‘ಬಿಜೆಪಿಯವರೇ ಬಿಜೆಪಿಯವರಿಗೆ ಚಿಂದಿಚೋರ್ ಎಂದಿದ್ದಾರೆ, "ಚಿಂದಿಚೋರ್" ಅಂದರೆ ಯಾರು??’
ಕಾಂಗ್ರೆಸ್ & ಬಿಜೆಪಿ ನಡುವೆ ಟ್ವೀಟ್ ಫೈಟ್ ಕುತೂಹಲ ಹೆಚ್ಚಿಸುತ್ತಿದೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಬಗ್ಗೆ, ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಯತ್ನಾಳ್ ಅವರ ಮಾತುಗಳಿಗೆ ಕಾಂಗ್ರೆಸ್ ಉತ್ತರ ಕೊಟ್ಟಿದೆ. ಹಾಗಾದ್ರೆ ಕಾಂಗ್ರೆಸ್ ಇದೀಗ ಯಡಿಯೂರಪ್ಪ ಅವರ ಬಗ್ಗೆ ಹಾಗೂ ಯತ್ನಾಳ್ ಕುರಿತು ಕೊಟ್ಟಿರುವ ರಿಯಾಕ್ಷನ್ ಏನು?
ರಾಜ್ಯ ಬಿಜೆಪಿ ಅಖಾಡದಲ್ಲಿ ಮತ್ತೊಮ್ಮೆ ಮಾಜಿ ಸಿಎಂ ಯಡಿಯೂರಪ್ಪ ಗೆದ್ದು ಬೀಗಿದ್ದು, ಪಕ್ಷದ ಒಳಗಡೆ ತಮ್ಮ ವಿರುದ್ಧ ನಿಂತವರಿಗು ಇನ್ನೊಮ್ಮೆ ಸಂದೇಶ ರವಾನೆ ಮಾಡಿದ್ದಾರೆ. ಈ ನಡುವೆ ನಿನ್ನೆ ಮಾಜಿ ಸಿಎಂ ಯಡಿಯೂರಪ್ಪ & ವಿಜಯೇಂದ್ರ ಅವರ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿದ್ದ ಯತ್ನಾಳ್, ಬಿಜೆಪಿ ಒಂದೇ ಫ್ಯಾಮಿಲಿ ಪಕ್ಷ ಆಗಬಾರದು. ಬ್ಲ್ಯಾಕ್‌ಮೇಲ್ ಮಾಡುವವರಿಗೆಲ್ಲ ಕೇರ್ ಮಾಡಲ್ಲ. ಬ್ಲ್ಯಾಕ್‌ಮೇಲ್ ಮಾಡುವುದಕ್ಕೂ ಪ್ರಯತ್ನ ಮಾಡುತ್ತಾರೆ ಕೆಲ ಜನ. ಅದಕ್ಕೆಲ್ಲಾ ನಾವು ಕೇರ್ ಮಾಡೋದಿಲ್ಲ ಎಂದಿದ್ದರು. ಅಲ್ದೆ ವಿವಾದ ಎಬ್ಬಿಸುವ ಹಲವು ಪದ ಪ್ರಯೋಗ ಮಾಡಿದ್ದರು. ಇದೀಗ ಅದನ್ನ ಅಸ್ತ್ರ ಮಾಡಿಕೊಂಡಿದೆ ಕರ್ನಾಟಕ ಕಾಂಗ್ರೆಸ್.

'ಚಿಂದಿಚೋರ್ ಅಂದರೆ ಯಾರು??'
