ಧಾರವಾಡದಲ್ಲಿ ವಿನೂತನ ಪ್ರಯೋಗ: ಕೈದಿಗಳೇ ನಿರ್ವಹಿಸಲಿರುವ ಹೊಸ ಪೆಟ್ರೋಲ್ ಬಂಕ್ ನವೆಂಬರ್‌ನಲ್ಲಿ ಶುರು!

ನಮ್ಮ ಸಮಾಜದಲ್ಲಿ ಅಪರಾಧ ಮಾಡಿ ಜೈಲು ಸೇರಿದ ಕೈದಿಗಳಿಗೆ ಕೇವಲ ಶಿಕ್ಷೆ ನೀಡುವುದು ಮಾತ್ರವಲ್ಲದೆ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ವಿನೂತನ ಹೆಜ್ಜೆಯನ್ನಿಟ್ಟಿದೆ.

ಇದರ ಭಾಗವಾಗಿ, ಮುಂದಿನ ದಿನಗಳಲ್ಲಿ ಬಿಡುಗಡೆಯಾದ ಬಳಿಕ ಅವರು ಗೌರವಯುತ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ 'ಕೈದಿಗಳ ಪೆಟ್ರೋಲ್ ಬಂಕ್' ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಧಾರವಾಡದಲ್ಲಿ ಕೈದಿಗಳೇ ಸಂಪೂರ್ಣವಾಗಿ ನಿರ್ವಹಿಸಲಿರುವ ಈ ಪೆಟ್ರೋಲ್ ಬಂಕ್ ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Dharwad Prison Inmates to Run New HP Petrol Bunk Unique Step Towards Prisoner Rehabilitation

ಧಾರವಾಡ ಕೇಂದ್ರ ಕಾರಾಗೃಹದಿಂದ ಮಹತ್ವಾಕಾಂಕ್ಷಿ ಯೋಜನೆ

ಧಾರವಾಡ ಕೇಂದ್ರ ಕಾರಾಗೃಹದ ನೇತೃತ್ವದಲ್ಲಿ ಈ ವಿನೂತನ ಯೋಜನೆಗೆ ಚಾಲನೆ ನೀಡಲಾಗಿದೆ. ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ (ಎಸ್‌ಪಿ ಆಫೀಸ್) ಮುಂಭಾಗದಲ್ಲಿಯೇ ಹೆಚ್‌ಪಿ (HP) ಪೆಟ್ರೋಲ್ ಬಂಕ್ ನಿರ್ಮಾಣ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಬರುವ ನವೆಂಬರ್ ಅಂತ್ಯದೊಳಗೆ ಈ ಪೆಟ್ರೋಲ್ ಬಂಕ್ ಕಾರ್ಯಾಚರಣೆ ಶುರು ಮಾಡಲಿದೆ.

ಕೇವಲ ಧಾರವಾಡ ಮಾತ್ರವಲ್ಲದೆ, ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಬೆಳಗಾವಿ ಹಾಗೂ ಬಳ್ಳಾರಿ ಕಾರಾಗೃಹಗಳಲ್ಲೂ ಇಂತಹದ್ದೇ ಜನಸ್ನೇಹಿ ಕ್ರಮವನ್ನು ಜಾರಿಗೆ ತರಲು ಇಲಾಖೆ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಉಪಕ್ರಮದಿಂದ ಕಾರಾಗೃಹ ಇಲಾಖೆಗೆ ಉತ್ತಮ ಆದಾಯದ ಮೂಲವೂ ಸೃಷ್ಟಿಯಾಗಲಿದೆ.

ಸಜಾ ಬಂದಿಗಳ ಪುನರ್ವಸತಿ

ಈ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಲು ಎಲ್ಲಾ ಕೈದಿಗಳಿಗೂ ಅವಕಾಶ ಸಿಗುವುದಿಲ್ಲ. ಸಜಾ ಬಂದಿಗಳ ಪುನರ್ವಸತಿ ದೃಷ್ಟಿಯಿಂದ, ಕನಿಷ್ಠ 8 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿರುವ ಹಾಗೂ ಕಾರಾಗೃಹದಲ್ಲಿ ಅತ್ಯುತ್ತಮ ನಡತೆ ಹೊಂದಿರುವ ಕೈದಿಗಳಿಗೆ ಮಾತ್ರ ಇಲ್ಲಿ ಕೆಲಸ ಮಾಡಲು ಮೊದಲ ಆದ್ಯತೆ ನೀಡಲಾಗುತ್ತದೆ.

