RCB: 'ಈ ಸಲ ಕಪ್ ನಮ್ಮದು', 18 ವರ್ಷಗಳ ವಿರಾಟ್ ಕೊಹ್ಲಿ ಶ್ರಮ ಹೊಗಳಿದ ಸಿದ್ದರಾಮಯ್ಯ, ಗಣ್ಯರ ಹರ್ಷ
ಬೆಂಗಳೂರು, ಜೂನ್ 04: ಕೊಟ್ಯಾನು ಕೋಟಿ ಅಭಿಮಾನಿಗಳ ಒಂದೂವರೆ ದಶಕಕ್ಕೂ ಹೆಚ್ಚು ಕಾಲದ ಕನಸನ್ನು Royal Challengers Bengaluru (RCB) ತಂಡ IPL 2025 ಕಪ್ ಗೆಲ್ಲುವ ಮೂಲಕ ನನಸು ಮಾಡಿರುವುದು ಜಗಜ್ಜಾಹೀರಾಗಿದೆ. ಲೈವ್‌ನಲ್ಲಿ ಸುಮಾರು 62 ಕೋಟಿ ಮಂದಿ ವೀಕ್ಷಣೆ ಮಾಡಿ ಇತಿಹಾಸ ನಿರ್ಮಿಸಲಾಗಿದೆ. ಇದೀಗ ಈ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಎಚ್‌ಡಿ ಕುಮಾರಸ್ವಾಮಿ ಇತರ ರಾಜಕಾರಣಿಗಳು, ಸೆಲೆಬ್ರೇಟಿಗಳು ಸೇರಿದಂತೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ವರ್ಷಗಳ ಕನಸು ಆರ್‌ಸಿಬಿ ನನಸು ಮಾಡಿದೆ. ಅಭಿಮಾನಿಗಳ ಕಾಯುವಿಕೆ ಅಂತ್ಯವಾಗಿದೆ. 'ಈ ಸಲ ಕಪ್ ನಮ್ಮದು' ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಐಪಿಎಲ್ ಫೈನಲ್ ಆಟದ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್ಸಿಬಿ ಪ್ರತಿ ಆಟಗಾರರು ಪ್ರದರ್ಶನ ನೀಡಿದ್ದಾರೆ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ. ಕೊನೆಯದಾಗಿ, ಈ ''ಸಲ ಕಪ್ ನಮ್ಮದು'' ಎಂದು ಶ್ಲಾಘಿಸಿದ್ದಾರೆ.
ಈ ಗೆಲುವಿಗೆ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಮನಸೂರೆ
ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಈ ಸಲ ಕಪ್ ನಮ್ದು IPL2025 ಅಂಕದಲ್ಲಿ ಐತಿಹಾಸಿಕ ದ್ವಿಗ್ವಿಜಯ ಸಾಧಿಸಿದ ದಿನವಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. RCBಗೆ ಟ್ಯಾಗ್ ಮಾಡಿರುವ ಅವರು ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೇ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಮನಸೂರೆಗೊಂಡಿದ್ದಾರೆ ಎಂದು ಆರ್‌ಸಿಬಿ ಗೆಲುವನ್ನು ವರ್ಣಿಸಿದ್ದಾರೆ.
ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಈ ವೇಳೆ ಕೇಂದ್ರ ಸಚಿವರು ಅಭಿನಂದಿಸುತ್ತೇನೆ ಎಂದಿದ್ದಾರೆ.
Finally ಈ ಸಲ ಕಪ್ ನಮ್ದೇ! 💪♥️
— Ashwini Puneeth Rajkumar (@Ashwini_PRK) June 3, 2025
After years of unwavering support, endless chants & unbroken belief, our dreams have come true!
RCB are the #IPL2025 Champions
ನಮ್ಮ ತಂಡ, ನಮ್ಮ ಗೆಲುವು, #ನಮ್ಮRCB 💫
ವರ್ಷಗಳ ನಿರೀಕ್ಷೆ ಹಾಗೂ ನಂಬಿಕೆ ಮತ್ತು ಅಳಲಿನ ನಂತರ ಇಂದು ಕನಸು ನನಸಾಗಿದೆ!@RCBTweets #PlayBold pic.twitter.com/b009BxTwDL
ನಂಬಿಕೆ, ಜಪಗಳಿಗೆ ಸಿಕ್ಕ ಜಯ: ಅಶ್ವಿನಿ ಪುನೀತ್ ರಾಜ್‌ಕುಮಾರ್
ಇನ್ನೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಕೊನೆಗೂ ಈ ಸಲ ಕಪ್ ನಮ್ಮದಾಗಿದೆ. ವರ್ಷಗಳ ಅಚಲ ಬೆಂಬಲ, ಅಂತ್ಯವಿಲ್ಲದ ಜಪಗಳು, ಪ್ರಾರ್ಥನೆ ಮತ್ತು ಅಖಂಡ ನಂಬಿಕೆಯ ನಂತರ, ನಮ್ಮ ಕನಸುಗಳು ನನಸಾಗಿವೆ!
