BJP VS Congress: ‘ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕು...’
ಶಿವಮೊಗ್ಗ ಘಟನೆಯ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಗಳವೂ ಜೋರಾಗಿದೆ. ಅದ್ರಲ್ಲೂ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್ ಕೂಡ ತಕ್ಕ ತಿರುಗೇಟು ನೀಡುತ್ತಿದೆ. ಹೀಗೆ 'ರಾಜ್ಯದಲ್ಲಿ ಇರುವುದು ತಾಲಿಬಾನ್ ಸರ್ಕಾರವೋ..?' ಎಂದು ಪ್ರಶ್ನೆ ಮಾಡಿದ್ದ ಬಿಜೆಪಿಗೆ ಇದೀಗ ಕಾಂಗ್ರೆಸ್ ತಿರುಗೇಟು ನೀಡಿದೆ.
ಇಂದು ಬೆಳಗ್ಗೆ ಈ ಬಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ, 'ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಸರ್ಕಾರವೋ..? ತಾಲಿಬಾನ್ ಸರ್ಕಾರವೋ..? ಪೊಲೀಸರ ಮೇಲೆ ಕಲ್ಲು ತೂರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಕೋಮುಗಲಭೆ ನಡೆಸಿದ ತನ್ನ ಜಿಹಾದಿ ಬ್ರದರ್ಸ್‌ಗಳನ್ನು ಬಿಡುಗಡೆ ಮಾಡುವಂತೆ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಕೋರರಿಗೆ ಅಮಾಯಕರೆಂದು ತನ್ವೀರ್ ಸೇಠ್ ಸರ್ಟಿಫಿಕೇಟ್ ಕೊಟ್ಟಿದ್ದರು.' ಎಂದು ಆರೋಪ ಮಾಡಿತ್ತು.

ಅಲ್ಲದೆ 'ಉಗ್ರಗಾಮಿಗಳ ಬಂಧನವಾಗುತ್ತಿದ್ದಂತೆ ಕ್ಲೀನ್ ಚಿಟ್ ಕೊಡಲು ಉತ್ಸುಕರಾಗಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರಿರುವಾಗ ದಂಗೆಕೋರರನ್ನು ಬಿಟ್ಟು ಕಳಿಸುವುದು ಕಾಂಗ್ರೆಸ್‌ಗೆ ತುಂಬಾ ಸಲೀಸು. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪಿಎಫ್‌ಐ ಗೂಂಡಾಗಳನ್ನು ಬಿಡುಗಡೆ ಮಾಡಿದ ಪರಿಣಾಮವೇ ಇಂದು ಶಿವಮೊಗ್ಗ ಕೋಮುಗಲಭೆಯಿಂದ ಹೊತ್ತಿ ಉರಿಯುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ತುಷ್ಟೀಕರಣಕ್ಕಾಗಿ ಜಿಹಾದಿಗಳ ಮೇಲಿನ ಪ್ರಕರಣ ಕೈಬಿಡುತ್ತಿರುವುದರಿಂದ ಕರ್ನಾಟಕದಲ್ಲಿ ಇಂದು ಐಸಿಸ್ ಕ್ಯಾಂಪ್‌ಗಳು ಸಕ್ರಿಯವಾಗುತ್ತಿವೆ.' ಎಂದು ಆರೋಪ ಮಾಡಿತ್ತು ಕರ್ನಾಟಕ ಬಿಜೆಪಿ.
ರಾಜ್ಯದಲ್ಲಿ ಇರುವುದು @INCKarnataka ಸರ್ಕಾರವೋ..? ತಾಲಿಬಾನ್ ಸರ್ಕಾರವೋ..?
— BJP Karnataka (@BJP4Karnataka) October 3, 2023
ಪೊಲೀಸರ ಮೇಲೆ ಕಲ್ಲು ತೂರಿ, ಸರ್ಕಾರಿ ವಾಹನಗಳಿಗೆ ಬೆಂಕಿ ಇಟ್ಟು ಕೋಮುಗಲಭೆ ನಡೆಸಿದ ತನ್ನ ಜಿಹಾದಿ ಬ್ರದರ್ಸ್‌ಗಳನ್ನು ಬಿಡುಗಡೆ ಮಾಡುವಂತೆ ಖುದ್ದು ಡಿಸಿಎಂ @DKShivakumar ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಈ ಹಿಂದೆ ಡಿಜೆ ಹಳ್ಳಿ, ಕೆಜಿ ಹಳ್ಳಿ… pic.twitter.com/nOe2CeRhY2
ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕು...
