Dharwad-Ayodhya Train: 'ಅಯೋಧ್ಯೆ ಶ್ರೀರಾಮಮಂದಿರ'ಕ್ಕೆ ಧಾರವಾಡದಿಂದ ವಿಶೇಷ ರೈಲು ವ್ಯವಸ್ಥೆಯ ಮಾಹಿತಿ
ಹುಬ್ಬಳ್ಳಿ, ನವೆಂಬರ್ 24: ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಬಹುತೇಕ ಅಂತಿಮಗೊಂಡಿದೆ. 2024ರ ಜನವರಿಯಲ್ಲಿ ಭಕ್ತರಿಗೆ ಮುಕ್ತಗೊಳ್ಳಲಿದೆ. ಒಮ್ಮೆಯಾದರೂ ಈ ದೇವಾಲಯಕ್ಕೆ ಹೋಗಿ ಶ್ರೀರಾಮನ ದರ್ಶನ ಮಾಡಿಬರಬೇಕು ಎನ್ನುವ ಕರ್ನಾಟಕದ ಮಂದಿಗೆ ರೈಲ್ವೆ ಸಚಿವಾಲಯವು ಸಿಹಿ ಸುದ್ದಿ ನೀಡಿದೆ.
ಅಯೋಧ್ಯೆಯಲ್ಲಿ ಮುಂದಿನ ವರ್ಷ ನೂತನ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ಶ್ರೀರಾಮ ಮಂದಿರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ದೇಶದಲ್ಲಿ ಹತ್ತು ಕೋಟಿ ಜನರಿಗೆ ಆಹ್ವಾನ ಪತ್ರಿಕೆ ಕಳಿಸಲಾಗಿದೆ. ಉತ್ತರ ಕರ್ನಾಟಕದ ಧಾರವಾಡದಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಈ ಕುರಿತು ಕೇಂದ್ರ ಗಣಿ-ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಧಾರವಾಡ ದಿಂದ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.
10 ಕೋಟಿ ಮಂದಿಗೆ ಆಹ್ವಾನ
ಭವ್ಯ ಇತಿಹಾಸ ಹೊಂದಿರುವ ಶ್ರೀರಾಮ ಮಂದಿರ ನಿರ್ಮಾಣವು ಹಿಂದೂಗಳ ಬಹುವರ್ಷಗಳ ಕನಸು, ಹೋರಾಟ ಫಲವಾಗಿದೆ. ಇಂಥ ರಾಮಮಂದಿರ ಉದ್ಘಾಟನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಒಟ್ಟು 10 ಕೋಟಿ ಜನರಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಲೋಕಸಭಾ ಕ್ಷೇತ್ರದಿಂದ ಅನೇಕರನ್ನು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿದ್ದಾರೆ. ಇದೇ ಕಾರಣಕ್ಕೆ ವಿಶೇಷ ರೈಲೊಂದನ್ನು ಧಾರವಾಡದಿಂದ ಬಿಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ರೈಲು ವ್ಯವಸ್ಥೆಗಾಗಿ ಇಲಾಖೆಗೆ ಮನವಿ
ಈ ಬಗ್ಗೆ ಈಗಾಗಲೇ ಕೇಂದ್ರ ಸಚಿರು ಆಪ್ತರು ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ರಾಮಮಂದಿರ ಎರಡು ದಿನ ಉದ್ಘಾಟನೆಗೂ ಮೊದಲು ಅಯೋಧ್ಯೆ ಮುಟ್ಟುವಂತೆ ರೈಲು ಸೇವೆ ನಿಯೋಜನೆಗೆ ಅವರು ಮನವಿ ಮಾಡಿದ್ದಾರೆ. ಉದ್ಘಾಟನೆಗೆ ಎರಡು ದಿನ ಮುಂಚೆ ಹೋಗೋ ಭಕ್ತರು ಅಲ್ಲಿನ ಸುತ್ತಮುತ್ತಲಿನ ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆಯಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕೆಂದು ಕೋರಲಾಗಿದೆ.
ಸುತ್ತಮುತ್ತಲಿನ ತಾಣ ವೀಕ್ಷಣೆ ಬಳಿಕ ಜನವರಿ 22 ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಬಹುದಾಗಿದೆ. ಇಂತದ್ದೊಂದು ರೈಲು ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ಅಧಿಕಾರಿಗಳು ಒಪ್ಪಿದರೆ ಸಹಕಾರಿಯಾಗಲಿದೆ.
ಈಗಾಗಲೇ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಲು ಸಿದ್ಧವಾಗಿರುವ ಸಾವಿರಾರು ಜನರಿಗೂ ಅನುಕೂಲವಾಗಲಿದೆ. ತಮ್ಮ ಸ್ವಂತ ಖರ್ಚಿನಲ್ಲಿ ಹೋಗಲು ಸಾಧ್ಯವಾಗದವರಿಗೆ ಕಡಿಮೆ ಬೆಲೆಯಲ್ಲಿ ರೈಲು ಮೂಲಕ ಅಯೋಧ್ಯೆಗೆ ತೆರಳಬಹುದಾಗಿದೆ ಎಂದು ಜೋಶಿ ಮತ್ತವರ ಆಪ್ತರು ಇಲಾಖೆಗೆ ಮನವಿ ಮಾಡಿದ್ದಾರೆ.












Click it and Unblock the Notifications