ಸಿಎಂ ಬದಲಾವಣೆ; ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಬೀಸಿದ ಸಚಿವ

ಬಾಗಲಕೋಟೆ, ಜೂನ್‌ 29: ಒಬ್ಬರು ಸಿಎಂ ಇದ್ದಾಗ ಅವರ ಬಗ್ಗೆ ಮಾತನಾಡುವ ಪ್ರಶ್ನೆನೇ ಬರಲ್ಲ ಎಂದು ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ್ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಸಿಎಂ ಬದಲಾವಣೆ ಕುರಿತು ಚಂದ್ರಶೇಖರ ಸ್ವಾಮಿಜಿ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಅಭಿಪ್ರಾಯ ಅದರ ಬಗ್ಗೆ ನಾವೇನು ಹೇಳಲ್ಲ. ರಾಜ್ಯದಲ್ಲಿ ಸ್ವಾಮಿಜಿಗಳು ಅನೇಕ ಹೇಳಿಕೆ ಕೊಟ್ಟಿದ್ದಾರೆ. ಸ್ವಾಮಿಜಿಗಳು ಹೇಳಿಕೊಳ್ಳಬಹುದು. ಈಗ ಒಬ್ಬರು ಸಿಎಂ ಇದ್ದಾಗ ಅವರ ಬಗ್ಗೆ ಮಾತನಾಡುವ ಪ್ರಶ್ನೆನೇ ಬರಲ್ಲ,ಈಗ ಇರುವವರು ದಕ್ಷ ಸಿಎಂ,ಅನುಭವಿ ಆಡಳಿತಗಾರ ಇನ್ನೇನು ಬೇಕು. ಸಿಎಂ ಬಗ್ಗೆ ಪಕ್ಷದ ಆಂತರಿಕ ವಿಚಾರ ಪಕ್ಷದ ಚೌಕಟ್ಡಿನಲ್ಲಿ ಆಗಬೇಕು ಎಂದು ಹೇಳಿದರು.

Dinesh Gundurao There Will Be No Change Of CM In The State For Any Reason

ಕಾಂಗ್ರೆಸ್ ಸರ್ಕಾರ ಕಚ್ಚಾಟದಿಂದ ಪತನವಾಗುತ್ತೆ ವಿಪಕ್ಷ ನಾಯಕ ಆರ್ ಅಶೋಕ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್.ಅಶೋಕ ವಿಪಕ್ಷ ನಾಯಕರು ಅದನ್ನೇ ಹೇಳಬೇಕು,ಅವರು ಕೇಂದ್ರ ಸರ್ಕಾರ ಉಳಿಸಿಕೊಳ್ಳಲಿ ಮೊದಲು. ಅಲ್ಲಿ ಬಿಜೆಪಿಗೆ ಬಹುಮತವಿಲ್ಲ, ಜವಾಬ್ದಾರಿಯುತ ಆಡಳಿತ ನಡೆಸಲಿ. ಮುಂದೆ ಕೇಂದ್ರದಲ್ಲಿ ಬಿಜೆಪಿ ಮಾಡಿಕೊಂಡ ಪ್ರಮಾದಕ್ಕೆ ಪಶ್ಚ್ಯಾತಾಪ ಪಡಬೇಕಾಗುತ್ತೆ ಎಂದು ತಿರುಗೇಟು ನೀಡಿದರು.

ಸಿಎಂ ಬದಲಾವಣೆ ಕಾಂಗ್ರೆಸ್ ನವರೇ ತೇಲಿಬಿಟ್ಟ ವಿಚಾರ ಎಂಬ ಪ್ರಶ್ನೆಗೆ ಉತ್ತರಿಸಿ, ಅದು ವಿನಾಕಾರಣ,ಸಿಎಂ ಬದಲಾವಣೆಯೇ ವಿನಾಕಾರಣ. ಇಂತಹ ವಿಷಯಗಳು ಸಿಎಂ ಇದ್ದಾಗ ಇನ್ನೊಬ್ಬ ಸಿಎಂ ಮಾಡುವ ವಿಚಾರ ಸಲ್ಲದು. ದೇಶದಲ್ಲಿಯೇ ಜನಪ್ರಿಯ ಸಿಎಂ ಆಂದ್ರೆ ಅದು ಸಿಎಂ ಸಿದ್ದರಾಮಯ್ಯ. ಸಿಎಂ ಬದಲಾವಣೆ ಬಗ್ಗೆ ಚರ್ಚೆ ಅಪ್ರಸ್ತುತ, ಇದರ ಜೊತೆಗೆ ಇನ್ನೊಂದು ಡಿಸಿಎಂ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅದು ಕೂಡಾ ಚರ್ಚಾ ವಿಷಯವಲ್ಲ ಎಂದು ಹೇಳಿದರು.