ಪ್ರಸ್ತುತ ಜೈಲಿನ ಒಳಗೆ ಅಡುಗೆಮನೆ, ಕಚೇರಿ ಹಾಗೂ ಇತರ ವಿಭಾಗಗಳಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಬಂದಿಗಳನ್ನ ಈ ಕೆಲಸಕ್ಕಾಗಿ ಆಯ್ಕೆ ಮಾಡುವ ಉದ್ದೇಶವನ್ನ ಅಧಿಕಾರಿಗಳು ಹೊಂದಿದ್ದಾರೆ. ಬಂಕ್‌ನಲ್ಲಿ ಒಟ್ಟು 3 ಶಿಫ್ಟ್‌ಗಳಲ್ಲಿ ಕೆಲಸ ನಡೆಯಲಿದ್ದು, ಇಲಾಖೆಯ ಸಿಬ್ಬಂದಿಯ ಜೊತೆಗೆ ಈ ಕೈದಿಗಳನ್ನ ನಿಯೋಜಿಸಲಾಗುತ್ತದೆ. ಇದು ಕೈದಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಆತ್ಮವಿಶ್ವಾಸವನ್ನ ಹೆಚ್ಚಿಸಲಿದೆ.

ಬಂಕ್ ಆವರಣದಲ್ಲೇ ಜೈಲು ಉತ್ಪನ್ನಗಳ ಮಾರಾಟ ಮಳಿಗೆ

ಇದು ಕೇವಲ ಇಂಧನ ಮಾರಾಟಕ್ಕೆ ಮಾತ್ರ ಈ ಜಾಗ ಸೀಮಿತವಾಗಿರುವುದಿಲ್ಲ. ಪೆಟ್ರೋಲ್ ಬಂಕ್ ಆವರಣದಲ್ಲೇ, ಕೈದಿಗಳು ಸ್ವತಃ ತಮ್ಮ ಕೈಯಾರೆ ತಯಾರಿಸುವ ವಿವಿಧ ವಸ್ತುಗಳನ್ನ ಸಾರ್ವಜನಿಕರಿಗೆ ತಲುಪಿಸಲು ಪ್ರತ್ಯೇಕ 'ಜೈಲು ಉತ್ಪನ್ನಗಳ ಮಾರಾಟ ಮಳಿಗೆ' ಸ್ಥಾಪಿಸುವ ಭರ್ಜರಿ ಯೋಜನೆಯೂ ಕಾರಾಗೃಹ ಇಲಾಖೆಯ ಮುಂದಿದೆ.

ಕೈಮಗ್ಗದಿಂದ ತಯಾರಾದ ಟವಲ್, ಕರವಸ್ತ್ರ, ಗುಣಮಟ್ಟದ ಬೆಡ್‌ಶೀಟ್, ಚೇರ್ ಮ್ಯಾಟ್, ಕಾರ್ಪೆಟ್, ಪರಿಸರ ಸ್ನೇಹಿ ಜೂಟ್ ಬ್ಯಾಗ್‌ಗಳು, ಲಾವಂಚದ ಉತ್ಪನ್ನಗಳು ಸೇರಿದಂತೆ ಜೈಲಿನ ಬೇಕರಿಯಲ್ಲಿ ತಯಾರಾಗುವ ರುಚಿಕರ ತಿನಿಸುಗಳಿಗೂ ಇಲ್ಲಿ ಮಾರುಕಟ್ಟೆ ಕಲ್ಪಿಸಲಾಗುತ್ತದೆ.

ಅಪರಾಧದ ಕಳಂಕ ಹೊತ್ತು ಜೈಲು ಪಾಲಾಗಿರುವ ಕೈದಿಗಳಿಗೆ ಸಮಾಜದಲ್ಲಿ ಮತ್ತೆ ತಲೆ ಎತ್ತಿ ನಿಲ್ಲಲು ಈ ಯೋಜನೆ ಒಂದು ಅದ್ಭುತ ವೇದಿಕೆಯಾಗಿದೆ. ಶಿಕ್ಷೆಯ ಜೊತೆಗೆ ಸುಧಾರಣೆಗೂ ಒತ್ತು ನೀಡುತ್ತಿರುವ ಕಾರಾಗೃಹ ಇಲಾಖೆಯ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+