ಮುಸ್ಲಿಂ ಸಮುದಾಯಕ್ಕೆ ದೇಶದ ಆಸ್ತಿ ಹಂಚಿಕೆ ಆರೋಪ ವಿಚಾರ: ಸಿಎಂ ಸಿದ್ದರಾಮಯ್ಯ ಫುಲ್ ಗರಂ!
ದೇಶದ ಸಂಪತ್ತಿನ ವಿಚಾರ & ಮುಸ್ಲಿಂ ಸಮುದಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ಮೊಳಗುತ್ತಿದೆ. ಅದರಲ್ಲೂ ಬಿಜೆಪಿ ಸೇರಿದಂತೆ ವಿರೋಧ ಪಕ್ಷ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ನಾಯಕರು ಆರೋಪವನ್ನ ಮಾಡುತ್ತಿದ್ದಾರೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಫುಲ್ ಗರಂ ಆಗಿದ್ದಾರೆ. ಅರೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿದ್ದು ಏಕೆ?
ಅಂದಹಾಗೆ ಕಳೆದ ಕೆಲವು ದಿನದಿಂದ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಬಿಜೆಪಿ, ಜೆಡಿಎಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂರ ಮತ ಗಳಿಸಿಲು ಹೀಗೆ ಓಲೈಕೆ ರಾಜಕಾರಣ ಮಾಡ್ತಿದ್ದಾರೆ ಅನ್ನೋ ಆರೋಪ ಮಾಡ್ತಿದ್ದಾರೆ. ಇಷ್ಟೆಲ್ಲಾ ತಿಕ್ಕಾಟದ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದರು. ಈ ಆರೋಪಕ್ಕೆ, ಇಂದು ಕುಂದಾನಗರಿ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಹಾಗಾದ್ರೆ ಮುಸ್ಲಿಂ ಮತಗಳ ಓಲೈಕೆ ಬಗ್ಗೆ ಕೇಳಿಬಂದ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಏನು?

ನನ್ನ ಮಾತು ಪೂರ್ತಿ ಕೇಳ್ರಿ!
ಹೌದು, ಮುಸ್ಲಿಂ ಮತಗಳ ಓಲೈಕೆ ಕುರಿತು ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಈಗ ಖಡಕ್ ಉತ್ತರ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಬೆಳಗಾವಿಯ ಸುವರ್ಣ ಸೌಧದಲ್ಲಿಂದು ಅಧಿವೇಶನಕ್ಕೆ ಆಗಮಿಸಿದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಮಾತನ್ನು ಅರ್ಧ ತೋರಿಸಿದ್ದಾರೆ. ನನ್ನ ಪೂರ್ತಿ ಹೇಳಿಕೆಯನ್ನ ಹಾಕಿ ನೋಡೋಣ. ಅದನ್ನ ಬಿಟ್ಟು ಅರ್ಧ ಹೇಳಿಕೆ ತೋರಿಸಿ, ಪೂರ್ತಿ ವಿಚಾರವನ್ನೇ ತಿರುಚಲಾಗಿದೆ ಎಂದರು.
ಅಲ್ಲದೆ ಜನರಿಗೆ ಸತ್ಯವನ್ನ ತೋರಿಸಿ ಅಂತಾ ಸಿಎಂ ಸಿದ್ದರಾಮಯ್ಯ ಇಂದು ಮಾಧ್ಯಮಗಳ ವಿರುದ್ಧವೇ ಗರಂ ಆಗಿದ್ದರು. ಹಾಗೇ ಇದೇ ವೇಳೆ ಸಿಎಂ ಮಾತನಾಡುವಾಗ ಮಧ್ಯ ಪ್ರವೇಶ ಮಾಡಿದ ವರದಿಗಾರನಿಗೆ, 'ನನ್ನ ಮಾತು ಪೂರ್ತಿ ಕೇಳ್ರಿ!' ಅಂತಾ ಸಿಎಂ ಸಿದ್ದರಾಮಯ್ಯ ಗರಂ ಆಗಿ ಉತ್ತರ ನೀಡಿದರು. ಈ ಮೂಲಕ ವಿರೋಧ ಪಕ್ಷಗಳು ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿವೇಶನದ ಸಮಯದಲ್ಲೇ ಹೊಸ ಸವಾಲು!
