‘ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚರಂತೆ ಮಾತನಾಡುತ್ತಾರೆ’ ಹಿಂಗೆ ಹೇಳಿದ್ದು ಯಾರು?
ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದಾರೆ. ಇದರ ಜೊತೆ ಈಗ ಮುಸ್ಲಿಂ ಸಮುದಾಯದ ಮುಖಂಡರು ಕೂಡ ಗರಂ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, ಬಿಜೆಪಿ ನಾಯಕ ಎಡವಟ್ಟು ಮಾಡಿಕೊಂಡ್ರ? ಅನ್ನೋ ಅನುಮಾನ ಕೂಡ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಮುಸ್ಲಿಂ ಸಮುದಾಯದ ಮುಖಂಡರು, ಈಗ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೊಚ್ಚಿಗೆದ್ದಿದ್ದು ಯಾಕೆ?
ಹೌದು ಬಸನಗೌಡ ಪಾಟೀಲ್ ಯತ್ನಾಳ್ ಹುಚ್ಚರಂತೆ ವರ್ತನೆ ಮಾಡುತ್ತಿದ್ದಾರೆ. ಈ ವಿಷಯ ಕೇಳಿ ನನಗೆ ಆಶ್ಚರ್ಯ ಆಗಿದೆ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಚಿವ & ಮುಸ್ಲಿಂ ಧರ್ಮ ಗುರುಗಳ ಸಮಾವೇಶದ ಉಸ್ತುವಾರಿ ಎ.ಎಮ್. ಹಿಂಡಸಗೇರಿ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿಯ ಶಾಸಕ ಹಾಗೂ ಉತ್ತರ ಕರ್ನಾಟಕದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಎ.ಎಮ್. ಹಿಂಡಸಗೇರಿ ಹೀಗೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಅವರಿಗೆ ಸವಾಲನ್ನೂ ಹಾಕಿದ್ದಾರೆ.

'ಅವರ ಮನಸ್ಸು ಸ್ಥಿರವಾಗಿ ಇಲ್ಲ'
ಯತ್ನಾಳ ಅವರ ಹೇಳಿಕೆ ಸಣ್ಣ ವಿಷಯ ಅಲ್ಲ ರಾಜ್ಯ ಸರ್ಕಾರದ ಎಲ್ಲಾ ಜನ ಪ್ರತಿನಿಧಿಗಳು ಆ ಸಮಾವೇಶಕ್ಕೆ ಬಂದಿದ್ದರು. ಯತ್ನಾಳ ಅವರ ಮನಸ್ಸು ಸ್ಥಿರವಾಗಿಲ್ಲ ಅವರ ಪಕ್ಷದ ವಿರುದ್ದವೇ ಯತ್ನಾಳ್ ಮನಸ್ಸಿಗೆ ಬಂದ ರೀತಿ ಮಾತನಾಡುತ್ತಾರೆ. ಐಎಸ್ಐ ಉಗ್ರರ ಜತೆ ನಂಟು ಇದ್ದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸತ್ಯಕ್ಕೆ ದೂರವಾದದ್ದು ನಾನು ಇದನ್ನು ಖಂಡಿಸುತ್ತೇನೆ ಅಂತಾ ಎ.ಎಮ್. ಹಿಂಡಸಗೇರಿ ಹೇಳಿದ್ದಾರೆ.
ರಾಜಕೀಯ ಮಾಡಿ, ಆದರೆ ಧರ್ಮದ...
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಒಳ್ಳೆ ಬುದ್ಧಿ ಕೊಡಲಿ, ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕೀಯವಾಗಿ ಮಾತನಾಡಲಿ, ಆದ್ರೆ ಹೀಗೆ ಧಾರ್ಮಿಕವಾಗಿ ಮಾತನಾಡುವ ವರ್ತನೆ ಸರಿ ಅಲ್ಲ. ಅಲ್ಲಿ ಅನೇಕ ಗುರುಗಳು ಬಂದು ಎಲ್ಲಾ ಧರ್ಮಗಳಲ್ಲಿ ಶಾಂತಿ ನೆಲೆಸಬೇಕು ಅನ್ನೋ ಉದ್ದೇಶದಿಂದ ನಾವು ಈ ಸಮಾವೇಶ ಮಾಡಿದ್ದೆವು. ನಮ್ಮಲ್ಲಿ ಶೈಕ್ಷಣಿಕವಾಗಿ ಅಲ್ಪ ಸಂಖ್ಯಾತರು ಹಿಂದುಳಿದಿದ್ದಾರೆ. ಯಾರೇ ಆಗಲಿ ಧಾರ್ಮಿಕವಾಗಿ ಮಾತನಾಡಬಾರದು ಎಂದು ಎ.ಎಮ್. ಹಿಂಡಸಗೇರಿ ಹೇಳಿದರು.

ಯತ್ನಾಳ್‌ಗೆ ಕಿವಿಮಾತು ಹೇಳಿದರು!
ಸಾವಿರಾರು ಮಂದಿ ಎಲ್ಲಾ ಧರ್ಮದವರು ಸೇರಿ ಸಮಾವೇಶ ಮಾಡಿದ್ದೇವೆ. ನಾವೆಲ್ಲಾ, ಅದಕ್ಕೆ ಪ್ರೋತ್ಸಾಹ ಕೊಡಬೇಕು. ಆದ್ರೆ ಇಂತಹ ಮಾತನ್ನು ಆಡಬಾರದು ಎಂದು ಅವರು ಕಿವಿ ಮಾತು ಹೇಳಿದರು. ಈ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಈಗ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಕರ್ನಾಟಕದ ರಾಜಕೀಯದಲ್ಲಿ ಯತ್ನಾಳ್‌ರ ಹೇಳಿಕೆಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಒಟ್ನಲ್ಲಿ ರಾಜ್ಯದಲ್ಲಿ ಮತ್ತೊಂದು ಸುತ್ತಿನಲ್ಲಿ ರಾಜಕೀಯ ತಿಕ್ಕಾಟ ಶುರುವಾದಂತೆ ಕಾಣ್ತಿದೆ. ಅದರಲ್ಲೂ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ, ಇಂಥ ವಿಚಾರಗಳು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿವೆ. ಹೀಗೆ ಇದೆಲ್ಲಾ ಯಾವಾಗ ಎಂಡ್ ಆಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಇಲ್ಲವಾದರೆ ಈ ತಿಕ್ಕಾಟ ಮತ್ತಷ್ಟು ದಿನವು ಹೀಗೆ ಮುಂದುವರಿಯುವುದು ಪಕ್ಕಾ.












Click it and Unblock the Notifications