Cauvery Water: ತಮಿಳುನಾಡು ಕಾವೇರಿ ಕ್ಯಾತೆಗೆ ಕರ್ನಾಟಕ ಏನಂತು?
ಕಾವೇರಿ ವಿಚಾರಕ್ಕೆ ಅಂದುಕೊಂಡಂತೆ ತಮಿಳುನಾಡು ಕಿರಿಕ್ ಶುರುಮಾಡಿದೆ. ಅದರಲ್ಲೂ ಕಳೆದ 4-5 ವರ್ಷ ಉತ್ತಮ ಮಳೆಯಾಗಿ, ಕರ್ನಾಟಕ ಹೆಚ್ಚಾಗೇ ನೀರನ್ನು ತಮಿಳುನಾಡಿಗೆ ಹರಿಸಿತ್ತು. ಆದ್ರೆ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಿದ್ದು ಕನ್ನಡ ನಾಡಿನ ಜೀವನದಿ ಕಾವೇರಿಯಲ್ಲಿ ನೀರು ಬರಿದಾಗುತ್ತಿದೆ. ಇದೇ ಕಾರಣಕ್ಕೆ ಮತ್ತೆ ಫೈಟಿಂಗ್ ಶುರುವಾಗಿದ್ದು, ತಮಿಳುನಾಡು ಸರ್ಕಾರ ನೀರಿನ ವಿಚಾರಕ್ಕೆ ಕರ್ನಾಟಕದ ವಿರುದ್ಧ ತೊಡೆತಟ್ಟಿದೆ.
ಹೌದು, ಅಕ್ಕಪಕ್ಕದ ರಾಜ್ಯಗಳಾದ ತಮಿಳುನಾಡು ಹಾಗೂ ಕರ್ನಾಟಕ ಸಹೋದರರ ರೀತಿ ಬಾಳಬೇಕಿತ್ತು. ಆದರೆ ಆಗುತ್ತಿರುವುದೇ ಬೇರೆ, ಹಲವು ದಶಕದಿಂದ ಕಾವೇರಿ ನೀರು ನೀರು ಅಂತಾ ತಮಿಳುನಾಡು ಸರ್ಕಾರ ಕಿರಿಕ್ ಮಾಡುತ್ತಿದೆ. ಅದರಲ್ಲೂ ಮಳೆ ಬಂದಾಗ ಹೆಚ್ಚಿನ ಪ್ರಮಾಣದ ನೀರನ್ನು ತಮಿಳುನಾಡು ಸಮುದ್ರಕ್ಕೆ ಹರಿಸುತ್ತಿದೆ. ಮಳೆ ಬರದೇ ಇದ್ದರೆ ಹೀಗೆ ಕಿರಿಕ್ ಮಾಡಿ ಕರ್ನಾಟಕದ ಜೊತೆ ಜಗಳಕ್ಕೆ ನಿಲ್ಲುತ್ತಿದೆ. ಅದೃಷ್ಟ ಚೆನ್ನಾಗಿದ್ದ ಕಾರಣಕ್ಕೆ ಕಳೆದ 4-5 ವರ್ಷ ಉತ್ತಮವಾಗಿ ಮಳೆಯಾಗಿತ್ತು ಮತ್ತು ಭಾರಿ ಪ್ರಮಾಣದ ನೀರು ನೆರೆಯ ರಾಜ್ಯ ತಮಿಳುನಾಡಿಗೆ ಹರಿದಿತ್ತು. ಆದರೆ ಈ ಬಾರಿ ಮತ್ತದೇ ರಾಗ ಶುರುವಾಗಿದೆ.

ನೀರಿಗಾಗಿ ನಡೆಯಿತು ಮಾತಿನ ಫೈಟ್!
2 ತಿಂಗಳಿಂದ ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡು ಸರ್ಕಾರ ಕಿರಿಕ್ ಶುರುಮಾಡಿದೆ. ಕಳೆದ ತಿಂಗಳು ಅಂದ್ರೆ ಜುಲೈನಲ್ಲಿ ಉತ್ತಮವಾಗಿ ಮಳೆಯಾದ ಕಾರಣ ಕೆಆರ್‌ಎಸ್ ಮತ್ತು ಕಾವೇರಿ ಕೊಳ್ಳದ ಡ್ಯಾಂಗಳಿಗೆ ಒಂದಷ್ಟು ನೀರು ಹರಿದಿತ್ತು. ಆದರೂ ಕಾವೇರಿ ಕೊಳ್ಳದಲ್ಲಿ ನೀರಿನ ಕೊರತೆ ಕಾಡುತ್ತಿದೆ. ಈ ಸಂಕಷ್ಟದ ನಡುವೆ ತಮಿಳುನಾಡಿಗೆ ನೀರು ಹರಿಸಲಾಗಿದೆ. ಆದರೂ ಇನ್ನೂ ಹೆಚ್ಚಿನ ನೀರಿಗಾಗಿ ತಮಿಳುನಾಡು ಕಿರಿಕ್ ಶುರು ಮಾಡಿದೆ. ಕಳೆದ ವರ್ಷ ನೂರಾರು ಟಿಎಂಸಿ ಸಮುದ್ರಕ್ಕೆ ಹರಿಸಿದ್ದ ಅಲ್ಲಿನ ಸರ್ಕಾರ, ಈಗ ಮತ್ತೆ ಜಗಳಕ್ಕೆ ನಿಂತಿದೆ. ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ಸಭೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಅಧಿಕಾರಿಗಳ ನಡುವೆ ಮಾತಿನ ಫೈಟ್ ನಡೆದಿದೆ.
