Engineers Day: ವಿಶ್ವೇಶ್ವರಯ್ಯ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ದೇಶದಲ್ಲಿ ಇಂದು ಎಂಜಿನಿಯರ್ಸ್ ದಿನಾಚರಣೆ ಅದ್ಧೂರಿಯಾಗಿ ನಡೆದಿದೆ. ಹಾಗೇ ದೇಶದ ಬೆಳವಣಿಗೆಯಲ್ಲಿ ಎಂಜಿನಿಯರ್‌ಗಳ ಪಾತ್ರವನ್ನು ಸ್ಮರಿಸಲಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡ ವಿಶೇಷ ಕಾರ್ಯಕ್ರಮ ಏರ್ಪಡಿಸಿತ್ತು. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಂಜಿನಿಯರ್‌ಗಳು ದೇಶದ, ಸಮಾಜದ ನಿರ್ಮಾತೃಗಳು ಎಂದರು.
ಅಲ್ಲದೆ ಸಮಾಜವನ್ನ & ದೇಶವನ್ನ ಪ್ರಗತಿಯ ದಿಕ್ಕಿನಲ್ಲಿ ರೂಪಿಸುವವರು ಎಂಜಿನಿಯರ್ ಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ಕರ್ನಾಟಕ ರಾಜ್ಯ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಆಯೋಜಿಸಿದ್ದ 56ನೇ ಎಂಜಿನಿಯರಿಂಗ್ ಡೇ ಕಾರ್ಯಕ್ರಮ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಹಾಗೇ ಇದೇ ಸಂದರ್ಭದಲ್ಲಿ ಎಂಜಿಯರ್‌ಗಳಿಗೆ ಸಲಹೆ ನೀಡಿದರು ಸಿದ್ದರಾಮಯ್ಯ.

ಸರ್‌ಎಂವಿ ಬಗ್ಗೆ ಸಿದ್ದರಾಮಯ್ಯ ಮಾತು
ಇಂದು ಎಂಜಿನಿಯರ್ಸ್ ದಿನ ಕೂಡ ಹೌದು. ವಿಶ್ವ ಪ್ರಜಾಪ್ರಭುತ್ವ ದಿನ ಕೂಡ ಹೌದು. ಈ ಎರಡರ ಉದ್ದೇಶ ಕೂಡ ಉತ್ತಮ ಸಮಾಜದ ನಿರ್ಮಾಣವೇ ಆಗಿದೆ. ಸರ್.ಎಂ.ವಿಶ್ವೇಶ್ವರಯ್ಯ ಆಔಋಊ ಬಹಳ ದೊಡ್ಡ ಎಂಜಿನಿಯರ್. ಇವರು ಮೈಸೂರು ರಾಜರ ಬಳಿ ದಿವಾನರಾಗಿದ್ದ ಕಾರಣದಿಂದ ಮೈಸೂರಿನ ಅಭಿವೃದ್ಧಿಯಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನ ಉಳಿಸಿ ಹೋಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಶ್ವೇಶ್ವರಯ್ಯ ಅವರು ಮುಂದಿನ ಸಮಾಜ ಹೇಗಿರಬೇಕು ಎನ್ನುವ ಗ್ರಹಿಕೆ & ದೂರದರ್ಶಿತ್ವ ಹೊಂದಿದ್ದರು. ಈ ಕಾರಣಕ್ಕೇ ಭಾರತ ರತ್ನಕ್ಕೆ ಅರ್ಹರಾದರು ಎಂದು ಮೆಚ್ವುಗೆ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಅವರ ಮೌಲ್ಯಗಳನ್ನು ಪಾಲಿಸುವಂತೆ ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕರ್ನಾಟಕ ರಾಜ್ಯ ಇನ್ಸ್ ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.












Click it and Unblock the Notifications