ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಂಡಿ ಹಣ ಎಣಿಕೆ ಬಗ್ಗೆ ಮುಜರಾಯಿ ದೇವಾಲಯಗಳಿಗೆ ಸೂಚನೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14 : ಹುಂಡಿ ಹಣ ಕದಿಯಲು ಬಂದ ಕಳ್ಳರು ಮೂವರು ಅರ್ಚಕರನ್ನು ಹತ್ಯೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಮಜರಾಯಿ ಇಲಾಖೆ ದೇವಾಲಯಗಳಿಗೆ ಹುಂಡಿ ಹಣ ಎಣಿಕೆ ಕುರಿತು ಮಹತ್ವದ ಸೂಚನೆ ನೀಡಲಾಗಿದೆ.

ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮೌಖಿಕವಾಗಿ ದೇವಾಲಯಗಳಿಗೆ ಈ ಸೂಚನೆ ನೀಡಿದ್ದಾರೆ. ಪ್ರತಿ ತಿಂಗಳಿಗೊಮ್ಮೆ ಅಥವ ಹುಂಡಿ ಭರ್ತಿಯಾದರೆ ತಕ್ಷಣದ ಎಣಿಕೆ ಮಾಡಬೇಕು ಎಂದು ಹೇಳಿದ್ದಾರೆ.

ಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತಕರ್ನಾಟಕದ ದೇವಾಲಯಗಳ ಆದಾಯ ಶೇ 72ರಷ್ಟು ಕುಸಿತ

Directions To Muzrai Temples Of Karnataka About Hundi Collection

ಮಂಡ್ಯದ ಅರ್ಕೇಶ್ವರಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಮಾಡದೆ ತಿಂಗಳುಗಳು ಕಳೆದಿತ್ತು. ಹುಂಡಿ ತುಂಬಿದ್ದನ್ನು ಗಮನಿಸಿದ್ದ ಕಳ್ಳರು ಅದನ್ನು ಕದಿಯಲು ಬಂದಿದ್ದರು. ಆಗ ಮೂವರು ಅರ್ಚಕರ ಹತ್ಯೆ ನಡೆದಿತ್ತು. ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ತ್ರಿವಳಿ ಕೊಲೆ ಆರೋಪಿಗಳ ಮೇಲೆ ಶೂಟೌಟ್: ಮೂವರ ಬಂಧನ ಮಂಡ್ಯ ತ್ರಿವಳಿ ಕೊಲೆ ಆರೋಪಿಗಳ ಮೇಲೆ ಶೂಟೌಟ್: ಮೂವರ ಬಂಧನ

ಕರ್ನಾಟಕದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 34,000 ದೇವಾಲಯಗಳಿವೆ. ಇವುಗಳಲ್ಲಿ 'ಎ' ಮತ್ತು 'ಬಿ' ಗ್ರೇಡ್ ದೇವಾಲಯಗಳ ಸಂಖ್ಯೆ 500. ಇನ್ನು ಮುಂದೆ ದೇವಾಲಯಗಳಲ್ಲಿ ತಿಂಗಳಿಗೊಮ್ಮೆ ಅಥವ ಹುಂಡಿ ತುಂಬಿದಾಗ ಎಣಿಕೆ ಮಾಡಲಾಗುತ್ತದೆ.

ಕೆಲವು ನಿಬಂಧನೆಗಳೊಂದಿಗೆ ಜು.1ರಿಂದ ಹೊರನಾಡು ದೇವಾಲಯ ಓಪನ್ಕೆಲವು ನಿಬಂಧನೆಗಳೊಂದಿಗೆ ಜು.1ರಿಂದ ಹೊರನಾಡು ದೇವಾಲಯ ಓಪನ್

ಈ ದೇವಾಲಯಗಳಲ್ಲಿ ಮೂರು ತಿಂಗಳಿಗೊಮ್ಮೆ ಹುಂಡಿ ಎಣಿಕೆ ಮಾಡಲಾಗುತ್ತದೆ. ಜಾತ್ರೆ, ಉತ್ಸವ ಮುಂತಾದ ಕಾರ್ಯಕ್ರಮಗಳು ಇದ್ದರೆ ಹುಂಡಿ ತುಂಬಿದಾಗ ಈ ಎಣಿಕೆ ಮಾಡಲಾಗುತ್ತಿದೆ.

Recommended Video

America ವಿರುದ್ಧ ತಿರುಗಿಬಿದ್ದ China | Oneindia Kannada

ಮುಜರಾಯಿ ಇಲಾಖೆ ದೇವಾಲಯಗಳ ಪೈಕಿ ಕುಕ್ಕೆ ಸುಬ್ರಮಣ್ಯ ದೇವಾಲಯ ಅತಿ ಶ್ರೀಮಂತವಾದದ್ದು. 2019ನೇ ಸಾಲಿನಲ್ಲಿ ದೇವಾಲಯದ ವಾರ್ಷಿಕ ಆದಾಯ 98 ಕೋಟಿ ರೂ. ಆಗಿತ್ತು.

English summary
After the incident of Three priests murdered muzrai temple asked to count hundi collection every month. 34,000 temples in Karnataka under muzrai department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X