ಕರ್ನಾಟಕ; 5 ತಿಂಗಳ ಬಳಿಕ ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣ
ಬೆಂಗಳೂರು, ಡಿಸೆಂಬರ್ 01 : 5 ತಿಂಗಳ ಬಳಿಕ ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮೂರಂಕಿಗೆ ಇಳಿಕೆಯಾಗಿದೆ. ನವೆಂಬರ್ 30ರಂದು 998 ಹೊಸ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಸೋಮವಾರ 998 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 8,84,897ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು 23,279.
ಜೂನ್ ತಿಂಗಳಿನಲ್ಲಿ ಕರ್ನಾಟಕದಲ್ಲಿ 1 ಸಾವಿರಕ್ಕಿಂತ ಕಡಿಮೆ ಹೊಸ ಪ್ರಕರಣ ಒಂದು ದಿನದಲ್ಲಿ ದಾಖಲಾಗಿತ್ತು. ಬಳಿಕ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಅಕ್ಟೋಬರ್‌ನಲ್ಲಿ 11 ಸಾವಿರ ಹೊಸ ಪ್ರಕರಣ ಒಂದೇ ದಿನ ದಾಖಲಾಗಿತ್ತು.
ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಲೇ ಇದೆ. ಶನಿವಾರ 1522, ಭಾನುವಾರ 1291 ಹೊಸ ಪ್ರಕರಣ ದಾಖಲಾಗಿದ್ದು, ಸೋಮವಾರ ಮೂರಂಕಿಗೆ ಬಂದು ನಿಂತಿದೆ.

10 ಸಾವಿರದ ಗಡಿ ದಾಟಿದೆ
ಕರ್ನಾಟಕದಲ್ಲಿ ಜೂನ್ ಬಳಿಕ ಹೊಸ ಕೋವಿಡ್ ಪ್ರಕರಣದಲ್ಲಿ ಭಾರಿ ಏರಿಕೆಯಾಗಿತ್ತು. ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಒಂದು ದಿನ 11 ಸಾವಿರ ಹೊಸ ಪ್ರಕರಣ ದಾಖಲಾಗಿತ್ತು. 10ಕ್ಕೂ ಹೆಚ್ಚು ಬಾರಿ ಒಂದೇ ದಿನದಲ್ಲಿ 10 ಸಾವಿರದ ಗಡಿಯನ್ನು ಹೊಸ ಪ್ರಕರಣಗಳು ದಾಟಿದ್ದವು.

ಸಾವಿನ ಸಂಖ್ಯೆಯೂ ಇಳಿಕೆ
ಕರ್ನಾಟಕದಲ್ಲಿ ಸೋಮವಾರ 19 ಜನರು ಮೃತಪಟ್ಟಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 11,778. ರಾಜ್ಯದಲ್ಲಿ ಹೊಸ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಒಂದೇ ದಿನ 150 ಜನರು ಮೃತಪಟ್ಟಿರುವುದು ಸಹ ದಾಖಲಾಗಿತ್ತು.

ಜಿಲ್ಲೆಗಳಲ್ಲಿಯೂ ಕಡಿಮೆ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಒಂದಂಕಿಗೆ ಬಂದು ನಿಂತಿದೆ. ನವೆಂಬರ್ 30ರಂದು ಬಾಗಲಕೋಟೆ 3, ಬೀದರ್ 2, ಚಿತ್ರದುರ್ಗ 1, ಧಾರವಾಡ 8, ಗದಗ 3, ಕೊಡಗು 4, ಯಾದಗಿರಿ 4, ರಾಮನಗರದಲ್ಲಿ 8 ಹೊಸ ಪ್ರಕರಣಗಳು ದಾಖಲಾಗಿವೆ.
Recommended Video

ಬೆಂಗಳೂರು ನಗರ
ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಬೆಂಗಳೂರು ನಗರದಲ್ಲಿ 444 ಹೊಸ ಪ್ರಕರಣ ಸೋಮವಾರ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 3,69,734. ಸಕ್ರಿಯ ಪ್ರಕರಣಗಳ ಸಂಖ್ಯೆ 17,248 ಆಗಿದೆ.












Click it and Unblock the Notifications