‘ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು’
ಬಿಜೆಪಿ ನಾಯಕರಿಗೆ ಹೊರಗಿನ ಶತ್ರುಗಳಿಗಿಂತ ಒಳಗಿನ ಕಿತ್ತಾಟವೇ ದೊಡ್ಡದಾಗಿ ಹೋಗಿದೆ. ಒಂದು ಕಡೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ, ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಅವರದ್ದೆ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಏನೇನೋ ಆರೋಪಗಳ ಹೊರಿಸುತ್ತಿದ್ದಾರೆ. ಇನ್ನೊಂದ್ಕಡೆ ಆರ್. ಅಶೋಕ್ ಅವರ ಪರಿಸ್ಥಿತಿ ಕೂಡ ಹೀಗೆ ಆಗಿದ್ದು, ಬಿಜೆಪಿ ನಾಯಕರು ಸ್ವತಃ ತಾವೇ ಮೇಲೆ ಮುಗಿಬಿದ್ದು ಕಾಂಗ್ರೆಸ್ ಕೈಗೆ ಜುಟ್ಟು ಕೊಟ್ಟಂತೆ ಆಗಿದೆ.
ಹೀಗೆ ಬಿಜೆಪಿ ಒಳಗೆ ಹೊತ್ತಿರುವ ಬೆಂಕಿಯ ಕಿಡಿಗೆ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ತುಪ್ಪ ಸುರಿದಂತಾಗಿದೆ. ಅದ್ರಲ್ಲೂ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಬಿಜೆಪಿ ನಾಯಕರಿಗೆ & ವರಿಷ್ಠರಿಗೆ ಹೊಸ ಟೆನ್ಷನ್ ಶುರುವಾಗಿದೆ. ಇದೀಗ ಇದೇ ವಿಚಾರವ ಮುಂದಿಟ್ಟು ಕರ್ನಾಟಕ ಕಾಂಗ್ರೆಸ್ ಹೊಸ ಆರೋಪ ಮಾಡಿದೆ. ಇದು ಬಿಜೆಪಿ ನಾಯಕರಿಗೆ ಕೂಡ ನುಂಗಲಾರದ ತುತ್ತಾಗಿದೆ. ಹಾಗಾದ್ರೆ ಬಿಜೆಪಿ ಒಳಜಗಳದ ಬಗ್ಗೆ ಕಾಂಗ್ರೆಸ್ ಹೇಳಿದ್ದು ಏನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

'ಬಕೆಟ್ ರಾಜಕಾರಿಣಿ ಎಂದು ಬಿಜೆಪಿ...'
ಹೌದು, ಈ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿ 'ಆ'ಶೋಕ' ಗೀತೆ! ◆ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಕ್ಕೆ ಬಿಜೆಪಿ ಶಾಸಕ ಅಭಿನಂದಿಸಲು ಒಪ್ಪಲಿಲ್ಲ. ◆ಸಭಾತ್ಯಾಗ ಮಾಡಿದರೆ ಬಿಜೆಪಿ ಶಾಸಕರೇ ಕುರ್ಚಿ ಬಿಟ್ಟು ಏಳಲಿಲ್ಲ. ◆ಶಾಸಕಾಂಗ ಸಭೆಗೆ ಬರುವುದಿಲ್ಲ ಎಂದು ಬಿಜೆಪಿ ಶಾಸಕರಿಂದಲೇ ಘೇರಾವ್. ◆ವಿರೋಧ ಪಕ್ಷದ ನಾಯಕನ ಕೊಠಡಿಗೆ ಬರಲು ಒಪ್ಪದ ಬಿಜೆಪಿ ಶಾಸಕ.' ಎಂದು ಆರೋಪ ಮಾಡಿದೆ.
'ಸ್ವಪಕ್ಷದ ಶಾಸಕರಿಂದಲೇ ತರಾಟೆ'
'◆ಸಭಾತ್ಯಾಗ ಮಾಡಿರುವುದಕ್ಕೆ ಸ್ವಪಕ್ಷದ ಶಾಸಕರಿಂದಲೇ ತರಾಟೆ ◆ಬಕೆಟ್ ರಾಜಕಾರಿಣಿ ಎಂದು ಬಿಜೆಪಿಗರಿಂದಲೇ ಬಿರುದು. ◆ವಿರೋಧ ಪಕ್ಷದ ನಾಯಕ ಎನ್ನುವುದನ್ನು ಮರೆತು ಸ್ವಪಕ್ಷದ ನಾಯಕರಿಂದಲೇ ಸದನದಲ್ಲಿ ಮಾತನಾಡಲು ಅಡ್ಡಿ. ವಿರೋಧ ಪಕ್ಷದ ನಾಯಕನಿಗೆ ಮತ್ತೊಂದು ವಿರೋಧ ಪಕ್ಷ ಸೃಷ್ಟಿಯಾಗಿರುವಾಗ ಅಶೋಕರ ಶೋಕ ರಾಗವನ್ನು ಕೇಳುವವರು ಯಾರು @BJP4Karnataka?!' ಎಂದು ಬಿಜೆಪಿ ನಾಯಕರನ್ನ ಕರ್ನಾಟಕ ಕಾಂಗ್ರೆಸ್ ಇದೀಗ ಕೆಣಕಿದೆ.

ಹೀಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಗಳ ಜೋರಾಗಿರುವ ಸಮಯದಲ್ಲೇ ಸ್ವತಃ ಬಿಜೆಪಿ ನಾಯಕರೇ ಒಳ ಜಗಳದಿಂದ, ಎದುರಾಳಿಗೆ ಅವಕಾಶ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಅದ್ರಲ್ಲೂ ಕಾಂಗ್ರೆಸ್ ಪಕ್ಷ ಬಿಜೆಪಿಯ ಒಳ ಜಗಳದ ಲಾಭ ಪಡೆಯುತ್ತಿದ್ದು ಪದೇ ಪದೆ ಕಮಲ ಪಾಳಯವನ್ನು ಇದೇ ವಿಚಾರ ಹಿಡಿದು ಕೆಣಕುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್‌ಗೆ ಉತ್ತರಿಸಲು ಆಗದೆ ಬಿಜೆಪಿ ನಾಯಕರು ಸೈಲೆಂಟ್ ಆಗುವಂತಾಗಿದೆ.












Click it and Unblock the Notifications