ಕರ್ನಾಟಕದ ಗಡಿ ಜಿಲ್ಲೆಯಾದ, ಬೆಳಗಾವಿಯಲ್ಲಿ ಅದ್ಧೂರಿಯಾಗಿ ವಿಧಾನಸಭೆ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದೇ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷಗಳಿಗೂ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹೀಗಾಗಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಈಗ ಖಡಕ್ ಉತ್ತರ ನೀಡಿದ್ದಾರೆ. ಹೀಗೆ ಈ ಫೈಟಿಂಗ್ ಇನ್ನೂ ಅದೆಷ್ಟು ದಿನಗಳ ಕಾಲ ಮುಂದುವರಿಯುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಅಧಿವೇಶನದಲ್ಲಿ ವಿರೋಧ ಪಕ್ಷಗಳ ಅಟ್ಯಾಕ್?
ಈಗಾಗಲೇ ನಾನಾ ವಿಚಾರಗಳನ್ನ ಪ್ರಸ್ತಾಪ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಇದರ ಜೊತೆಗೆ ಈಗ, ಸಿದ್ದರಾಮಯ್ಯ ಅವರ ವಿರುದ್ಧ ಮುಸ್ಲಿಂ ಮತಗಳ ಓಲೈಕೆ ಆರೋಪವನ್ನು ವಿರೋಧ ಫಕ್ಷಗಳ ನಾಯಕರು ಮಾಡ್ತಿದ್ದಾರೆ. ಹೀಗಾಗಿ ತಿಕ್ಕಾಟ ಜೋರಾಗುತ್ತಿದೆ. ಹಾಗೇ ಪಂಚರಾಜ್ಯ ಚುನಾವಣೆ ರಿಸಲ್ಟ್, ಬಿಜೆಪಿ ಪರ ಬಂದಿರುವುದು ಕೂಡ ವಿರೋಧ ಪಕ್ಷಗಳಿಗೆ ಮತ್ತಷ್ಟು ಬಲ ನೀಡಿದೆ.
ತಿರುಗೇಟು ನೀಡಿದ್ದ ಮಾಜಿ ಸಿಎಂ ಎಚ್‌ಡಿಕೆ
ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ 'ನಾಡಿನ ಸಿಎಂ ಆಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡಬೇಕು ಇದು ಓಲೈಕೆ ಅಲ್ಲದೆ ಬೇರೆ ಏನೂ ಅಲ್ಲ. ಒಂದು ಸಮಾಜದ ಓಲೈಕೆ ಮಾಡೋದಲ್ಲ, ಅಂತಾ ವಿಧಾನಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ರು. ರಾಜ್ಯದ ಎಲ್ಲ ಜನರ ಬದುಕು ಕಟ್ಟಲು ಈ ಸರ್ಕಾರ ಇರಬೇಕು. ಕಳೆದ ಬಜೆಟ್‌ನಲ್ಲಿ ಇವರೆಷ್ಟು ಹಣ ಇಟ್ಟಿದ್ರು? ಅನ್ನೋದನ್ನ ಮೊದ್ಲು ತಿಳಿಸಲಿ. ಅದನ್ನ ತಿಳಿಸಿದ ಬಳಿಕ ಮುಂದಿನ ವರ್ಷ 10 ಸಾವಿರ ಕೋಟಿ ರೂಪಾಯಿ ಕೊಡಲಿ ಎಂದು ಹಾಲಿ ಸಿಎಂ ಸಿದ್ದರಾಮಯ್ಯ ವಿರುದ್ಧ, ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದರು.












Click it and Unblock the Notifications