ಮಾಜಿ ಸಚಿವ ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಹತ್ಯೆ ಕೇಸ್‌ಗೆ ಟ್ವಿಸ್ಟ್
ಮಾಜಿ ಸಚಿವ ಮತ್ತು ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರ ಸಹೋದರಿ ಗಂಡನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದ ಈ ಕೇಸ್ ಈಗ ಒಂದು ಹಂತಕ್ಕೆ ಬಂದು ನಿಂತಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಾಗಾದ್ರೆ ತನಿಖೆಯ ವೇಳೆ ರಾಮನಗರ ಪೋಲಿಸರಿಗೆ ಸಿಕ್ಕ ಮಾಹಿತಿ ಏನು..? ಸಿ.ಪಿ.ಯೋಗೇಶ್ವರ್ ಅವರ ಬಾವ ಮಹದೇವಯ್ಯ ಹತ್ಯೆಯಾಗಿದ್ದು ಏಕೆ? ಮುಂದೆ ಓದಿ.
ಅಂದಹಾಗೆ ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ಹಲವು ಸತ್ಯಗಳು ಗೊತ್ತಾಗಿವೆ. ಕೊಲೆಯ ನಂತರ ಅನುಮಾನ ಬಂದವರನ್ನು ವಿಚಾರಣೆ ನಡೆಸಿದ್ದ ಪೊಲೀಸರಿಗೆ, ಆಘಾತಕಾರಿ ಅಂಶ ಗೊತ್ತಾಗಿದೆ. ಇದೀಗ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿ ಆಗಿದ್ದು, ಕೊಲೆಗೆ ಕಾರಣ ಏನು ಅನ್ನೋದನ್ನ ಕೂಡ ಕಂಡುಕೊಂಡಿದ್ದಾರೆ. ಹಾಗಾದ್ರೆ ಕೊಲೆ ಹಿಂದೆ ಇರೋದು ಯಾರು? ಈಗ ಅರೆಸ್ಟ್ ಆಗಿರುವ ಆರೋಪಿ ಬಿಚ್ಚಿಟ್ಟಿರುವ ಮಾಹಿತಿ ಎಂತಹದ್ದು ಅನ್ನೋದನ್ನ ತಿಳಿಯೋಕೆ ಮುಂದೆ ಓದಿ.

ಹಣಕ್ಕಾಗಿ ನಡೆದಿತ್ತಾ ಭೀಕರ ಹತ್ಯೆ?
ಹೌದು ರಾಮನಗರ ಪೊಲೀಸರು ಈಗ ಮಹದೇವಯ್ಯ ಅವರ ಹತ್ಯೆ ಆರೋಪಿಗಳಲ್ಲಿ ಒಬ್ಬ ಆರೋಪಿಯನ್ನ ಕಂಬಿ ಹಿಂದೆ ತಳ್ಳಿದ್ದಾರೆ. ತಮಿಳುನಾಡು ಮೂಲದ ಆರೋಪಿ ಮುರುಗನ್ ಬಂಧಿತನಾಗಿದ್ದು, ತಮಿಳುನಾಡಿಗೆ ತೆರಳಿದ್ದ ಪೋಲಿಸರು ಅಲ್ಲೇ ಬಂಧಿಸಿ ಕರೆತಂದಿದ್ದಾರಂತೆ. ಇನ್ನು ಸಿ.ಪಿ. ಯೋಗೇಶ್ವರ್ ಬಾವನವರ ಹತ್ಯೆಯಲ್ಲಿ ಬಂಧಿತ ಆರೋಪಿಯ ಪಾತ್ರ ಏನು ಕೊಲೆಗೆ ಈತ ಸಂಚು ರೂಪಿಸಲು ಯಾರೆಲ್ಲ ಸಾಥ್ ಕೊಟ್ಟಿದ್ದರು? ಪೊಲೀಸರ ತನಿಖೆಯ ವೇಳೆ ಗೊತ್ತಾಗಿದ್ದು ಏನು?
ಪಕ್ಕದ ತೋಟದವನಿಂದ ಕೊಲೆಗೆ ಸ್ಕೆಚ್!
ಇದೀಗ ಮಹದೇವಯ್ಯ ಅವರ ಕೊಲೆ ಆರೋಪದ ಮೇಲೆ ಅರೆಸ್ಟ್ ಆಗಿರುವ ಆರೋಪಿಯು ಅವರ ಪಕ್ಕದ ತೋಟದಲ್ಲೇ ಇದ್ದ ವ್ಯಕ್ತಿ ಎಂಬುದು ರಿವೀಲ್ ಆಗಿದೆ. ಹಲವು ವರ್ಷದಿಂದ ಮಹದೇವಯ್ಯರ ಪಕ್ಕದ ತೋಟದಲ್ಲೇ ಕೂಲಿ ಕೆಲಸ ಮಾಡ್ತಿದ್ದ ಮುರುಗನ್, ಮಹದೇವಯ್ಯರ ಬಳಿ ಹಣ ಇರೋದನ್ನ ಗಮನಿಸಿದ್ದನಂತೆ. ಹೀಗಾಗಿ ಹಣಕ್ಕಾಗಿಯೇ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಆರೋಪಿ ಗೆಳೆಯರ ಜೊತೆ ಸೇರಿ ಮಹದೇವಯ್ಯ ಹತ್ಯೆ ಮಾಡಿದ್ದು ತನಿಖೆಯಲ್ಲಿ ಬಯಲಾಗಿದೆ. ಹಣದ ಅವಶ್ಯಕತೆ ಇದ್ದ ಹಿನ್ನೆಲೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ವಿಶ್ವಾಸ ಗಳಿಸಿ, ಹಣಕ್ಕಾಗಿ ಕೊಲೆ?
ಅಂದಹಾಗೆ ಆರೋಪಿ ಮುರುಗನ್ ತನ್ನ ಇನ್ನಿಬ್ಬರು ಸ್ನೇಹಿತರ ಸಹಕಾರದಿಂದ ಈ ಕೊಲೆಯ ಮಾಡಿದ್ದಾನೆ ಎನ್ನಲಾಗಿದೆ. ಮಹದೇವಯ್ಯ ಅವ್ರ ಫಾರ್ಮ್ ಹೌಸ್ ಪಕ್ಕದ ತೋಟದಲ್ಲಿ ತನ್ನ ಪತ್ನಿ ಜೊತೆಗೆ ಆರೋಪಿ ಮುರುಗೇಶ್ ನೆಲೆಸಿದ್ದನಂತೆ. ಇತ್ತೀಚಿಗೆ ಮುರುಗೇಶ್‌ನ ಕೆಲಸದಿಂದ ತೆಗೆದು ಹಾಕಿದ್ದರು. ಕೆಲಸ ಮಾಡುವ ವೇಳೆ ಈತ ಮಹದೇವಯ್ಯ ಅವರ ವಿಶ್ವಾಸನ ಗಳಿಸಿದ್ದ ಎನ್ನಲಾಗಿದೆ. ಹೀಗೆ ಆರೋಪಿ ಮುರುಗೇಶ್ ಇದೇ ವಿಶ್ವಾಸ ಬಳಸಿಕೊಂಡು ಮಹದೇವಯ್ಯ ಮನೆಗೆ ಪ್ರವೇಶಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಮನೆಯಲ್ಲಿ ಹಣ ಇಟ್ಟಿದ್ದೇ ಮುಳುವಾಯ್ತಾ?
ಇನ್ನು ಸಿ.ಪಿ. ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರು, ಜಮೀನು ಮಾರಿರುವ ಹಿನ್ನೆಲೆ ಅವರ ಮನೆಯಲ್ಲಿ ಭಾರಿ ಪ್ರಮಾಣದ ಹಣವಿದೆ ಅಂತ ಮರುಗೇಶ್ ತಿಳಿದಿದ್ದನಂತೆ ಎನ್ನಲಾಗಿದೆ. ಹೀಗಾಗಿಯೇ ತನ್ನ ಇನ್ನಿಬ್ಬರು ಸ್ನೇಹಿತರ ಜೊತೆಗೆ ಸ್ಕೆಚ್ ಹಾಕಿಕೊಂಡು, ಅಲ್ಲಿಗೆ ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ಕೊನೆಗೆ ಹಣಕ್ಕಾಗಿ ಸ್ನೇಹಿತರ ಸಹಕಾರ ಪಡೆದು, ಮಹದೇವಯ್ಯ ಅವರನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಆರೋಪ ಮುರುಗೇಶ್ ವಿರುದ್ಧವೇ ಈಗ ಕೇಳಿಬಂದಿದೆ.
ಒಟ್ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣದ ಹಿನ್ನೆಲೆ ರಿವೀಲ್ ಆಗಿದೆ. ಇನ್ನು ನಾಪತ್ತೆಯಾಗಿರುವ ಆರೋಪಿಗಳಿಗೆ ಕೂಡ ಬಲೆ ಬೀಸಿರುವ ಪೊಲೀಸರು ಸರ್ಚಿಂಗ್ ಕೂಡ ನಡೆಸುತ್ತಿದ್ದಾರೆ. ಹಾಗೇ ಎಸ್ಕೇಪ್ ಆಗಿರುವ ಆರೋಪಿಗಳು ಪೊಲೀಸರಿಗೆ ಸಿಕ್ಕ ನಂತರ ಎಲ್ಲ ಬಯಲಾಗುವ ನಿರೀಕ್ಷೆ ಇದೆ.












Click it and Unblock the Notifications