ಮಳೆ ಬಂದಾಗ ಸೈಲೆಂಟ್.. ಬರದಲ್ಲಿ ವೈಲೆಂಟ್!
ನೀರು ಬಂದರೆ ಬಿಡಬಹುದು, ಆದರೆ ಮಳೆಯೇ ಬಾರದೆ ನೀರು ಬಿಡು ಅಂದರೆ ಎಲ್ಲಿಂದ ಬಿಡಲು ಸಾಧ್ಯ? ಆದರೂ ತಮ್ಮ ಪಾಲಿನ ನೀರನ್ನ ಕರ್ನಾಟಕ ಬಾಕಿ ಉಳಿಸಿಕೊಂಡಿದೆ ಎಂದು ತಮಿಳುನಾಡು ರಾಜ್ಯದ ಪ್ರತಿನಿಧಿಗಳು ಆರೋಪಿಸಿದ್ದಾರೆ. ಈ ವೇಳೆ ಸಭೆಯಲ್ಲಿ ವಾಗ್ವಾದವೂ ನಡೆದಿದೆ ಎನ್ನಲಾಗಿದೆ. ತಮಿಳುನಾಡು ಬೇಡಿಕೆಗೆ ಕರ್ನಾಟಕ ಒಪ್ಪದ ಕಾರಣ ತಮಿಳುನಾಡಿನ ಪ್ರತಿನಿಧಿಗಳು ಸಭೆಯಿಂದ ಹೊರ ನಡೆದ ಬೆಳವಣಿಗೆ ಕೂಡ ನಡೆದಿದೆ. ಈ ಮಧ್ಯೆ ಕರ್ನಾಟಕ ಸಿಎಂ ತಮಿಳುನಾಡು ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ಹಾಗಾದರೆ ಕಾವೇರಿ ನೀರಿನ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ನಿಲುವು ಏನು? ಮುಂದೆ ಓದಿ.

ಕಾವೇರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ
ರಾಜ್ಯಕ್ಕೆ ಬರ ಎದುರಾಗದೇ ಇದ್ದರೂ ಈ ಬಾರಿ ಅಂದುಕೊಂಡ ಮಟ್ಟಕ್ಕೆ ಮಳೆ ಬಿದ್ದಿಲ್ಲ. ಹೀಗಾಗಿ ರಾಜ್ಯದ ಬಹುತೇಕ ಜಲಾಶಯಗಳು ತುಂಬಿಲ್ಲ. ಇದು ರಾಜ್ಯದ ನೀರಿನ ಸಂಕಷ್ಟ ತೋರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಕರ್ನಾಟಕದ ಪಕ್ಕದ ರಾಜ್ಯವಾಗಿದ್ದರೂ ತಮಿಳುನಾಡು ಅರ್ಥ ಮಾಡಿಕೊಂಡಿಲ್ಲ.
ಕಾವೇರಿ ನೀರು ಬಿಡುವಂತೆ ಮತ್ತೆ ಖ್ಯಾತೆ ಶುರುಮಾಡಿದೆ ತಮಿಳುನಾಡು. ಈ ಬಾರಿ ನೀರಿಕ್ಷಿತ ಮಟ್ಟದ ಮಳೆಯಾಗಿಲ್ಲ, ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಸೂಕ್ತ ಉತ್ತರವನ್ನು ನೀಡಿದ್ದಾರೆ. ಸೂಕ್ತ ಮಳೆಯಾಗದ ಹಿನ್ನೆಲೆ ಸಂಕಷ್ಟದ ಸೂತ್ರವನ್ನು ಎರೆಡೂ ರಾಜ್ಯಗಳು ಪಾಲಿಸಬೇಕಿದೆ. ಆದರೂ ತಮಿಳುನಾಡು ನೀರು ಬಿಡುವಂತೆ ಖ್ಯಾತೆ ಶುರು ಮಾಡಿದೆ ನಮ್ಮಲ್ಲಿ ನೀರು ಇದ್ದರೆ ತಾನೆ ಬಿಡಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಸದ್ಯದ ಪರಿಸ್ಥಿತಿ ಬಗ್ಗೆ ತಜ್ಞರ ಜೊತೆ ಮಹತ್ವದ ಸಭೆ ನಡೆಸುವುದಾಗಿ ಸಿಎಂ ಹೇಳಿದ್ದಾರೆ.

