ಬಿಜೆಪಿ ನಾಯಕರ ಭೇಟಿಗೆ ಸಿಗದ ಹೈಕಮಾಂಡ್ ನಾಯಕರು ಕುಮಾರಸ್ವಮಿಯವರಿಗೆ...
2024ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ & ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎನ್ನಲಾಗಿದೆ. ಮೈತ್ರಿ ಬಗ್ಗೆ ಮಾತುಕತೆ ನಡೆಸಲು ಈಗಾಗಲೇ JDS ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ದೆಹಲಿಯಲ್ಲೇ ಇದ್ದಾರೆ ಎಂಬ ಮಾತು ಓಡಾಡುತ್ತಿದೆ. ಹೀಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ವೇಳೆ ಕಾಂಗ್ರೆಸ್ ಹೊಸ ಬಾಂಬ್ ಸಿಡಿಸಿದ್ದು, ಇದು ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದೆ.
ಈಗಾಗಲೇ ಕರ್ನಾಟಕ ವಿಧಾನಸಭೆ ಚುನಾವಣೆಯು ಮುಗಿದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನ ಪೂರೈಸಿದೆ. ಇಷ್ಟೆಲ್ಲಾ ನಡೆದರೂ ಬಿಜೆಪಿ ಹೈಕಮಾಂಡ್ ಮಾತ್ರ ವಿಪಕ್ಷ ನಾಯಕನನ್ನ ಆಯ್ಕೆ ಮಾಡಿಲ್ಲ. ಹೀಗೆ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ಇದೇ ಅಸ್ತ್ರ ಹಿಡಿದು ವಾಗ್ದಾಳಿ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಗೆ ಬಿಜೆಪಿ ಹೈಕಮಾಂಡ್ ಮಾತುಕತೆ ನಡೆಸುತ್ತಿದೆ ಎಂಬ ಸುದ್ದಿಯೂ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ಫೋಟಕ ಆರೋಪ ಮಾಡಿದೆ.

'ಕುಮಾರಸ್ವಾಮಿಗೆ ಸಿಗ್ತಾರೆ.. ನಿಮಗೆ ಸಿಗಲ್ವಾ?'
ಟ್ವೀಟ್ ಮೂಲಕ ಕಾಂಗ್ರೆಸ್ ಇದೀಗ ಬಿಜೆಪಿ ನಾಯಕರಿಗೆ ಪ್ರಶ್ನೆಯೊಂದನ್ನು ಹಾಕಿದ್ದು, ಈ ಮೂಲಕ ಬಿಜೆಪಿ ನಾಯಕರಿಗೆ ಮೈತ್ರಿ ವಿಚಾರ ಮುಂದಿಟ್ಟುಕೊಂಡು ಕುಟುಕಿದೆ. 'ಬಿಜೆಪಿ ನಾಯಕರ ಭೇಟಿಗೆ ಸಿಗದ ಹೈಕಮಾಂಡ್ ನಾಯಕರು ಕುಮಾರಸ್ವಮಿಯವರಿಗೆ ಸುಲಭಕ್ಕೆ ಸಿಗುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ದಾರಿದ್ರ್ಯಕ್ಕೆ ಹಿಡಿದ ಕನ್ನಡಿ! ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ನಾವು ಮೊದಲೇ ಹೇಳಿದ್ದೆವು, ನಾವು ಹೇಳಿದಂತೆಯೇ ಈಗ ಸಾಬೀತು ಮಾಡುತ್ತಿದ್ದಾರೆ' ಎಂದಿದೆ ಕರ್ನಾಟಕ ಕಾಂಗ್ರೆಸ್ ಘಟಕ.
ಬಿಜೆಪಿ ನಾಯಕರ ಭೇಟಿಗೆ ಸಿಗದ ಹೈಕಮಾಂಡ್ ನಾಯಕರು ಕುಮಾರಸ್ವಮಿಯವರಿಗೆ ಸುಲಭಕ್ಕೆ ಸಿಗುತ್ತಿರುವುದು ಬಿಜೆಪಿ ನಾಯಕರ ರಾಜಕೀಯ ದಾರಿದ್ರ್ಯಕ್ಕೆ ಹಿಡಿದ ಕನ್ನಡಿ!
— Karnataka Congress (@INCKarnataka) September 21, 2023
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ನಾವು ಮೊದಲೇ ಹೇಳಿದ್ದೆವು, ನಾವು ಹೇಳಿದಂತೆಯೇ ಈಗ ಸಾಬೀತು ಮಾಡುತ್ತಿದ್ದಾರೆ.
ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಜೆಡಿಎಸ್ ಈಗ…
ಪಕ್ಷವನ್ನು ವಿಸರ್ಜಿಸಿವುದೇ ಉತ್ತಮ!
ಹಾಗೇ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್, 'ಬಿಜೆಪಿ ಜೊತೆ ಹೋಗುವ ದಾರಿದ್ರ್ಯ ಬಂದಿಲ್ಲ ಎಂದಿದ್ದ ಜೆಡಿಎಸ್ ಈಗ ಅಮಿತ್ ಶಾ ಮನೆಯ ಬಾಗಿಲು ಬಡಿಯುತ್ತಿದ್ದಾರೆ. ಇಂತಹ ಆತ್ಮವಂಚನೆಯ ಕೆಲಸಕ್ಕಿಂತ ಕುಮಾರಸ್ವಾಮಿಯವರೇ ಹೇಳಿದ್ದಂತೆ ಪಕ್ಷವನ್ನ ವಿಸರ್ಜಿಸಿವುದೇ ಉತ್ತಮ!' ಎಂದು ಜೆಡಿಎಸ್ & ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ಕೆಣಕಿದೆ. ಈ ಮೂಲಕ ಬಿಜೆಪಿ & ಜೆಡಿಎಸ್ ಮೈತ್ರಿ ವಿಚಾರ ಹಿಡಿದು, ಹೊಸ ಅಸ್ತ್ರ ಪ್ರಯೋಗಿಸಲು ಕರ್ನಾಟಕ ಕಾಂಗ್ರೆಸ್ ಘಟಕ ಮುಂದಾಗಿದೆ.
ಒಟ್ನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಬಗ್ಗೆ ಅಂತಿಮ ಹಂತದ ಮಾತುಕತೆಯು ನಡೆಯುತ್ತಿದೆ. ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಸಕ್ಸಸ್ ಆದರೆ, ಕೆಲವು ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಡಲಿದೆ. ಹೊಂದಾಣಿಕೆಯ ಪೈಕಿ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ಗೆ ಹೆಚ್ಚಿನ ಸ್ಥಾನ ಸಿಗುವ ನಿರೀಕ್ಷೆ ಇದೆ. ಈಗಿರುವ ಚರ್ಚೆ ಪ್ರಕಾರ ಸುಮಾರು 4 ಲೋಕಸಭೆ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಬಹುದು. ಇನ್ನುಳಿದ 24 ಸ್ಥಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬಹುದು. ಈ ಎಲ್ಲಾ ಪ್ರಶ್ನೆಗಳಿಗೂ ನಾಳೆಯ ಒಳಗಾಗಿ ಉತ್ತರ ಸಿಗಬಹುದು ಎನ್ನಲಾಗುತ್ತಿದೆ.












Click it and Unblock the Notifications