ಮಾಜಿ ಪ್ರಧಾನಿ ದೇವೇಗೌಡರು & ಪ್ರಧಾನಿ ನರೇಂದ್ರ ಮೋದಿ ಭೇಟಿಯ ಬಗ್ಗೆ ಕಾಂಗ್ರೆಸ್ ಹೀಗೆ ಹೇಳಿದೆ!
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಮ್ಮ ಪುತ್ರರಾದ ಎಚ್.ಡಿ. ಕುಮಾರಸ್ವಾಮಿ & ಎಚ್.ಡಿ. ರೇವಣ್ಣ ಜೊತೆಗೆ ತೆರಳಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿದ್ದಾರೆ. ಈ ವೇಳೆ ದೇವೇಗೌಡರ ಮೊಮ್ಮಗ ಹಾಗೂ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕೂಡ ಇದ್ದರು. ಹೀಗೆ ಮಾಜಿ ಪ್ರಧಾನಿ ಎಚ್‌ಡಿಡಿ & ಹಾಲಿ ಪ್ರಧಾನಿ ಮೋದಿಯವರ ಭೇಟಿ ಬಗ್ಗೆ ಕಾಂಗ್ರೆಸ್ ನೀಡಿರುವ ಹೇಳಿಕೆ ಈಗ ವೈರಲ್ ಆಗುತ್ತಿದೆ!
ಹೌದು, ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ ಕೈಜೋಡಿಸಿ ಕಾಂಗ್ರೆಸ್‌ಗೆ ಆಘಾತ ನೀಡುತ್ತಿವೆ. ಮುಂಬರುವ ಲೋಕಸಭೆ ಚುನಾವಣೆ ಅಂದ್ರೆ 2024 ಲೋಕಸಭೆ ಎಲೆಕ್ಷನ್ ಅಖಾಡದಲ್ಲಿ ಈ ಎರಡು ಪಕ್ಷಗಳು ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲಿವೆ. ಹೀಗಿದ್ದಾಗ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರು ಮೀಟ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಚರ್ಚೆ ಜೋರಾಗಿರುವ ವೇಳೆ, ಕಾಂಗ್ರೆಸ್‌ನಿಂದ ಕೂಡ ಕಮೆಂಟ್ ಬಂದಿದೆ. ಹಾಗಾದರೆ ಕಾಂಗ್ರೆಸ್ ಹೇಳಿದ್ದು ಏನು?

'ಪ್ರಧಾನಿ ನರೇಂದ್ರ ಮೋದಿ ಅವರೇ'
ಅಂದಹಾಗೆ ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಎಚ್.ಡಿ. ದೇವೇಗೌಡರ ಭೇಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ. ಆದರೆ ಇದೇ ವೇಳೆ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಹೊಸ ಅಸ್ತ್ರ ಪ್ರಯೋಗ ಮಾಡಿದೆ. ಈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ, '@narendramodi ಅವರೇ ಬಹಳ ದಿನಗಳ ಬೇಡಿಕೆಯ ನಂತರ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು.
ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ನಿಮ್ಮ ಹೊಸ ಬ್ರದರ್ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು.' ಎಂದಿದೆ ಕಾಂಗ್ರೆಸ್. ಇಷ್ಟಕ್ಕೇ ಮಾತು ಮುಗಿಸದೆ, ಇದೇ ಟ್ವೀಟ್‌ನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹರ ವಿಚಾರ ಪ್ರಸ್ತಾಪ ಮಾಡಿದೆ.
'@narendramodi ಅವರೇ,
— Karnataka Congress (@INCKarnataka) December 21, 2023
ಬಹಳ ದಿನಗಳ ಬೇಡಿಕೆಯ ನಂತರ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು.
ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು.
ನಿಮ್ಮ ಹೊಸ ಬ್ರದರ್ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು.
ನಿಮ್ಮ ಹೊಸ ಬ್ರದರ್‌ನ ಬ್ರದರ್ ರೇವಣ್ಣನವರನ್ನು… pic.twitter.com/r8BnFiTIjo
ಪ್ರತಾಪ್ ಸಿಂಹ ಬಗ್ಗೆ ಹೇಳಿದ್ದೇನು?
ಸಂಸತ್ ಭವನದ ಒಳಗೆ ಅಪರಿಚಿತರು ನುಗ್ಗಿದ ಪ್ರಕರಣ ಸಂಬಂಧ ಪ್ರತಾಪ್ ಸಿಂಹ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ನಿಮ್ಮ ಹೊಸ ಬ್ರದರ್‌ನ ಬ್ರದರ್ ರೇವಣ್ಣನವರನ್ನು ಹಾಗೂ ಅವರ ಮಗನನ್ನು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ಹೀಗೆಯೇ ಕರ್ನಾಟಕದ ಮರ್ಯಾದೆ ತೆಗೆದಿರುವ ನಿಮ್ಮ @mepratap ಅವರನ್ನೂ ಕರೆಸಿಕೊಂಡು ಯಾಕಪ್ಪಾ ಸಂಸತ್ತಿನ ಭದ್ರತೆಯನ್ನು ಪರೀಕ್ಷೆ ಮಾಡಿದೆ? ಯಾಕಪ್ಪಾ ದಾಳಿಕೋರರೊಂದಿಗೆ ಕೈಜೋಡಿಸಿದೆ? ಎಂದು ಕೇಳುವುದು ಯಾವಾಗ?' ಎಂದು ಪ್ರಶ್ನೆ ಮಾಡಿದೆ ಕರ್ನಾಟಕ ಕಾಂಗ್ರೆಸ್.
ಒಟ್ನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫುಲ್ ಫೈಟ್ ನಡೆಯುತ್ತಿದ್ದು, ಈ ಸಮಯದಲ್ಲೇ ಸಂಸತ್ ಪ್ರಕರಣ ಕೂಡ ಕಾಂಗ್ರೆಸ್‌ಗೆ ಹೊಸ ಅಸ್ತ್ರ ನೀಡಿದಂತೆ ಕಾಣುತ್ತಿದೆ. ಅದರಲ್ಲೂ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಸಾಲು ಸಾಲು ಆರೋಪ ಮಾಡುತ್ತಿದೆ. ಈ ಮೂಲಕ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಹೊಸ ಸವಾಲು ಎದುರಾಗಿದೆ.












Click it and Unblock the Notifications