ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಕಿ ಬೆಲೆ ಏರಿಸಿದ ಆರೋಪ!
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸೋಷಿಯಲ್ ಮೀಡಿಯಾ ವಾರ್, ಮಹಾಯುದ್ಧದಂತೆ ಭಾಸವಾಗುತ್ತಿದೆ. ಯಾಕೆ ಗೊತ್ತಾ? ಆ ಕಡೆ ಒಬ್ಬರು ಟ್ವೀಟ್ ಮಾಡಿದರೆ ಮತ್ತೊಂದು ಕಡೆ ತಕ್ಷಣ ಇನ್ನೊಂದು ಟ್ವೀಟ್ ಪೋಸ್ಟ್ ಆಗುತ್ತೆ. ಹೀಗೆ ಇಬ್ಬರೂ ಆರೋಪ & ಪ್ರತ್ಯಾರೋಪ ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಇದೇ ರೀತಿ ಈಗ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಮತ್ತೊಂದು ಗಂಭೀರ ಆರೋಪ ಮಾಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು, ಗ್ಯಾರಂಟಿ ಘೋಷಣೆಗಳ ಕೊಡುಗೆ ಕೂಡ ದೊಡ್ಡದಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಗ್ಯಾರಂಟಿ ವಾರ್' ಕೂಡ ಜೋರಾಗಿದೆ. ಒಂದು ಕಡೆ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಕನಿಷ್ಠ ಸೌಲಭ್ಯ ಒದಗಿಸಲು ಸಾಧ್ಯ ಎನ್ನುತ್ತಿದೆ. ಆದರೆ, ಮೊದಲಿಗೆ ಬಿಜೆಪಿ ಈ ಯೋಜನೆ ಮೂಲಕ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತೆ ಅಂತಿತ್ತು. ಈಗ ಆ ಅಸ್ತ್ರವನ್ನು ಬೇರೆಯ ರೀತಿ ಪ್ರಯೋಗ ಮಾಡುತ್ತಿದೆ. ಹಾಗಾದರೆ ಇದೀಗ ಬಿಜೆಪಿ ಹೇಳಿರುವುದು ಏನು?

'ಅಕ್ಕಿ ಬೆಲೆ ಏರಿಸಿ ಡಬಲ್ ಶಾಕ್'
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, 'ಬರದಿಂದ ಬಸವಳಿಯುತ್ತಿರುವ ಜನತೆಗೆ ದಿನಬಳಕೆ ವಸ್ತುಗಳ ಬೆಲೆಯೇರಿಸಿ ಶಾಕ್ ನೀಡಿದ್ದ @INCKarnataka ಸರ್ಕಾರ, ಈಗ ಮತ್ತೊಮ್ಮೆ ಅಕ್ಕಿ ಬೆಲೆ ಏರಿಸಿ ಡಬಲ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆಜಿ ಅಕ್ಕಿಯಲ್ಲಿ, 2 ಕೆಜಿ ಅಕ್ಕಿಗೆ ಕನ್ನ ಹಾಕಿರುವ ಸಿಎಂ @siddaramaiah ಅವರ ಸರ್ಕಾರ, ಈಗ ಏಕಾಏಕಿ ಅಕ್ಕಿ ಬೆಲೆ ಏರಿಸಿ, ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ. ಸಿಎಂ ಸಿದ್ದರಾಮಯ್ಯರವರೇ, ನಿಮಗೆ ನಿಜವಾಗಿಯೂ ಬಡವರ ಪರ ಕಾಳಜಿಯಿದ್ದರೆ, ಮಾನವೀಯತೆಯುಳ್ಳ ಅಂತಃಕರಣ ನಿಮ್ಮಲ್ಲಿದ್ದರೆ, ಮೊದಲು ನುಡಿದಂತೆ 10 ಕೆಜಿ ಅಕ್ಕಿ ನೀಡಿ ಮರ್ಯಾದೆ ಉಳಿಸಿಕೊಳ್ಳಿ.' ಅಂತ ಸವಾಲು ಹಾಕಿದೆ.
ಬರದಿಂದ ಬಸವಳಿಯುತ್ತಿರುವ ಜನತೆಗೆ ದಿನಬಳಕೆ ವಸ್ತುಗಳ ಬೆಲೆಯೇರಿಸಿ ಶಾಕ್ ನೀಡಿದ್ದ @INCKarnataka ಸರ್ಕಾರ, ಈಗ ಮತ್ತೊಮ್ಮೆ ಅಕ್ಕಿ ಬೆಲೆ ಏರಿಸಿ ಡಬಲ್ ಶಾಕ್ ನೀಡಿದೆ.
