ಕಿವಿ ಮೇಲೆ ಹೂವಿಟ್ಟ ಕಾಂಗ್ರೆಸ್: ‘ಕಮಲ’ ಪಾಳಯದ ಆರೋಪ ಏನು?
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗ್ಯಾರಂಟಿ ವಾರ್ ಮತ್ತೆ ಶುರುವಾಗಿದೆ. ಈಗ ವಿದ್ಯುತ್ ವಿಚಾರ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪವನ್ನ ಮಾಡಿದೆ. ಕರ್ನಾಟಕ ಬಂದ್ ಹಾಗೂ ಕಾವೇರಿ ವಿವಾದ ನಡುವೆ ಕಮಲ ಪಾಳಯದಿಂದ ಕೇಳಿಬಂದ ಆರೋಪ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಲು ಗ್ಯಾರಂಟಿ ಯೋಜನೆಗಳ ಪಾಲು ದೊಡ್ಡದಿದ್ದು, ಇದೇ ಕಾರಣಕ್ಕೆ ಬಿಜೆಪಿ ಹಾಗೂ ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನ ಟಾರ್ಗೆಟ್ ಮಾಡಿವೆ ಎಂಬುದು ಕೆಲ ಕಾಂಗ್ರೆಸ್ ನಾಯಕರ ಆರೋಪವಾಗಿದೆ. ಇಷ್ಟೆಲ್ಲದರ ನಡುವೆಯೆ ಈಗ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಘಟಕ ಗಂಭೀರ ಆರೋಪ ಮಾಡಿದೆ. ಅದ್ರಲ್ಲೂ ಬಿಬಿಎಂಪಿ & ಲೋಕಸಭೆ ಎಲೆಕ್ಷನ್‌ಗೆ ಕೌಂಟ್‌ಡೌನ್ ಶುರುವಾಗಿರುವ ಸಂದರ್ಭದಲ್ಲೇ ಈ ಆರೋಪ ಸಂಚಲನ ಸೃಷ್ಟಿಸಿದೆ.

'ಕಮಲ' ಪಾಳಯದ ಆರೋಪ ಏನು?
ಈಗ ಬಿಜೆಪಿ ಮಾಡಿರುವ ಆರೋಪದ ಪ್ರಕಾರ, 'ಬಿಜಿಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ "ಪವರ್ ಸರ್‌ಪ್ಲಸ್ ಸ್ಟೇಟ್" ಸಾಧನೆ ಮಾಡಿತ್ತು. ಆದರೆ,
@INCKarnataka ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕದ ಎಲ್ಲಾ ಘನತೆಗಳನ್ನು ಕಳೆದು ಹಾಳು ಮಾಡಿ ರಾಜ್ಯವನ್ನು ಕತ್ತಲಿಗೆ ದೂಡಿದೆ. ಉಚಿತ ವಿದ್ಯುತ್ ಕೊಡುತ್ತೇವೆಂದು ಕಿವಿ ಮೇಲೆ ಹೂವಿಟ್ಟ ಕಾಂಗ್ರೆಸ್ ಇದೀಗ ಹಣ ಕೊಡುತ್ತೇವೆಂದರೂ ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ' ಎಂದು ಆರೋಪ ಮಾಡಿದೆ.
'ವಿದ್ಯುತ್ ಉತ್ಪಾದನೆ ಸಂಪೂರ್ಣ ಕುಂಠಿತ'
ಹಾಗೇ ತನ್ನ ಆರೋಪವನ್ನು ಮುಂದುವರಿಸಿ, '@siddaramaiah ಅವರ ಅಸಮರ್ಥ ಆಡಳಿತದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಕುಂಠಿತವಾಗಿದೆ. ಹೊರ ರಾಜ್ಯಗಳಿಂದಲೂ ವಿದ್ಯುತ್ ಖರೀದಿ ಮಾಡಲು ಕೂಡ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಈಗಾಗಲೇ ವಿದ್ಯುತ್ ದರ ಏರಿಕೆಯಿಂದ ಕಂಗೆಟ್ಟಿದ್ದ ಕೃಷಿ, ಕೈಗಾರಿಕೆಗಳು ವಿದ್ಯುತ್ ಅಭಾವದಿಂದ ಮತ್ತಷ್ಟು ಕುಗ್ಗಿ ಹೋಗಿವೆ. ಇದರ ನಡುವೆ ರಾಜ್ಯಕ್ಕೆ ಲೋಡ್ ಶೆಡ್ಡಿಂಗ್ ಭೂತ ಆಗಲೇ ಆವರಿಸಿದೆ. ಇದೇ ಕಾಂಗ್ರೆಸ್ಸಿನ ಕತ್ತಲು ರಾಜ್ಯದ ಗ್ಯಾರಂಟಿ..!' ಎಂದಿದೆ.
ಬಿಜಿಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ "ಪವರ್ ಸರ್‌ಪ್ಲಸ್ ಸ್ಟೇಟ್" ಸಾಧನೆ ಮಾಡಿತ್ತು.
— BJP Karnataka (@BJP4Karnataka) September 28, 2023
ಆದರೆ, @INCKarnataka ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕದ ಎಲ್ಲಾ ಘನತೆಗಳನ್ನು ಕಳೆದು ಹಾಳು ಮಾಡಿ ರಾಜ್ಯವನ್ನು ಕತ್ತಲಿಗೆ ದೂಡಿದೆ.
ಉಚಿತ ವಿದ್ಯುತ್ ಕೊಡುತ್ತೇವೆಂದು ಕಿವಿ ಮೇಲೆ ಹೂವಿಟ್ಟ ಕಾಂಗ್ರೆಸ್… pic.twitter.com/jhB6j7rOnb
'ಗ್ಯಾರಂಟಿಗಳನ್ನ ಸರಿಯಾಗಿ ಅನುಷ್ಠಾನ...'
ಹಾಗೇ ಮತ್ತೊಂದು ಆರೋಪ ಮಾಡಿರುವ ಬಿಜೆಪಿ, 'ತಾನೇ ಘೋಷಿಸಿದ ಯಾವುದೇ ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದಿರುವುದಲ್ಲದೆ, ಪ್ರಧಾನಿ @narendramodi ಅವರ ಸರ್ಕಾರ ನೀಡಿದ ಜನಪರ ಯೋಜನೆಗಳನ್ನೂ ನಿಲ್ಲಿಸಿ, ಆ ಯೋಜನೆಗಳನ್ನು ಕಿತ್ತುಕೊಂಡು ಕನ್ನಡಿಗರಿಗೆ ದ್ರೋಹ ಬಗೆಯುವುದೊಂದೆ @INCKarnataka ದ ಗುರಿ. ಬಡರೋಗಿಗಳ ಬವಣೆ ನಿವಾರಣೆಗಾಗಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದ ಡಯಾಲಿಸಿಸ್ ಕೇಂದ್ರಗಳನ್ನು ಸಿದ್ದರಾಮಯ್ಯರವರ ಸರ್ಕಾರ ನಿರ್ವಹಣೆ ಮಾಡಲಾಗದೆ ರಾಜ್ಯದ ಬಡ ರೋಗಿಗಳ ಪ್ರಾಣಕ್ಕೆ ಕುತ್ತು ತಂದು ಚೆಲ್ಲಾಟವಾಡುತ್ತಿದೆ.' ಎಂದಿದೆ.
ಅಲ್ಲದೆ ತನ್ನ ಆರೋಪ ಮುಂದುವರಿಸಿರುವ ರಾಜ್ಯ ಬಿಜೆಪಿ, 'ಮಾತೆತ್ತಿದರೆ ಕೇಂದ್ರ ಕೊಡಬೇಕು, ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವ @siddaramaiah ರವರೆ, ಕೇಂದ್ರ ಕೊಟ್ಟ ಯೋಜನೆಗಳನ್ನು ಕನ್ನಡಿಗರಿಗೆ ಕನಿಷ್ಠ ಪಕ್ಷ ತಲುಪಿಸಿ.' ಎಂದು ಕರ್ನಾಟಕ ಬಿಜೆಪಿ ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದೆ.
ತಾನೇ ಘೋಷಿಸಿದ ಯಾವುದೇ ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡದಿರುವುದಲ್ಲದೆ, ಪ್ರಧಾನಿ @narendramodi ಅವರ ಸರ್ಕಾರ ನೀಡಿದ ಜನಪರ ಯೋಜನೆಗಳನ್ನೂ ನಿಲ್ಲಿಸಿ, ಆ ಯೋಜನೆಗಳನ್ನು ಕಿತ್ತುಕೊಂಡು ಕನ್ನಡಿಗರಿಗೆ ದ್ರೋಹ ಬಗೆಯುವುದೊಂದೆ @INCKarnataka ದ ಗುರಿ.
— BJP Karnataka (@BJP4Karnataka) September 28, 2023
ಬಡರೋಗಿಗಳ ಬವಣೆ ನಿವಾರಣೆಗಾಗಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದ… pic.twitter.com/11V1WQ6OMh












Click it and Unblock the Notifications