯಡಿಯೂರಪ್ಪನವರ ಮಗನನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ.. ಒಡಕಿನ ಮನೆಯಾಗಿರುವ #FamilyJanataParty ಮುಂದೆ ಸಂಪೂರ್ಣ ನುಜ್ಜುಗುಜ್ಜಾಗುವ ಎಲ್ಲಾ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ.' ಎಂದು ವಾಗ್ದಾಳಿ ನಡೆಸಿದೆ.

'ಬಿಜೆಪಿ ಲೀಡರ್ ಲೆಸ್ ಪಕ್ಷ'

ಹಾಗೇ ಇನ್ನೊಂದು ಟ್ವೀಟ್ ಮೂಲಕ, 'ಯಡಿಯೂರಪ್ಪನವರ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್ ಲೆಸ್ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ "ಎಳೆ ಹುಡುಗ"ನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ ? @BJP4Karnataka ಉತ್ತರಿಸುವುದೇ?' ಎಂದು ಬಿಜೆಪಿ ನಾಯಕರನ್ನ ಕೆಣಕಿದೆ ಕಾಂಗ್ರೆಸ್.

ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಫೈಟ್ ಜೋರಾಗಿದೆ, ಇದೀಗ ಮಾಜಿ ಸಿಎಂ ಪುತ್ರನಿಗೇ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. ಹೀಗೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ತಿಕ್ಕಾಟ ಮತ್ತು ಕಿತ್ತಾಟ ಇನ್ನಷ್ಟು ಜೋರಾಗುವ ನಿರೀಕ್ಷೆ ಇದೆ. ಹಾಗೇ ಈ ಇಬ್ಬರ ನಡುವಿನ ತಿಕ್ಕಾಟ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ, ಚರ್ಚೆಗೂ ಒಳ್ಳೆಯ ವೇದಿಕೆ ಒದಗಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+