— BJP Karnataka (@BJP4Karnataka) November 9, 2023
ಕೇಂದ್ರ ಸರ್ಕಾರ ನೀಡುತ್ತಿದ್ದ 5ಕೆಜಿ ಅಕ್ಕಿಯಲ್ಲಿ, 2 ಕೆಜಿ ಅಕ್ಕಿಗೆ ಕನ್ನ ಹಾಕಿರುವ ಸಿಎಂ @siddaramaiah ಅವರ ಸರ್ಕಾರ, ಈಗ ಏಕಾಏಕಿ ಅಕ್ಕಿ ಬೆಲೆ ಏರಿಸಿ, ರಾಜ್ಯದ… pic.twitter.com/BUb1PE9PfT
'ರಾಜ್ಯದ ಕಡುಭ್ರಷ್ಟ...'
ಹಾಗೇ ಮತ್ತೊಂದು ಟ್ವೀಟ್ ಮೂಲಕ, 'ರಾಜ್ಯದ ಕಡುಭ್ರಷ್ಟ @INCKarnataka ಸರ್ಕಾರ ತನ್ನ ಆರು ತಿಂಗಳ ಅರಾಜಕತೆಯ ಆಡಳಿತದಲ್ಲಿ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೆ, ಸರ್ಕಾರದ ಪ್ರಮುಖ ಕಾರ್ಯಾಂಗವಾದ ಸರ್ಕಾರಿ ನೌಕರರಿಗೂ ಸಹ ಇನ್ನಿಲ್ಲದಂತಹ ತೊಂದರೆಯನ್ನು ನೀಡಿದೆ. ಬಿಸಿಯೂಟದ ಸಿಬ್ಬಂದಿಗಳಿಂದ ಹಿಡಿದು, ಅತಿಥಿ ಶಿಕ್ಷಕರು ಸೇರಿದಂತೆ ಡಯಾಲಿಸಿಸ್ ಸಿಬ್ಬಂದಿಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತ್‌ನ ಪಿ.ಡಿ.ಒ ಗಳು, ಕಾಂಗ್ರೆಸ್ ಸರ್ಕಾರದ ಈ ಆರು ತಿಂಗಳ ಅವಧಿಯಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ಆಡಳಿತದ ದಯನೀಯ ವೈಫಲ್ಯಕ್ಕೆ ಸಾಕ್ಷಿ!!' ಎಂದು ಆರೋಪ ಮಾಡಿದೆ.
ರಾಜ್ಯದ ಕಡುಭ್ರಷ್ಟ @INCKarnataka ಸರ್ಕಾರ ತನ್ನ ಆರು ತಿಂಗಳ ಅರಾಜಕತೆಯ ಆಡಳಿತದಲ್ಲಿ ನಾಡಿನ ಆರೂವರೆ ಕೋಟಿ ಕನ್ನಡಿಗರಿಗೆ ಮಾತ್ರವಲ್ಲದೆ, ಸರ್ಕಾರದ ಪ್ರಮುಖ ಕಾರ್ಯಾಂಗವಾದ ಸರ್ಕಾರಿ ನೌಕರರಿಗೂ ಸಹ ಇನ್ನಿಲ್ಲದಂತಹ ತೊಂದರೆಯನ್ನು ನೀಡಿದೆ.
— BJP Karnataka (@BJP4Karnataka) November 9, 2023
ಬಿಸಿಯೂಟದ ಸಿಬ್ಬಂದಿಗಳಿಂದ ಹಿಡಿದು, ಅತಿಥಿ ಶಿಕ್ಷಕರು ಸೇರಿದಂತೆ ಡಯಾಲಿಸಿಸ್ ಸಿಬ್ಬಂದಿಗಳನ್ನು…
'ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ'
ಸರಣಿ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿರುವ ಬಿಜೆಪಿ, 'ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಲೇಬೇಕೆಂದು ಸುಳ್ಳುಗಳ ಮೇಲೆ ಸುಳ್ಳನ್ನು ಹೆಣೆದ ಕಾಂಗ್ರೆಸ್ ಮತ್ತು ಸಿಎಂ @Siddaramaiah ಅವರು ಹಾಗೂ ಡಿಸಿಎಂ @DKShivakumar ಅವರು, ಕೇವಲ ರಾಜ್ಯದ ಜನಸಾಮಾನ್ಯರ ಕಿವಿಯ ಮೇಲೆ ಮಾತ್ರ ಹೂವಿಟ್ಟಿಲ್ಲ, ಬದಲಿಗೆ ರಾಜ್ಯ ಸರ್ಕಾರಿ ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ.' ಎಂದು ಗಂಭೀರ ಆರೋಪ ಮಾಡಿದೆ.
ವಾಮಮಾರ್ಗದಿಂದಾದರೂ ಅಧಿಕಾರ ಹಿಡಿಯಲೇಬೇಕೆಂದು ಸುಳ್ಳುಗಳ ಮೇಲೆ ಸುಳ್ಳನ್ನು ಹೆಣೆದ ಕಾಂಗ್ರೆಸ್ ಮತ್ತು ಸಿಎಂ @Siddaramaiah ಅವರು ಹಾಗೂ ಡಿಸಿಎಂ @DKShivakumar ಅವರು, ಕೇವಲ ರಾಜ್ಯದ ಜನಸಾಮಾನ್ಯರ ಕಿವಿಯ ಮೇಲೆ ಮಾತ್ರ ಹೂವಿಟ್ಟಿಲ್ಲ, ಬದಲಿಗೆ ರಾಜ್ಯ ಸರ್ಕಾರಿ ನೌಕರರಿಗೂ ಕಿವಿ ಮೇಲೆ ಹೂವಿಟ್ಟಿದ್ದಾರೆ.#CongressFailsKarnataka
— BJP Karnataka (@BJP4Karnataka) November 9, 2023
2/4
'ಸರ್ಕಾರಿ ನೌಕರರಿಗೆ ಮಾಡುತ್ತಿರುವ ಮಹಾಮೋಸ'
ಮತ್ತೊಂದು ಕಡೆ ಕಾಂಗ್ರೆಸ್ ವಿರುದ್ಧ ಬಿಜೆಪಿ ತನ್ನ ಆರೋಪ ಮುಂದುವರಿಸಿ, 'ಅಧಿಕಾರಕ್ಕೇರಿ ಆರು ತಿಂಗಳು ಮುಗಿದು, ಒಂದು ಬಜೆಟ್ ಅನ್ನು ಸಹ ಮಂಡಿಸಿದರೂ ಸಿಎಂ ಸಿದ್ದರಾಮಯ್ಯರವರಾಗಲಿ ಅಥವಾ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಾಗಲಿ ಏಳನೇ ವೇತನ ಆಯೋಗದ ಬಗ್ಗೆ ಹಾಗೂ ಒ.ಪಿ.ಎಸ್. ಬಗ್ಗೆ ಕೊಂಚವೂ ಬಾಯಿ ಬಿಡುತ್ತಿಲ್ಲ. ಇದು ಕಾಂಗ್ರೆಸ್ ಸರ್ಕಾರ, ಸರ್ಕಾರಿ ನೌಕರರಿಗೆ ಮಾಡುತ್ತಿರುವ ಮಹಾಮೋಸ.' ಎಂದಿದೆ.
ಅಧಿಕಾರಕ್ಕೇರಿ ಆರು ತಿಂಗಳು ಮುಗಿದು, ಒಂದು ಬಜೆಟ್ ಅನ್ನು ಸಹ ಮಂಡಿಸಿದರೂ ಸಿಎಂ ಸಿದ್ದರಾಮಯ್ಯರವರಾಗಲಿ ಅಥವಾ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಾಗಲಿ ಏಳನೇ ವೇತನ ಆಯೋಗದ ಬಗ್ಗೆ ಹಾಗೂ ಒ.ಪಿ.ಎಸ್. ಬಗ್ಗೆ ಕೊಂಚವೂ ಬಾಯಿ ಬಿಡುತ್ತಿಲ್ಲ. ಇದು ಕಾಂಗ್ರೆಸ್ ಸರ್ಕಾರ, ಸರ್ಕಾರಿ ನೌಕರರಿಗೆ ಮಾಡುತ್ತಿರುವ ಮಹಾಮೋಸ.
— BJP Karnataka (@BJP4Karnataka) November 9, 2023
ಪೌರ ಕಾರ್ಮಿಕರಿಗೆ…
ಹಾಗೇ, 'ಪೌರ ಕಾರ್ಮಿಕರಿಗೆ ಖಾಯಂಮಾತಿ ಬಗ್ಗೆ ಕಾಂಗ್ರೆಸ್ ಪೌರ ಕಾರ್ಮಿಕರಿಗೆ ನೀಡಿದ್ದ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ. ಅಂಗನವಾಡಿ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ, ಬಿಸಿಯೂಟ ತಯಾರಿಕರಿಗೆ ನೀಡಿದ್ದ ವೇತನ ಹೆಚ್ಚಳದ ಭರವಸೆ ಇನ್ನೂ ಸಹ ಭರವಸೆಯಾಗಿಯೇ ಉಳಿದಿದೆ.' ಎಂದು ಆರೋಪ ಮಾಡಿದೆ.












Click it and Unblock the Notifications