ಬಿಜೆಪಿ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, 'ಬಿಜೆಪಿ ಆಡಳಿತದಲ್ಲಿ ಬಿಜೆಪಿಯೇ ಪ್ರಾಯೋಜಿಸಿದ ಗಲಭೆಗಳಲ್ಲಿ ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕುಗಳ ಮೆರವಣಿಗೆಗಳನ್ನು ಗೃಹಸಚಿವರೇ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಡಿಜಿಐಜಿಪಿ ಅಭಿಪ್ರಾಯವನ್ನು ಬದಿಗೊತ್ತಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು. ಶಾಂತಿ ಭಂಜಕರಿಗೆ ಬೆಂಬಲಿಸಲಾಗಿತ್ತು. ಶಿವಮೊಗ್ಗದ ಹರ್ಷ ಕೊಲೆಗಡುಕರಿಗೆ ಜೈಲಿನಲ್ಲಿ ಮೋಜಿನ ವ್ಯವಸ್ಥೆ ಕಲ್ಪಿಸಿತ್ತು ಬಯಲಾಗಿತ್ತು. ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದ್ದು ಏಕೆ ಎನ್ನುವುದನ್ನು ಕರ್ನಾಟಕ ಬಿಜೆಪಿ ಉತ್ತರಿಸಲಿ.' ಎಂದು ಬಿಜೆಪಿಗೆ ಇದೀಗ ಕಾಂಗ್ರೆಸ್ ಸವಾಲು ಹಾಕಿದೆ.
ಬಿಜೆಪಿ ಆಡಳಿತದಲ್ಲಿ ಬಿಜೆಪಿಯೇ ಪ್ರಾಯೋಜಿಸಿದ ಗಲಭೆಗಳಲ್ಲಿ ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದೆ.
— Karnataka Congress (@INCKarnataka) October 3, 2023
ಬಿಜೆಪಿ ಆಡಳಿತಾವಧಿಯಲ್ಲಿ ತಲ್ವಾರ್, ಬಂದೂಕುಗಳ ಮೆರವಣಿಗೆಗಳನ್ನು ಗೃಹಸಚಿವರೇ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಡಿಜಿಐಜಿಪಿ ಅಭಿಪ್ರಾಯವನ್ನು ಬದಿಗೊತ್ತಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲಾಗಿತ್ತು.… https://t.co/G7qEe6z2MO
ಹಾಗೇ ತನ್ನ ಆರೋಪ ಮುಂದುವರಿಸಿರುವ ಕಾಂಗ್ರೆಸ್, 'ಈ ಹಿಂದೆ ಬಿಜೆಪಿಯ ಸಂಸದರು, ಶಾಸಕರು ತಲ್ವಾರ್, ಬಂದೂಕು ಹಿಡಿದು ಮೆರವಣಿಗೆ ಮಾಡಿದ್ದರು, ಆಗ ಗೃಹ ಸಚಿವರಾಗಿದ್ದ ಆರಗ ಜ್ಞಾನೇಮಂದ್ರ ಅವರು ಖಡ್ಗ, ಬಂದೂಕು ಹಿಡಿಯುವುದು ಸಂಪ್ರದಾಯ ಎಂದು ಬಂಡತನದಲ್ಲಿ ಸಮರ್ಥಿಸಿದ್ದರು. ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆಯಾಗುವುದನ್ನು ಬಿಜೆಪಿ ಬಯಸಿತ್ತು, ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೊಲೀಸರು ಯಶಸ್ವಿಯಾಗಿದ್ದಾರೆ. ಇಂತಹ ಘಟನೆಗಳು ಬಿಜೆಪಿಗರ ದ್ವೇಷ, ಪ್ರಚೋದನಕಾರಿ ಭಾಷಣದ ಪರಿಣಾಮದಿಂದಲೇ ಸೃಷ್ಟಿಯಾಗಿವೆ. ನಮ್ಮ ಸರ್ಕಾರ ಕಾನೂನಿನ ಮೂಲಕ ಪ್ರಚೋದನೆ ಮಾಡುವವರ ಬಾಯಿಗೆ ಹೊಲಿಗೆ ಹಾಕುವುದು ನಿಶ್ಚಿತ.' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕೂಡ ಪ್ರತ್ಯಾರೋಪ ಮಾಡಿದೆ.
ಈ ಹಿಂದೆ ಬಿಜೆಪಿಯ ಸಂಸದರು, ಶಾಸಕರು ತಲ್ವಾರ್, ಬಂದೂಕು ಹಿಡಿದು ಮೆರವಣಿಗೆ ಮಾಡಿದ್ದರು, ಆಗ ಗೃಹ ಸಚಿವರಾಗಿದ್ದ @JnanendraAraga ಅವರು ಖಡ್ಗ, ಬಂದೂಕು ಹಿಡಿಯುವುದು ಸಂಪ್ರದಾಯ ಎಂದು ಬಂಡತನದಲ್ಲಿ ಸಮರ್ಥಿಸಿದ್ದರು.
— Karnataka Congress (@INCKarnataka) October 3, 2023
ಶಿವಮೊಗ್ಗದಲ್ಲಿ ದೊಡ್ಡ ಮಟ್ಟದ ಗಲಭೆಯಾಗುವುದನ್ನು ಬಿಜೆಪಿ ಬಯಸಿತ್ತು, ಆದರೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು…












Click it and Unblock the Notifications