2000 ವರ್ಷ ಇತಿಹಾಸ ಹೊಂದಿರುವ ಕನ್ನಡವನ್ನು ಮರೆತರೆ ನಾವು ಜನ್ಮಕೊಟ್ಟ...
ಎಲ್ಲೆಲ್ಲೂ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಗರಿಗೆದರಿದೆ. ಗಡಿನಾಡಿಂದ ಹಿಡಿದು ನಡು ನಾಡಿನ ತನಕ ಎಲ್ಲೆಡೆ ಅದ್ಧೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ ಇಂದು. ಹೀಗೆ ಎಲ್ಲೆಲ್ಲೂ ಕನ್ನಡಿಗರ ಹಬ್ಬದ ಸಂಭ್ರಮ ಮೇಳೈಸುವ ಸಮಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ಉಪಮುಖ್ಯಮಂತ್ರಿಗಳು ರಾಜ್ಯೋತ್ಸವ ಸಂಭ್ರಮದ ಬಗ್ಗೆ ಹೇಳಿದ್ದು ಏನು?
ಜಗತ್ತಿನ ಎಲ್ಲಾ ಭಾಷೆಗಳ ರಾಣಿ ಎಂದು 'ಕನ್ನಡ' ಭಾಷೆಯನ್ನು ಕರೆಯುತ್ತಾರೆ. ಇಂತಿಪ್ಪ ಕನ್ನಡ ಭಾಷೆಗೆ ಸಾವಿರಾರು ವರ್ಷ ಇತಿಹಾಸ ಕೂಡ ಇದೆ. ತಮಿಳು ಭಾಷೆಯನ್ನ ಬಿಟ್ಟರೆ ಕನ್ನಡವೇ ಜಗತ್ತಿನಲ್ಲಿ ಅತಿ ಹಳೆಯ ಭಾಷೆ. ಹೀಗೆ ಕನ್ನಡಿಗರು ಮಾತನಾಡುವ ಭಾಷೆಯೇ ಕನ್ನಡ ಭಾಷೆಯಾಗಿದೆ. ಹಾಗೇ ಕನ್ನಡಿಗರು ವಾಸ ಮಾಡುವ ಪ್ರದೇಶವೇ ಕನ್ನಡ ನಾಡು ಅಂದರೆ ಈಗಿನ ಕರ್ನಾಟಕ ಆಗಿದೆ. ಇಷ್ಟೆಲ್ಲಾ ಬಹುದೊಡ್ಡ ಇತಿಹಾಸವನ್ನ ಹೊಂದಿರುವ ನಮ್ಮ ನಾಡಿನ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ನವೆಂಬರ್ 1ರ ಕನ್ನಡಿಗರಾಗಬೇಡಿ!
ಈ ಕುರಿತು ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, 'ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ೬೮ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ. ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕರ್ನಾಟಕಕ್ಕೆ ಹೆಸರಾಗಿ ೫೦ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಕನ್ನಡಿಗರಿಗೆ ಹೃದಯಪೂರ್ವಕ ಅಭಿನಂದನೆಗಳು. ಕನ್ನಡದ ಅಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದಿರಲಿ.' ಎಂದಿದ್ದಾರೆ.
2000 ವರ್ಷಗಳ ಇತಿಹಾಸ!
ಹಾಗೆ ತಮ್ಮ ಮಾತು ಮುಂದುವರಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, 'ಆರಂಕುಶ ವಿಟ್ಟೂಡಂ ನೆನೆವುದೆನ್ನ ಮನಂ ಬನವಾಸಿ ದೇಶಮಮ್" ಎಂದು ಆದಿಕವಿ ಪಂಪ ಹೇಳಿದ್ದಾರೆ. ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನು ನಾವೆಲ್ಲರೂ ನೆನೆಯೋಣ. ೨೦೦೦ ವರ್ಷ ಇತಿಹಾಸ ಹೊಂದಿರುವ ಕನ್ನಡವನ್ನು ಮರೆತರೆ ನಾವು ಜನ್ಮಕೊಟ್ಟ ತಾಯಿಯನ್ನು ಮರೆತಂತೆ. ಇಂದು ನಾವು ಕೋಮುದ್ವೇಷಕ್ಕೆ ಸಿಲುಕ್ಕಿದ್ದು, ಕನ್ನಡದ ಮನಸುಗಳು ಒಂದಾಗಿ ಸಮಾನತೆ ಸಾರಬೇಕು. ನಾವೆಲ್ಲರೂ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ದೀಕ್ಷೆ ತೊಟ್ಟು ಜಗತ್ತಿಗೆ ಮಾನವ ಧರ್ಮ ಮಹತ್ವ ಸಾರೋಣ ಎಂದು ತಿಳಿಸಿದೆ.' ಎಂದು ಕನ್ನಡಿಗರಿಗೆ ಕರೆ ನೀಡಿದ್ದಾರೆ ಡಿಸಿಎಂ.
ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ೬೮ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆ.
— DK Shivakumar (@DKShivakumar) November 1, 2023
ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಕರ್ನಾಟಕಕ್ಕೆ ಹೆಸರಾಗಿ
೫೦ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಕನ್ನಡಿಗರಿಗೆ… pic.twitter.com/C6NbAanVgF
ಹೀಗೆ ಕನ್ನಡ ನಾಡಿನಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ ಮೇಳೈಸಿರುವ ಸಮಯದಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರಿಗೆ ವಿಶೇಷ ಸಂದೇಶ ನೀಡಿದ್ದಾರೆ. ಇದರ ಜೊತೆಗೆ ಕನ್ನಡ ನಾಡು, ನುಡಿಯ ಬಗ್ಗೆ ವರ್ಷಪೂರ್ತಿ ಜಾಗರೂಕತೆ ವಹಿಸೋಣ ಎಂಬ ಸಲಹೆ ಕೂಡ ನೀಡಿದ್ದಾರೆ.












Click it and Unblock the Notifications