ಈ ಕುರಿತಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಬಿಜೆಪಿಯವರೇ ಬಿಜೆಪಿಯವರಿಗೆ ಚಿಂದಿಚೋರ್ ಎಂದಿದ್ದಾರೆ, "ಚಿಂದಿಚೋರ್" ಅಂದರೆ ಯಾರು?? ಈ ಯಕ್ಷಪ್ರಶ್ನೆಗೆ @BJP4Karnataka ಉತ್ತರಿಸುವುದೇ?? ಆ ಚಿಂದಿ ಚೋರ್ RTGS ಮೂಲಕ ಕಳ್ಳತನ ಮಾಡಿದ್ದಾರಾ? #VST ಮೂಲಕ ಕಳ್ಳತನ ಮಾಡಿದ್ದಾರಾ? ಅಪ್ಪನ ಫೋರ್ಜರಿ ಸಹಿ ಮಾಡಿ ಕಳ್ಳತನ ಮಾಡಿದ್ದಾರಾ?' ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಉಲ್ಲೇಖಿಸಿ ಈಗ ಪ್ರಶ್ನೆ ಮಾಡಿದೆ. ಹಾಗೇ ರಾಜ್ಯದ ಬಿಜೆಪಿ ನಾಯಕರನ್ನು ಕೆಣಕಿದೆ.
ಬಿಜೆಪಿಯವರೇ ಬಿಜೆಪಿಯವರಿಗೆ ಚಿಂದಿಚೋರ್ ಎಂದಿದ್ದಾರೆ,
— Karnataka Congress (@INCKarnataka) November 18, 2023
"ಚಿಂದಿಚೋರ್" ಅಂದರೆ ಯಾರು??
ಈ ಯಕ್ಷಪ್ರಶ್ನೆಗೆ @BJP4Karnataka ಉತ್ತರಿಸುವುದೇ??
ಆ ಚಿಂದಿ ಚೋರ್ RTGS ಮೂಲಕ ಕಳ್ಳತನ ಮಾಡಿದ್ದಾರಾ?#VST ಮೂಲಕ ಕಳ್ಳತನ ಮಾಡಿದ್ದಾರಾ?
ಅಪ್ಪನ ಫೋರ್ಜರಿ ಸಹಿ ಮಾಡಿ ಕಳ್ಳತನ ಮಾಡಿದ್ದಾರಾ? pic.twitter.com/u89CdctVW0
ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕೆ ಅಧ್ಯಕ್ಷ ಪಟ್ಟ?
ನಿನ್ನೆ ವಿಪಕ್ಷ ನಾಯಕನ ಆಯ್ಕೆಗೆ ಮೊದಲು ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು. ಬ್ಲ್ಯಾಕ್‌ಮೇಲ್ ಮಾಡುವವರಿಗೆ ನಾವು ಕೇರ್ ಮಾಡಲ್ಲ, ಬ್ಲ್ಯಾಕ್‌ಮೇಲ್ ಮಾಡುವುದಕ್ಕೆ ಯತ್ನ ಮಾಡುತ್ತಾರೆ ಕೆಲ ಜನ. ಅದಕ್ಕೆಲ್ಲಾ ನಾವು ಕೇರ್ ಮಾಡಲ್ಲ ನಾವು ಸತ್ಯದ ಪರ ಇರುವ ಜನ. ನಾನು ಗಟ್ಟಿಯಾಗೇ ಮಾತನಾಡುವ ವ್ಯಕ್ತಿ. ನನ್ನ ಗಟ್ಟಿತನದಲ್ಲಿ ಯಾವುದೇ ರಾಜಿ ಇಲ್ಲ ಎಂದಿದ್ದರು. ಹೀಗೆ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಯುದ್ಧವನ್ನು ಸಾರಿ, ಈಗ ಕರ್ನಾಟಕ ಕಾಂಗ್ರೆಸ್ ಕೈಗೆ ಅಸ್ತ್ರ ನೀಡಿದಂತಾಗಿದೆ.
ಒಟ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮರ ಜೋರಾಗಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಮಾತನ್ನೇ ಅಸ್ತ್ರ ಮಾಡಿಕೊಂಡು ವಾಗ್ದಾಳಿ ಶುರು ಮಾಡಿದೆ. ಹೀಗಾಗಿ ಕಾಂಗ್ರೆಸ್ ಆರೋಪ ಮತ್ತು ಅಸ್ತ್ರಗಳಿಗೆ ಕರ್ನಾಟಕ ಬಿಜೆಪಿ ನಾಯಕರು ಯಾವ ರೀತಿಯ ಪ್ರತಿಕ್ರಿಯೆ ಕೊಡ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications