ಮಾಧ್ಯಮಗಳ ವಿರುದ್ಧ ದಿಗ್ವಿಜಯ್‌ ಸಿಂಗ್‌ ಅಸಮಾಧಾನವೇಕೆ?

ಬೆಂಗಳೂರು, ಡಿ. 9 : ಮಾಧ್ಯಮಗಳ ವಿರುದ್ಧ ದಿಗ್ವಿಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧವಾದ ವರದಿಗಳನ್ನು ಮಾತ್ರ ಪ್ರಸಾರ ಮಾಡುತ್ತವೆ ಎಂದು ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್‌ ಮಾಧ್ಯಮಗಳು ಬೆಂಗಳೂರು ಮತ್ತು ಕರ್ನಾಟಕದ ವಿರುದ್ಧದವಾದ ಸುದ್ದಿಗಳನ್ನು ಮಾತ್ರ ಪ್ರಸಾರ ಮಾಡುತ್ತಿವೆ. ಉತ್ತಮ ಯೋಜನೆ ಜಾರಿಗೆ ಬಂದಾಗ ಏಕೆ ಪ್ರಚಾರ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. [ಕರ್ನಾಟಕ ಮೊಬೈಲ್ ಒನ್ ರಾಜ್ಯಕ್ಕೆ ಅರ್ಪಣೆ]

Digvijaya Singh

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಧ್ಯಮಗಳು ವರದಿ ಮಾಡುತ್ತವೆ. ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ಮಾಡಿದರೆ, ಸುದ್ದಿ ಮಾಡುವುದಿಲ್ಲ ಎಂಬುದು ದಿಗ್ವಿಜಯ್ ಸಿಂಗ್ ಅವರು ದೂರು.

ಸಿಂಗ್ ಕೋಪಕ್ಕೆ ಕಾರಣವೇನು : ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷಿ "ಡಿಜಿಟಲ್‌ ಇಂಡಿಯಾ' ಕಾರ್ಯಕ್ರಮದ ಮೂಲ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ "ಕರ್ನಾಟಕ ಮೊಬೈಲ್‌ ಒನ್‌' ಯೋಜನೆ ಜಾರಿಗೆ ತಂದಿದೆ.

ಸೋಮವಾರ ಬೆಂಗಳೂರು ಅಂತಾ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸುಮಾರು 4 ಸಾವಿರ ಸೇವೆಗಳನ್ನು ಜನರ ಬೆರಳತುದಿಯಲ್ಲಿ ನೀಡುವ ದೇಶದ ಪ್ರಪ್ರಥಮ ಯೋಜನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡಿದ್ದಾರೆ.

ಆದರೆ, ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದಿಲ್ಲ ಎಂಬುದು ದಿಗ್ವಿಜಯ್ ಸಿಂಗ್ ಅಸಮಾಧಾನಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಅತ್ಯಾಚಾರವಾದರೆ, ದೊಡ್ಡ ಸುದ್ದಿ ಮಾಡುವ ಮಾಧ್ಯಮಗಳು ಇದನ್ನು ಏಕೆ ಸುದ್ದಿ ಮಾಡಲಿಲ್ಲ? ಎಂಬುದು ಸಿಂಗ್ ಪ್ರಶ್ನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+