ಧರ್ಮಸ್ಥಳ: ಬ್ರಹ್ಮಕಲಶ ಉತ್ಸವದಿ ಓಂಕಾರ ಶಿವಸಹಸ್ರನಾಮ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಷ್ಟಬಂಧ ಹಾಗೂ ಬ್ರಹ್ಮಕಲಶ ಉತ್ಸವ ಪ್ರತಿ 12ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಉತ್ಸವವಾಗಿದೆ. ಈ ಬಾರಿ ಮಾರ್ಚ್ 12 ರಿಂದ 18 ರವರೆಗೆ ಬ್ರಹ್ಮ ಕಲಶ ಉತ್ಸವ ನಡೆಯುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಸೆಳೆಯಲಿವೆ.

ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾ ಭವನದಲ್ಲಿ ಶಿವಸಹಸ್ರನಾಮಾವಳಿ ಪಠಣ ಕಾರ್ಯಕ್ರಮ ನಡೆಯಿತು. ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಳದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 3000 ಭಕ್ತಾದಿಗಳು ಈ ಸಾಮೂಹಿಕ ಶಿವಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಏಕಕಾಲದಲ್ಲಿ ಶಿವನಾಮ ಸ್ಮರಣೆ ಮಾಡಿದರು. [ಗ್ಯಾಲರಿ: ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ]

ಈ ವೇಳೆ ಮಾತನಾಡಿದ ಧರ್ಮಾದಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಗವಂತನ ಅನುಗ್ರಹ ಸ್ವೀಕರಿಸಲು ನಮ್ಮ ಅಂತರಂಗ ಶುಭ್ರವಿರಬೇಕು. ಜೊತೆಗೆ ನಮ್ಮೂಳಗೆ ಒಳ್ಳೆಯ ಚಿಂತನಾ ಗುಣಗಳು ಎಚ್ಚರಗೊಳ್ಳಬೇಕು. ಆದ್ದರಿಂದ ಭಕ್ತರು ದೇವಸ್ಥಾನಕ್ಕೆ ಬರುವಾಗ ಆತ್ಮಶುದ್ಧಿಯಿಂದಿರಬೇಕು ಎಂದು ಹೇಳಿದರು. ಅಂತರಂಗ ಗರ್ಭಗುಡಿಯಲ್ಲಿ ಶ್ರದ್ಧೆಯಿಂದ ಬೇದ ಭಾವವಿಲ್ಲದೆ ಭಗವಂತನ ಸೇವೆಯನ್ನು ಮಾಡಬೇಕು ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು. ಚಿತ್ರಗಳು: ಜನನಿ ಹಾಗೂ ಸಂದೀಪ್ ದೇವ್, ಧರ್ಮಸ್ಥಳ.

ಧರ್ಮಸ್ಥಳದಲ್ಲಿ ಓಂಕಾರದ ಶಿವಸಹಸ್ರನಾಮ

ಧರ್ಮಸ್ಥಳದಲ್ಲಿ ಓಂಕಾರದ ಶಿವಸಹಸ್ರನಾಮ

ಸುಮಾರು 3000 ಭಕ್ತಾದಿಗಳು ಈ ಸಾಮೂಹಿಕ ಶಿವಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಏಕಕಾಲದಲ್ಲಿ ಶಿವನಾಮ ಸ್ಮರಣೆ ಮಾಡಿದರು.

ವೀರೇಂದ್ರ ಹೆಗ್ಗಡೆರಿಂದ ಭಕ್ತರಿಗೆ ಕಿವಿ ಮಾತು

ವೀರೇಂದ್ರ ಹೆಗ್ಗಡೆರಿಂದ ಭಕ್ತರಿಗೆ ಕಿವಿ ಮಾತು

ಈ ವೇಳೆ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭಗವಂತನ ಅನುಗ್ರಹ ಸ್ವೀಕರಿಸಲು ನಮ್ಮ ಅಂತರಂಗ ಶುಭ್ರವಿರಬೇಕು. ಜೊತೆಗೆ ನಮ್ಮೂಳಗೆ ಒಳ್ಳೆಯ ಚಿಂತನಾ ಗುಣಗಳು ಎಚ್ಚರಗೊಳ್ಳಬೇಕು ಆದ್ದರಿಂದ ಭಕ್ತರು ದೇವಸ್ಥಾನಕ್ಕೆ ಬರುವಾಗ ಆತ್ಮಶುದ್ಧಿಯಿಂದಿರಬೇಕು ಎಂದು ಹೇಳಿದರು.

ಭಗವಂತನ ಸೇವೆಯನ್ನು ಮಾಡಬೇಕು

ಭಗವಂತನ ಸೇವೆಯನ್ನು ಮಾಡಬೇಕು

ಅಂತರಂಗ ಗರ್ಭಗುಡಿಯಲ್ಲಿ ಶ್ರದ್ಧೆಯಿಂದ ಬೇದ ಭಾವವಿಲ್ಲದೆ ಭಗವಂತನ ಸೇವೆಯನ್ನು ಮಾಡಬೇಕು ಎಂದು ಭಕ್ತರಿಗೆ ಕಿವಿ ಮಾತು ಹೇಳಿದರು.

ಶಿವಸಹಸ್ರನಾಮಾವಳಿ ಉತ್ಸಾಹ

ಶಿವಸಹಸ್ರನಾಮಾವಳಿ ಉತ್ಸಾಹ

ಶಿವಸಹಸ್ರನಾಮಾವಳಿ ಬೆಳಗ್ಗೆ 6:45ಕ್ಕೆ ಗೋ ಪೂಜೆಯೊಂದಿಗೆ ಪ್ರಾರಂಭವಾಗಿ ಮುಂಜಾನೆ 8 ಗಂಟೆಗೆ ಮುಕ್ತಾಯಗೊಂಡಿತು.

ಸಾವಿರಾರು ಭಕ್ತರು ಪಾಲ್ಗೊಂಡಿದ್ದರು

ಸಾವಿರಾರು ಭಕ್ತರು ಪಾಲ್ಗೊಂಡಿದ್ದರು

ಮಕ್ಕಳು, ಮಹಿಳೆಯರು, ಪುರುಷರಾದಿಯಾಗಿ ಎಲ್ಲರೂ ಉತ್ಸಾಹದಿಂದ ಶಿವ ಧ್ಯಾನದಲ್ಲಿ ಮಗ್ನರಾದರು. ಮಹಿಳೆ, ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಧಾರ್ಮಿಕ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ

ಧಾರ್ಮಿಕ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ

ಧರ್ಮಸ್ಥಳದ ಧರ್ಮಾದಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿ, ಡಾ. ಹೆಗ್ಗಡೆಯವರ ಕುಟುಂಬವರ್ಗದವರು ಉಪಸ್ಥಿತರಿದ್ದರು.

ಶಿವ ಧ್ಯಾನದಲ್ಲಿ ಮಗ್ನ

ಶಿವ ಧ್ಯಾನದಲ್ಲಿ ಮಗ್ನ

ಮಕ್ಕಳು, ಮಹಿಳೆಯರು, ಪುರುಷರಾದಿಯಾಗಿ ಎಲ್ಲರೂ ಉತ್ಸಾಹದಿಂದ ಶಿವ ಧ್ಯಾನದಲ್ಲಿ ಮಗ್ನರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+