ನೀಟ್ ಪರೀಕ್ಷೆಯಲ್ಲಿ ಅಕ್ರಮ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಮಾತನಾಡಿದ ಸಚಿವರು, ನೀಟ್‌ ನಲ್ಲಿ ಆಗಿರೋದು ದುರಾದೃಷ್ಟಕರ ಮತ್ತು ಅತ್ಯಂತ ನೋವಿನ ಸಂಗತಿ ವಿಚಾರವಾಗಿದೆ. ಮಕ್ಕಳ ಭವಿಷ್ಯ ಪ್ರಶ್ನೆ ಇದು ಹೊರೆಗೆ ಬಂದಿದೆ. ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಜನರು ಓದಿ ಕಷ್ಟಪಟ್ಟು ನೀಟ್ ಪರೀಕ್ಷೆ ಬರೆದವರ ಪಾಪ ಅವರ ಭವಿಷ್ಯ ಏನಾಗಬೇಕು ಪಾಪ ಎಂದ ಸಚಿವರು, ನೀಟ್ ಬಗ್ಗೆ ಕುಲಂಕುಶವಾಗಿ ಚರ್ಚೆ ಆಗಬೇಕು.

ನಮ್ಮ ಕರ್ನಾಟಕದ ಮಕ್ಕಳಿಗೆ ಅನುಕೂಲ ಆಗುತ್ತಿಲ್ಲ. ನಮ್ಮ ಮಕ್ಕಳ ಎಲ್ಲಿ ಹೋಗ್ಬೇಕು ಅವರ ಭವಿಷ್ಯ ಏನು ಎಂದು ಪ್ರಶ್ನೆ ಮಾಡಿದ ಸಚಿವರು, ನನ್ನ ವಯಕ್ತಿಕ ಅಭಿಪ್ರಾಯ ನೀಟ್ ಬೇಕಾ ಬೇಡ್ವಾ ಎಂದು ಅಧ್ಯಾಯ ಮಾಡಬೇಕು,ನಮ್ಮ ರಾಜ್ಯದ ಮಕ್ಕಳ ಹಿತ ಕಾಪಾಡುವುದರ ಬಗ್ಗೆ ಗಂಭೀರ ಅಧ್ಯಯನ ಚರ್ಚ ಆಗಬೇಕಾಗಿದೆ ಎಂದು ದಿನೇಶ ಗುಂಡೂರಾವ್ ತಿಳಿಸಿದರು.

ಇದೇ ಸಮಯದಲ್ಲಿ,ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ವಾಗಿ ಮಾತನಾಡಿ, ನೋಡೋಣ ಮುಂದೆ ಏನಾಗುತ್ತೆ ಅಂತಾ. ಸದ್ಯದಲ್ಲೆ ಉಪ ಚುನಾವಣೆಗಳು ಬರುತ್ತಿದೆ. 3 ಉಪಚುನಾವಣೆಗಳಾಗಲಿ, ಮುಂದೆ ನೋಡೋಣ ಎಂದು, ಸಿಎಂ ಬದಲಾವಣೆ ವಿಷ್ಯ ಹುಟ್ಟಾಕಿದ್ದು ಕಾಂಗ್ರೆಸ್ ಎಂಬ ವಿಚಾರವಾಗಿ,ವ್ಯವಸ್ಥೆಯಲ್ಲಿ ಮಾದ್ಯಮದವರು ಕೇಳ್ತಿರಾ,ಯಾರೋ ಒಬ್ಬರು ಹೇಳ್ತಾರೆ, ಇದು ಅಷ್ಟ ಸೀರಿಯಸ್ ಇಶ್ಯೂ ಅಲ್ಲ,ತುಂಬಾ ಚರ್ಚೆ ಆಗಿ ಆಗಿ ಈ ರೀತಿ ಇಶ್ಯೂ ಆಗ್ತಿದೆ ಅಷ್ಟೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+