ಆರ್‌ಸಿಬಿ IPL2025 ಚಾಂಪಿಯನ್ಸ್ ಆಗಿದೆ. ನಮ್ಮ ತಂಡ, ನಮ್ಮ ಗೆಲುವು, ನಮ್ಮ ಆರ್‌ಸಿಬಿ ಎಂದಿರುವ ಅವರು, ವರ್ಷಗಳ ನಿರೀಕ್ಷೆ ಹಾಗೂ ನಂಬಿಕೆ ಮತ್ತು ಅಳಲಿನ ನಂತರ ಇಂದು ಕನಸು ನನಸಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ಐಪಿಎಲ್ ವೇಳೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರು ಆರ್‌ಸಿಬಿ ಬೆಂಬಲಿಸಿಕೊಂಡೆ ಬಂದಿದ್ದರು. ಆರ್‌ಸಿಬಿ ಜೆರ್ಸಿ ತೊಟ್ಟು ಮೈದಾನಕ್ಕಿಳಿಯುತ್ತಿದ್ದರು. ಕ್ರಿಕೆಟ್ ಪಂದ್ಯಾವಳಿಗಳನ್ನು ಎಂಜಾಯ್ ಮಾಡುತ್ತಿದ್ದರು. ಅವರ ಫೋಟೋ ಹಾಗೂ ಆರ್‌ಸಿಬಿ ಚಾಂಪಿಯನ್ಸ್ ಫೋಟೋ ಹಾಕಿ ಅಶ್ವಿನಿ ಅವರು ಪೋಸ್ಟ್ ಮಾಡಿ ಆರ್‌ಸಿಬಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ..
18 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಸುಧೀರ್ಘ ಕನಸೊಂದು ವರ್ಷಗಳ ನಂತರ ಆರ್‌ಸಿಬಿ ತಂಡ ನನಸು ಮಾಡಿದೆ. ಅಭಿನಂದನೆಗಳು ವಿರಾಟ್ ಕೊಹ್ಲಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕುರಿತು ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಸಂಭ್ರಮಿಸಿದ್ದಾರೆ.
'ಈ ಸಲ ಕಪ್ ನಮ್ದು: ಸುಮಲತಾ ಸಂತಸ
18 ವರ್ಷದ ಐಪಿಎಲ್ ಪಯಣದಲ್ಲಿ ನಾಲ್ಕನೇ ಬಾರಿಯ ಪ್ರಯತ್ನದಲ್ಲಿ ಫೈನಲ್ ಪಂದ್ಯ ಗೆದ್ದು ಟ್ರೋಫಿಯನ್ನು ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡ ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ಸುಮಲತಾ ಅಂಬರೀಶ್ ಅವರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಿತ ಈ ಬಾರಿ ಕಪ್ ನಮ್ಮದು ಎಂದು ಆರ್‌ಸಿಬಿ ವಿಜಯೋತ್ಸವ ಕುರಿತು ಮಾತನಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿರುವ ಆರ್ ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯ ಅತ್ಯಂತ ಕುತೂಹಲದಿಂದ ಕೂಡಿತ್ತು. ಆರ್ ಸಿಬಿ ತಂಡದ ಬಾಲರ್ ಗಳ ಕರಾರುವಾಕ್ ದಾಳಿ ಹಾಗೂ ತಂಡದ ಸಂಘಟಿತ ಆಟದ ಪರಿಣಾಮ, ಐಪಿಎಲ್ ಇತಿಹಾಸದ ಹದಿನೆಂಟು ವರ್ಷಗಳ ಟ್ರೊಫಿ ಬರವನ್ನು ನೀಗಿಸಿತು.
ಆರ್ ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ ಅವರ ನಾಯಕತ್ವದಲ್ಲಿ ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಿದ್ದು, ಇಡೀ ಆರ್ ಸಿಬಿ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.












Click it and Unblock the Notifications