ಹೆಚ್ಚುವರಿ ನೀರನ್ನು ಏನು ಮಾಡಿದ್ರು?
ಕಳೆದ ವರ್ಷ ತಮಿಳುನಾಡು ಮೂಲಕ 400 ಟಿಎಂಸಿಗೂ ಹೆಚ್ಚು ನೀರು ಸಮುದ್ರಕ್ಕೆ ಸೇರಿದೆ. ಮುಂಗಾರು ಅಬ್ಬರದ ಕಾರಣ ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನ ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿತ್ತು. ಇಷ್ಟೆಲ್ಲಾ ನೀರನ್ನು ಅಲ್ಲಿ ವ್ಯರ್ಥ ಮಾಡಿದ್ದರೂ ಈ ವರ್ಷ ಮತ್ತೆ ನೀರಿಗಾಗಿ ತಮಿಳುನಾಡು ಕಿರಿಕ್ ಶುರುಮಾಡಿದೆ. ಹೀಗಾಗಿ ತಮಿಳುನಾಡು ಸರ್ಕಾರದ ವರ್ತನೆಗೆ ಬೇಸರ ವ್ಯಕ್ತವಾಗುತ್ತಿದೆ.
ಮೇಕೆದಾಟು ಯೋಜನೆ ಜಾರಿಗೆ ಬಂದರೆ..
ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ಮೇಕೆದಾಟು ಯೋಜನೆಯ ವಿಚಾರ ಚರ್ಚೆಗೆ ಬಂದಿದೆ. ಮೇಕೆದಾಟು ಡ್ಯಾಂ ನಿರ್ಮಾಣವಾಗಿದ್ದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುವ ನೀರನ್ನ, ಕರ್ನಾಟಕ & ತಮಿಳುನಾಡು ಗಡಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯ. ಮೇಕೆದಾಟು ಡ್ಯಾಂನಲ್ಲಿ ನೀರು ಸಂಗ್ರಹವಾದರೆ 65ರಿಂದ 66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾದಂತೆ ತಡೆಯಬಹುದು. ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ. ಹೀಗಾಗಿ ಮೇಕೆದಾಟು ಬಗ್ಗೆ ಚರ್ಚೆ ಶುರುವಾಗಿದೆ.
ಬೆಂಗಳೂರು ಸುತ್ತಮುತ್ತ ಕುಡಿವ ನೀರು ಒದಗಿಸುವ ಜೊತೆಗೆ, ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ. ಇಷ್ಟೆಲ್ಲಾ ಇದ್ದರೂ ಅತ್ತ ನಮಗೆ ಡ್ಯಾಂ ಕಟ್ಟಲು ಬಿಡದೆ ಇತ್ತ ಬಿಟ್ಟಿರುವ ನೀರನ್ನು ಉಳಿಸಿಕೊಳ್ಳದೆ ನೆರೆ ರಾಜ್ಯ ತಮಿಳುನಾಡು ಕಿರಿಕ್ ಮಾಡುತ್ತಿದೆ. ರಾಮನಗರ ಸುತ್ತಲು ಅಂತರ್ಜಲ ಬತ್ತಿ ಹೋಗುತ್ತಿದ್ದು, ಮೇಕೆದಾಟು ಡ್ಯಾಂ ನಿರ್ಮಾಣವಾದ್ರೆ ಅಂತರ್ಜಲ ಏರಿಕೆ ಆಗುವ ನಿರೀಕ್ಷೆ ಇದೆ. ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.
ಒಟ್ನಲ್ಲಿ ಕಾವೇರಿ ನೀರಿನ ವಿಚಾರ ದೊಡ್ಡ ಸದ್ದು ಮಾಡ್ತಿದೆ. ಅತ್ತ ನೀರನ್ನ ಬಿಡಲೇಬೇಕು ಅಂತಾ ತಮಿಳುನಾಡು ಕಿರಿಕ್ ಮಾಡುತ್ತಿದೆ, ಜೊತೆಗೆ ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ಸಿದ್ದತೆ ನಡೆಸಿದೆ. ಇದೇ ಹೊತ್ತಲ್ಲಿ ಕರ್ನಾಟಕ ಸರ್ಕಾರ ಕೂಡ ಪರಿಸ್ಥಿತಿ ಬಿಡಿಸಿ ಹೇಳಿದ್ದು, ಇಷ್ಟಾದರೂ ಪ್ರಸಕ್ತ ವರ್ಷ ಕಾವೇರಿ ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಜಟಾಪಟಿ ನಡೆಯೋದು ಬಹುತೇಕ ಪಕ್ಕಾ ಎಂಬ ಸ್ಥಿತಿ ನಿರ್ಮಾಣವಾಗಿದೆ.
-
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications