ಪರಭಾಷಿಕರ ಹಾವಳಿ ಇರುವ ಜಾಗದಲ್ಲೇ ಕನ್ನಡಿಗರ ಗತ್ತು, ಪುಸ್ತಕ ಮೇಳದ ತಾಕತ್ತು!
ಬೆಂಗಳೂರಿನಲ್ಲಿ ಕನ್ನಡವೇ ಮರೆಯಾಗಿ ಹೋಗುತ್ತಿದೆ ಎನ್ನುವ ಆರೋಪಗಳು ಆಗಾಗ ನಮ್ಮ & ನಿಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಅದ್ರಲ್ಲೂ ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶ, ಸಂಪೂರ್ಣವಾಗಿ ಪರಭಾಷಿಕರ ಹಿಡಿತಕ್ಕೆ ಸಿಲುಕಿವೆ. ಅದೇ ರೀತಿ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ ಕೂಡ ಪರಭಾಷಿಕರ ಹಿಡಿತದಲ್ಲೇ ಇದ್ದು, ಇದೇ ಸ್ಥಳದಲ್ಲಿ ಈಗ ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ತಮ್ಮ ಶಕ್ತಿ ತೋರಿಸುತ್ತಿದ್ದಾರೆ.
ಅಷ್ಟಕ್ಕೂ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆ (HSR Layout) ತುಂಬಾ ಅನ್ಯಭಾಷಿಕರ ಹಾವಳಿ ಹೆಚ್ಚಾಗಿದೆ. ಪರಭಾಷಿಕರ ಕಾರಣದಿಂದ ಇಲ್ಲಿ ಕನ್ನಡತನ ದಿನೇ ದಿನೇ ಕ್ಷೀಣಿಸುತ್ತಿದೆ. ಈ ಭಾಗದ ಕನ್ನಡ ಮಕ್ಕಳಿಗೆ ಕನ್ನಡದ ಓದು, ಹಬ್ಬಗಳು ಮರೆತೇ ಹೋಗುತ್ತಿವೆ ಎಂಬ ಮಾತು ಆಗಾಗ ಕಿವಿಗೆ ಬೀಳುತ್ತಿದೆ. ಈ ಹಿನ್ನಲೆ ಕನ್ನಡ ಸಂಸ್ಕೃತಿಯನ್ನು ಪಸರಿಸುವ "ಪುಸ್ತಕ ಸಂತೆ" ಎಂಬ ವಿನೂತನ ಕಾರ್ಯಕ್ರಮನ, ಎಚ್‌ಎಸ್ಆರ್ ಬಡವಾಣೆಯ ಸ್ವಾಭಿಮಾನಿ ಉದ್ಯಾನದಲ್ಲಿ ಆಯೋಜಿಸಲಾಗಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕನ್ನಡಿಗರ ಗತ್ತು, ಪುಸ್ತಕ ಮೇಳದ ತಾಕತ್ತು!
ಈ ಪುಸ್ತಕ ಸಂತೆಯಲ್ಲಿ, ಕನ್ನಡ ನಾಡಿನ ಸುಮಾರು 100ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಿ ಬೆಂಬಲ ನೀಡುತ್ತಿದ್ದಾರೆ. ನೂರಾರು ಸಾಹಿತಿಗಳು & ಸಾವಿರಾರು ಓದುಗರು ಅಂದು, ಈ ಪುಸ್ತಕ ಸಂತೆಗೆ ಆಗಮಿಸುತ್ತಿದ್ದಾರೆ. ಕನ್ನಡ ಓದುವ ಸಂಸ್ಕೃತಿ ಪಸರಿಸುವ ದೃಷ್ಠಿಯಿಂದಲೇ ಈ ಪುಸ್ತಕ ಸಂತೆ ಇದೀಗ ಗಮನ ಸೆಳೆಯುತ್ತಿದೆ. ಹಾಗಾದರೆ ಈ ಪುಸ್ತಕ ಸಂತೆ ನಡೆಯುವ ದಿನಾಂಕವು ಯಾವತ್ತು? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಪುಸ್ತಕ ಸಂತೆಗೆ ಮರೆಯದೇ ಬರಬೇಕಂತೆ!
ಅಷ್ಟಕ್ಕೂ ಇದೇ ಫೆಬ್ರವರಿ ತಿಂಗಳು ಅಂದ್ರೆ 2024ರ ಫೆಬ್ರವರಿ 10 ಮತ್ತು 11ನೇ ತಾರೀಖಿನಂದು, ಈ ಮಹತ್ವದ "ಪುಸ್ತಕ ಸಂತೆ" ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಷ್ಟಕ್ಕೂ ಇದೇ ಪುಸ್ತಕ ಸಂತೆಗೆ ಎಚ್‌ಎಸ್‌ಆರ್ ಬಡಾವಣೆಯ ಪ್ರಮುಖರು ಜೊತೆಯಾಗಿದ್ದು. ಮಾಜಿ ಸಂಸದ ಉಗ್ರಪ್ಪ ಪುಸ್ತಕ ಸಂತೆಗೆ ಬೆಂಬಲ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಕರಾಗಿ ಆಗಮಿಸುತ್ತಿದ್ದಾರೆ. ಸಚಿವರು, ಸರ್ವಪಕ್ಷ ನೇತಾರರು, ಸಾಹಿತಿಗಳು & ಓದುಗರು, ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಎರಡು ದಿನಗಳಲ್ಲಿ, ಸುಮಾರು ಇಪ್ಪತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಕೂಡ ಇದೆಯಂತೆ.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಡೆಯುವ ಪುಸ್ತಕ ಸಂತೆ ಕಾರ್ಯಕ್ರಮದ ಮುಂದಾಳತ್ವನ ವೀರಲೋಕ ಬುಕ್ಸ್ ಸಂಸ್ಥಾಪಕರಾದ, ವೀರಕಪುತ್ರ ಶ್ರೀನಿವಾಸ್ ಅವರು ವಹಿಸಿಕೊಂಡಿದ್ದಾರೆ. ಹಾಗೇ, ಯುವ ಸಾಹಿತಿ ಮತ್ತು ಸಂಯೋಜಕರಾದ ಅನಿಲ್ ರೆಡ್ಡಿ ಕೂಡ ಕಾರ್ಯಕ್ರಮವನ್ನು ಸಂಘಟಿಸಿದ್ದಾರೆ. ಈ ಮೂಲಕ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಇದೀಗ, ಕನ್ನಡದ ಕಂಪು ಹರಿಸಲು ಸಜ್ಜಾಗಿದ್ದಾರೆ. 2024ರ ಫೆಬ್ರವರಿ 10 ಹಾಗೂ 11ನೇ ತಾರೀಖು ನೀವು ಕೂಡ ಲಭ್ಯ ಇದ್ದರೆ, ಒಮ್ಮೆ ಈ ಪುಸ್ತಕ ಸಂತೆಗೆ ಭೇಟಿ ನೀಡಿ ಬನ್ನಿ.












Click it and Unblock the Notifications